IND vs AUS Final : ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಆದರೆ ಭಾರತದ ಆಟಗಾರರು ಯಾವುದೇ ಸಂದರ್ಭದಲ್ಲೂ ಫೈನಲ್‌ನಲ್ಲಿ ಈ ತಪ್ಪುಗಳನ್ನು ಮಾಡಬಾರದು.
- ವಿಶ್ವಕಪ್ 2023 ರ ಫೈನಲ್ ಪಂದ್ಯ
- ಆಸ್ಟ್ರೇಲಿಯವನ್ನು ಎದುರಿಸಲಿರುವ ಟೀಮ್ ಇಂಡಿಯಾ
- ಈ ತಪ್ಪುಗಳನ್ನು ಮಾಡದಿದ್ದರೆ ಗೆಲುವು ಖಚಿತ

IND vs AUS World Cup 2023 Final : ವಿಶ್ವಕಪ್ 2023 ರ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿ ಟೀಂ ಇಂಡಿಯಾ ಮೂರನೇ ಬಾರಿ ವಿಶ್ವಕಪ್ ಗೆಲ್ಲಲಿ ಎಂದು ಅನೇಕ ಜನರು ಪ್ರಾರ್ಥಿಸುತ್ತಿದ್ದಾರೆ. 2003 ರ ವಿಶ್ವಕಪ್‌ನ ಅಂತಿಮ ಕದನ ಮತ್ತೊಮ್ಮೆ ಮರುಕಳಿಸುತ್ತಿದೆ. ಆ ಪಂದ್ಯದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಬಯಸಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ಭಾರತವನ್ನು 125 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆದರೆ ಆ ಸೋಲಿನಿಂದ ಭಾರತ ಚೇತರಿಸಿಕೊಂಡು ಬಲಿಷ್ಠ ತಂಡವಾಯಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್ ತಲುಪಿದೆ.
2003ರ ವಿಶ್ವಕಪ್ ಫೈನಲ್‌ನಲ್ಲಿನ ತಪ್ಪುಗಳನ್ನು ಪುನರಾವರ್ತಿಸದಿದ್ದರೆ ವಿಶ್ವಕಪ್ ನಮ್ಮದೇ. ಆ ಪಂದ್ಯದಲ್ಲಿ ಸೌರವ್ ಗಂಗೂಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಆಸೀಸ್ ಬ್ಯಾಟ್ಸ್‌ಮನ್‌ಗಳು ಅದ್ಭುತ ಸ್ಕೋರ್ ಮಾಡಿದರು. ಈ ಬಾರಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದರೆ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಸೂಕ್ತವಾಗಿದೆ. ಗುರಿ 300ಕ್ಕಿಂತ ಹೆಚ್ಚಾದರೆ ಚೇಸಿಂಗ್ ನಲ್ಲಿ ಆಸೀಸ್ ಗೆ ಕಷ್ಟವಾಗಲಿದೆ. ಆಸ್ಟ್ರೇಲಿಯಾದ ಪ್ರಮುಖ ಶಕ್ತಿ ಎಂದರೆ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್. ಇಬ್ಬರನ್ನೂ ಆದಷ್ಟು ಬೇಗ ಪೆವಿಲಿಯನ್ ಗೆ ಕಳುಹಿಸಿದರೆ ಯಶಸ್ಸಿನ ಸಾಧ್ಯತೆ ಹೆಚ್ಚಲಿದೆ. ಆಸೀಸ್ ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆಯ ಕೊರತೆಯಿದೆ.
ಇದಲ್ಲದೇ ಭಾರತ ತಂಡ ಫೀಲ್ಡಿಂಗ್‌ನಲ್ಲಿಯೂ ಯಾವುದೇ ತಪ್ಪು ಮಾಡಬಾರದು. ಆಸ್ಟ್ರೇಲಿಯದಂತಹ ತಂಡಕ್ಕೆ ಫೀಲ್ಡಿಂಗ್ ಸಡಿಲವಾದರೆ ಮ್ಯಾಚ್ ಕೈ ತಪ್ಪಿದಂತೆಯೇ ಸರಿ. ಮ್ಯಾಕ್ಸ್ ವೆಲ್ ಅಫ್ಘಾನಿಸ್ತಾನ ವಿರುದ್ಧ ದ್ವಿಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಲವು ಕ್ಯಾಚ್‌ಗಳನ್ನು ಕೈಬಿಟ್ಟಿದ್ದೇ ಇದಕ್ಕೆ ಕಾರಣವಾಯ್ತು. ಭಾರತ ತನ್ನ ಫೀಲ್ಡಿಂಗ್‌ನಲ್ಲಿ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಕಣಕ್ಕೆ ಇಳಿಯಬೇಕಾಗಿದೆ.
ನಾಯಕ ರೋಹಿತ್ ಶರ್ಮಾ ಇದೇ ಆಕ್ರಮಣಕಾರಿ ಆಟ ಮುಂದುವರಿಸಿ ಉತ್ತಮ ಆರಂಭ ನೀಡಿದರೆ ಭಾರತ ದೊಡ್ಡ ಮೊತ್ತ ಗಳಿಸುವುದು ಖಚಿತ. ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಎಲ್ಲರೂ ಉತ್ತಮ ಆಟ ಆಡಬೇಕು. ಸೂರ್ಯಕುಮಾರ್ ಯಾದವ್ ಮತ್ತು ರವೀಂದ್ರ ಜಡೇಜಾಗೆ ಹೆಚ್ಚು ಬ್ಯಾಟಿಂಗ್ ಅವಕಾಶ ಸಿಗದಿದ್ದರೂ ಪವರ್ ಹಿಟ್ಟಿಂಗ್ ಗೆ ಸಜ್ಜಾಗಿದ್ದಾರೆ. ಬೌಲಿಂಗ್‌ನಲ್ಲಿ ಶಮಿ ಜೊತೆಗೆ ಬುಮ್ರಾ, ಸಿರಾಜ್ ಮತ್ತು ಕುಲದೀಪ್ ಕೂಡ ಪವರ್ ಫುಲ್ ಬೌಲಿಂಗ್ ಮಾಡಿದರೆ, ವಿಶ್ವಕಪ್‌ಗೆ ಭಾರತ ತಂಡ ಮುತ್ತಿಕ್ಕುವುದು ಖಚಿತ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1