New Rules: ಬರಲಿದೆ ಅತ್ಯಾಧುನಿಕ DL, RC ಸ್ಮಾರ್ಟ್‌ ಕಾರ್ಡ್! ವಾಹನ ಸವಾರರೇ ಮಿಸ್ ಮಾಡ್ದೇ ತಿಳಿದಿರಿ

ಅಕ್ಟೋಬರ್‌ನಲ್ಲಿ, ರಾಜ್ಯದಲ್ಲಿ ಸರಾಸರಿ 5,000 ವಾಹನಗಳು ನೋಂದಣಿಯಾಗಿದ್ದು, 4,000 ಕ್ಕೂ ಹೆಚ್ಚು ಡಿಎಲ್‌ಗಳನ್ನು ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಚಿಪ್ ಮತ್ತು ಕ್ಯೂಆರ್ ಕೋಡ್ ಹೊಂದಿರುವ ಅತ್ಯಾಧುನಿಕ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರದ ಸ್ಮಾರ್ಟ್ ಕಾರ್ಡ್‌ಗಳನ್ನು ಪರಿಚಯಿಸಲು ಸಾರಿಗೆ ಇಲಾಖೆ (Transport Department) ಸಿದ್ಧತೆ ನಡೆಸಿದೆ. ಕಳೆದ 15 ವರ್ಷಗಳಿಂದ ಚಿಪ್‌ಗಳ ಸ್ಮಾರ್ಟ್ ಕಾರ್ಡ್‌ಗಳನ್ನು (Smart Card) ಪೂರೈಸುತ್ತಿರುವ ಸಂಸ್ಥೆಯ ಜೊತೆ ಫೆಬ್ರವರಿ 2024 ರಲ್ಲಿ ಸಾರಿಗೆ ಇಲಾಖೆಯ ಒಪ್ಪಂದ ಮುಕ್ತಾಯಗೊಳ್ಳಲಿದೆ.

DL ನ ಮುಂಭಾಗವು ಕಾರ್ಡ್ ಹೊಂದಿರುವವರ ಹೆಸರು, ಸಿಂಧುತ್ವ, ಜನ್ಮ ದಿನಾಂಕ, ರಕ್ತದ ಗುಂಪು, ವಿಳಾಸಗಳು ಮತ್ತು ಫೋಟೋ ಹೊಂದಿರಲಿದೆ. ಜೊತೆಗೆ ಸ್ಮಾರ್ಟ್ ಚಿಪ್ ಅನ್ನು ಸೇರಿಸಲಾಗುತ್ತದೆ. ಹಿಂಭಾಗದಲ್ಲಿ QR ಕೋಡ್ ಜೊತೆಗೆ ವಾಹನದ ಪ್ರಕಾರ ಮತ್ತು ತುರ್ತು ಸಂಪರ್ಕ ಸಂಖ್ಯೆಗಳಂತಹ ವಿವರಗಳನ್ನು ಮುದ್ರಿಸಲಾಗುತ್ತದೆ.

ಈ ವಿವರಗಳು ಇರುತ್ತೆ
RC ಯ ಮುಂಭಾಗದ ಭಾಗವು ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾನ್ಯತೆ, ಚಾಸಿಸ್ ಮತ್ತು ಎಂಜಿನ್ ಸಂಖ್ಯೆಗಳು, ಮಾಲೀಕರ ವಿವರಗಳು ಮತ್ತು ವಿಳಾಸದಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. RC ಹಿಂಭಾಗವು ವಾಹನ ತಯಾರಕರ ಹೆಸರು, ಮಾದರಿ, ದೇಹದ ಪ್ರಕಾರ, ಆಸನ ಸಾಮರ್ಥ್ಯ, ಹಣಕಾಸಿನ ವಿವರಗಳು ಮತ್ತು QR ಕೋಡ್‌ನಂತಹ ಹೆಚ್ಚುವರಿ ವಿವರಗಳನ್ನು ಒಳಗೊಂಡಿರುತ್ತದೆ.

QR ಕೋಡ್ ವೈಶಿಷ್ಟ್ಯ
QR ಕೋಡ್ ವೈಶಿಷ್ಟ್ಯವು ಕಾರ್ಡ್-ಹೋಲ್ಡರ್ ವಿವರಗಳನ್ನು ಪರಿಶೀಲಿಸಲು ಜಾರಿ ಅಧಿಕಾರಿಗಳಿಗೆ ಅನುಮತಿ ನೀಡುತ್ತದೆ. ಕರ್ನಾಟಕದಲ್ಲಿ ನೋಂದಾಯಿಸಲ್ಪಡುವ ಹೊಸ ವಾಹನಗಳು ಮತ್ತು ಹೊಸ ಡಿಎಲ್‌ಗಳಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಹೊಸ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾಗಿ “ಟೈಮ್ಸ್ ಆಫ್ ಇಂಡಿಯಾ”ವರದಿ ತಿಳಿಸಿದೆ.

ಅಕ್ಟೋಬರ್‌ನಲ್ಲಿ, ರಾಜ್ಯದಲ್ಲಿ ಸರಾಸರಿ 5,000 ವಾಹನಗಳು ನೋಂದಣಿಯಾಗಿದ್ದು, 4,000 ಕ್ಕೂ ಹೆಚ್ಚು ಡಿಎಲ್‌ಗಳನ್ನು ನೀಡಲಾಗಿದೆ. ಪ್ರಸ್ತುತ ಒಪ್ಪಂದ ಮುಗಿಯುವ ಮುನ್ನವೇ ಸೇವಾದಾರರನ್ನು ಆಯ್ಕೆ ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸಾರಿಗೆ ಇಲಾಖೆಗೆ ಸರ್ಕಾರ ಸೂಚಿಸಿದೆ.

Source : https://kannada.news18.com/news/bengaluru-urban/transport-department-ready-to-introduce-smart-dl-and-rc-1452060.html

Leave a Reply

Your email address will not be published. Required fields are marked *