ಭಾರತೀಯ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ: 1,899 ಹುದ್ದೆಗಳಿಗೆ ಅರ್ಜಿ ಆಹ್ವಾನ.

India Post Recruitment: ದೇಶಾದ್ಯಂತ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ವೇತನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 1,899 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡಾ ಕೋಟದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಗ್ರೂಪ್​ ಸಿ ಹುದ್ದೆಗಳು ಇವಾಗಿದ್ದು, ದೇಶಾದ್ಯಂತ ಮಕಾತಿ ನಡೆಯಲಿದೆ. ಅಧಿಸೂಚನೆ

ಹುದ್ದೆಗಳೇನು?:

  • ಪೋಸ್ಟಲ್​ ಅಸಿಸ್ಟೆಂಟ್​- 598 ಹುದ್ದೆಗಳು
  • ಸೋರ್ಟಿಂಗ್​ ಅಸಿಸ್ಟೆಂಟ್-​ 143
  • ಪೋಸ್ಟಮ್ಯಾನ್​- 585
  • ಮೇಲ್​ ಗಾರ್ಡ್-​​​ 3
  • ಮಲ್ಟಿ ಟಾಸ್ಕಿಂಗ್​ ಸ್ಟಾಫ್-​ 570

ವಿದ್ಯಾರ್ಹತೆ: ಪೋಸ್ಟಲ್​ ಅಸಿಸ್ಟೆಂಟ್​​ ಮತ್ತು ಸೋರ್ಟಿಂಗ್​ ಅಸಿಸ್ಟೆಂಟ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಶಿಕ್ಷಣ ಪೂರ್ಣಗೊಳಿಸಿರಬೇಕು. ಪೋಸ್ಟ್​​ ಮ್ಯಾನ್​, ಮೆಲ್​ ಗಾರ್ಡ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಶಿಕ್ಷಣ ಪಡೆದಿರಬೇಕು.

ವಯೋಮಿತಿ: ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಹೊರತುಪಡಿಸಿ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕು. ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 25 ವರ್ಷ ಪೂರ್ಣಗೊಳಿಸಿರಬೇಕು.

ವೇತನ: ಪೋಸ್ಟಲ್​ ಅಸಿಸ್ಟೆಂಟ್​​ ಮತ್ತು ಸೋರ್ಟಿಂಗ್​ ಅಸಿಸ್ಟೆಂಟ್​ ಹುದ್ದೆಗೆ- ₹25,500 ದಿಂದ ₹81,100 ರೂ, ಪೋಸ್ಟ್​​ ಮ್ಯಾನ್​, ಮೆಲ್​ ಗಾರ್ಡ್​ ಹುದ್ದೆಗೆ 21,700 ದಿಂದ 69,100 ರೂ, ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗೆ 18,000 ದಿಂದ 56,900ರವರೆಗೆ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಭರಿಸಬೇಕು.

ಆಯ್ಕೆ ಪ್ರಕ್ರಿಯೆ: ಮೆರಿಟ್​ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ. ನವೆಂಬರ್​ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್​ 9 ಕಡೇಯ ದಿನಾಂಕ. ಈ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indiapost.gov.in ಇಲ್ಲಿಗೆ ಅರ್ಜಿ ಸಲ್ಲಿಸಬಹುದು.

Source : https://m.dailyhunt.in/news/india/kannada/etvbhar9348944527258-epaper-etvbhkn/bhaaratiya+anche+ilaakheyallide+udyogaavakaasha+1+899+huddegalige+arji+aahvaana-newsid-n555365106?listname=newspaperLanding&topic=homenews&index=4&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *