
ಬೆಂಗಳೂರು: ಪಿಎಸ್ಐ ಮರು ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ (PSI Recruitment) ಮರು ಪರೀಕ್ಷೆಯ ಸರ್ಕಾರ ನೀಡಿದ ಆದೇಶವನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ (Karnataka High Court) ಮೊರೆ ಹೋಗಿದ್ದರು. ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಪೀಠ ಅದೇಶ ನೀಡಿದೆ. ಅಕ್ಟೋಬರ್ 26ಕ್ಕೆ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಮರುಪರೀಕ್ಷೆಗೆ ಬಿಜೆಪಿ ಸರ್ಕಾರ (BJP Government) 2022 ಏಪ್ರಿಲ್ 29 ರಂದು ಆದೇಶ ನೀಡಿತ್ತು. ಈ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು KAT ಅರ್ಜಿ ಸಲ್ಲಿಸಿದ್ರು. KAT ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ವಜಾಗೊಳಿಸಿತ್ತು. ಬಳಿಕ ಅಭ್ಯರ್ಥಿಗಳು ಮೇಲ್ಮನವಿ ಅರ್ಜಿಯನ್ನ ಹೈ ಕೋರ್ಟ್ ನಲ್ಲಿ ಸಲ್ಲಿಸಿದ್ದರು.
ಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಹೈಲೈಟ್ಸ್
2021, ಜನವರಿ 21 – ಕರ್ನಾಟಕ ಪೊಲೀಸ್ ಇಲಾಖೆಯಿಂದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕಟ
2021, ಅಕ್ಟೋಬರ್ 3- ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿಯ ಲಿಖಿತ ಪರೀಕ್ಷೆ
2022, ಜನವರಿ 1 – ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿ ಅಕ್ರಮದ ಬಗ್ಗೆ ಅಭ್ಯರ್ಥಿಗಳಿಂದ ದೂರು
2022, ಜನವರಿ 18 – 545 ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
2022, ಫೆಬ್ರವರಿ 7 – ತಾತ್ಕಾಲಿಕ ಆಯ್ಕೆ ಪಟ್ಟಿ ತಡೆಗೆ ನೇಮಕಾತಿ ವಿಭಾಗದ ಎಡಿಐಜಿ ಸೂಚನೆ
2022, ಏಪ್ರಿಲ್ 7 – ರಾಜ್ಯ ಸರ್ಕಾರದಿಂದ ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ಸಿಐಡಿಗೆ
2022, ಏಪ್ರಿಲ್ 8 – ಕಲಬುರಗಿ ನಗರ ಪೊಲೀಸ್ ಠಾಣೆಗೆ ಬೆಂಗಳೂರು ಸಿಐಡಿ, ಎಫ್‌ಐಯು ಇನ್‌ಸ್ಪೆಕ್ಟರ್ ಕೆ.ಎಚ್ ದಿಲೀಪ್ ಕುಮಾರ್ ದೂರು
2022, ಏಪ್ರಿಲ್ 9 – ಆರೋಪಿಗಳ ವಿರುದ್ಧ ಕಲಬುರ್ಗಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು.
2022, ಏಪ್ರಿಲ್ 9 – ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ವೀರೇಶ್ ನನ್ನು ಮೊದಲು ಬಂಧಿಸಲಾಯಿತು.
2022, ಏಪ್ರಿಲ್ 21- ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ ಐವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧನ.
2022, ಏಪ್ರಿಲ್ 22 – ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಬಂಧನ.
2022, ಏಪ್ರಿಲ್ 27 – ಪೊಲೀಸ್ ನೇಮಕಾತಿ ವಿಭಾಗದ ಎಜಿಡಿಪಿ ಅಮೃತ್ ಪೌಲ್ ವರ್ಗಾವಣೆ.
2022, ಏಪ್ರಿಲ್ 29 – ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಗೆ ನಿರ್ಧರಿಸಿದ ಸರ್ಕಾರ.
2022, ಏಪ್ರಿಲ್ 30 – ಮರು ಪರೀಕ್ಷೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಪ್ರತಿಭಟನೆ.
2022, ಮೇ 1 – 400ಕ್ಕೂ ಹೆಚ್ಚು ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ.
2022, ಮೇ 10 – ನೇಮಕಾತಿ ವಿಭಾಗದಲ್ಲಿ ನಾಲ್ವರು ಅಧಿಕಾರಿಗಳು ಸೇರಿ 6 ಮಂದಿ ಬಂಧನ.
2022, ಮೇ 12 – ನೇಮಕಾತಿ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಶಾಂತಕುಮಾರ್ ಬಂಧನ.
2022, ಮೇ 26 & 27 – ಸಿಐಡಿ ಅಧಿಕಾರಿಗಳಿಂದ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವಿಚಾರಣೆ.
2022, ಜೂನ್ 1 – ಸಿಐಡಿ ಅಧಿಕಾರಿಗಳಿಂದ ಆರ್‌ಡಿ ಪಾಟೀಲ್ ಅಳಿಯ ಪ್ರಕಾಶ್ ಸೇರಿ ಮೂವರ ಬಂಧನ.
2022, ಜುಲೈ 4 – ಸಿಐಡಿ ಅಧಿಕಾರಿಗಳಿಂ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಬಂಧನ.
2022 , ಜುಲೈ ,27 ಒಂದನೇ ಎಸಿಎಂಎಂ ಕೋರ್ಟ್ ಗೆ 3065 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1