ರಾಜ್ಯ ಸರ್ಕಾರಕ್ಕೆ ಇಂಧನ ಇಲಾಖೆ ಸಲ್ಲಿಸಿರುವ ಪ್ರಸ್ತಾಪದ ಪ್ರಕಾರ ಪ್ರತಿ ಯುನಿಟ್ ಗೆ 85 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ನಲ್ಲಿ ಯೂನಿಟ್ ಗೆ 85 ಪೈಸೆ ಹೆಚ್ಚಳ ಮಾಡಿದೆ. ಜೊತೆಗೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ 35 ಪೈಸೆ ವಿಧಿಸಲಾಗಿದೆ.

ಬೆಂಗಳೂರು: ಇಂಧನ ಇಲಾಖೆ ಮತ್ತೆ ವಿದ್ಯುತ್ ಬೆಲೆ ಏರಿಕೆ ಮಾಡಿದೆ. ಗೃಹಜ್ಯೋತಿ ಯೋಜನೆ ಜಾರಿಯಾದ ಬಳಿಕ ಇಂಧನ ಬಳಕೆ ಹೆಚ್ಚಾಗಿದ್ದು ಇಂಧನ ಹೊಂದಾಣಿಕೆ ವೆಚ್ಚ ಸರಿದೂಗಿಸಲು ವಿದ್ಯುತ್ ಬೆಲೆ ಏರಿಸುವ ಪ್ರಸ್ತಾವ ಇಂಧನ ಇಲಾಖೆ ಮಾಡಿತ್ತು. ಅದರ ಆಧಾರದ ಮೇಲೆ ವಿದ್ಯುತ್ ಬೆಲೆ ಏರಿಕೆ ಮಾಡಿದೆ.
ರಾಜ್ಯ ಸರ್ಕಾರಕ್ಕೆ ಇಂಧನ ಇಲಾಖೆ ಸಲ್ಲಿಸಿರುವ ಪ್ರಸ್ತಾಪದ ಪ್ರಕಾರ ಪ್ರತಿ ಯುನಿಟ್ ಗೆ 85 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ನಲ್ಲಿ ಯೂನಿಟ್ ಗೆ 85 ಪೈಸೆ ಹೆಚ್ಚಳ ಮಾಡಿದೆ. ಜೊತೆಗೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ 35 ಪೈಸೆ ವಿಧಿಸಲಾಗಿದೆ.
ಕಳೆದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ ಹೆಚ್ಚಳ ಮಾಡಲಾಗಿದ್ದ 50 ಪೈಸೆ ಶುಲ್ಕದೊಂದಿಗೆ ನವೆಂಬರ್ ತಿಂಗಳಿಗೆ ಸೀಮಿತವಾಗಿ 35 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಶುಲ್ಕದ ಜೊತೆಗೆ ಡಿಸೆಂಬರ್ ಬಿಲ್ ನಲ್ಲಿ ಜಾರಿಗೆ ಬರುವಂತೆ ನವೆಂಬರ್ ತಿಂಗಳ ಬಳಕೆಯ ವಿದ್ಯುತ್ ಮೇಲೆ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿಯಾಗಿ ಇಂಧನ ಹೊಂದಾಣಿಕೆ ವೆಚ್ಚ ನಿಗದಿ ಮಾಡಿದೆ.
ಹೀಗಾಗಿ ಪ್ರತಿ ಯೂನಿಟ್ ಗೆ ಹೆಚ್ಚುವರಿಯಾಗಿ 85 ಪೈಸೆ ಶುಲ್ಕ ನವೆಂಬರ್ ತಿಂಗಳ ವಿದ್ಯುತ್ ಬಳಕೆಗೆ ವಸೂಲಿ ಮಾಡಲಾಗುವುದು. ಅಕ್ಟೋಬರ್ ತಿಂಗಳ ಬಳಕೆಗೆ 1.01 ರೂಪಾಯಿ ನಿಗದಿ ಮಾಡಲಾಗಿತ್ತು. ವಿದ್ಯುತ್ ಕೊರತೆಯ ಕಾರಣ ಖರೀದಿ ಪ್ರಮಾಣ ಹೆಚ್ಚಾಗಿದ್ದರಿಂದ ಇಂಧನ ಹೊಂದಾಣಿಕೆ ವೆಚ್ಚ ಹೆಚ್ಚಾಗುವ ಆತಂಕ ಉಂಟಾಗಿತ್ತು. ಆದರೆ ಕಳೆದ ತಿಂಗಳು ಎಫ್‌ಎಸಿಗಿಂತ 0.16 ಪೈಸೆ ಕಡಿಮೆ ಆಗಿದೆ.
ನವೆಂಬರ್ ತಿಂಗಳ ವಿದ್ಯುತ್ ಬಳಕೆಯ ಮೇಲೆ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಲು ಮುಂದಾಗಿದೆ ಎಂಬುದಾಗಿ ಇಂಧನ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1