Mohammed Shami Saves Man Life: ಮೊಹಮ್ಮದ್ ಶಮಿ ಈ ಅಪಘಾತದ ಸಂಪೂರ್ಣ ವಿವರ ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳಲ್ಲಿ ಕಾರು ಪಲ್ಟಿಯಾಗಿ ಬಿದ್ದಿರುವುದು ಗೋಚರಿಸುತ್ತದೆ.

Mohammed Shami Saves Man Life: ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲೇ ಮತ್ತೊಂದು ಕಾರು ಅಪಘಾತಕ್ಕೀಡಾಗಿದೆ. ನೈನಿತಾಲ್’ನ ಹಿಲ್ ರೋಡ್’ನಲ್ಲಿ ಈ ದುರ್ಘಟನೆ ನಡೆದಿದ್ದು, ತಕ್ಷಣವೇ ಎಚ್ಚೆತ್ತ ಶಮಿ, ಗಾಯಾಳುಗಳ ಜೀವ ಉಳಿಸಿದ್ದಾರೆ.
ಮೊಹಮ್ಮದ್ ಶಮಿ ಈ ಅಪಘಾತದ ಸಂಪೂರ್ಣ ವಿವರ ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳಲ್ಲಿ ಕಾರು ಪಲ್ಟಿಯಾಗಿ ಬಿದ್ದಿರುವುದು ಗೋಚರಿಸುತ್ತದೆ.
ಈ ವಿಡಿಯೋ ಹಂಚಿಕೊಂಡು ಹೀಗೆಂದು ಶಮಿ ಬರೆದುಕೊಂಡಿದ್ದಾರೆ; -“ಈ ವ್ಯಕ್ಯಿ ಅದೃಷ್ಟಶಾಲಿ. ದೇವರು ಅವನಿಗೆ ಮರುಜನ್ಮ ಕೊಟ್ಟಿದ್ದಾನೆ. ನೈನಿತಾಲ್’ನ ಬೆಟ್ಟದ ರಸ್ತೆಯಲ್ಲಿ ಚಲಿಸುವಾಗ ನನ್ನ ಕಾರಿನ ಮುಂಭಾಗದಲ್ಲಿ ಅವರ ಕಾರು ಪಲ್ಟಿಯಾಗಿ ಬೆಟ್ಟದಿಂದ ಕೆಳಗೆ ಬಿದ್ದಿತು. ನಾವು ಅವತನ್ನು ಸುರಕ್ಷಿತವಾಗಿ ಹೊರತೆಗೆದಿದ್ದೇವೆ” ಎಂದಿದ್ದಾರೆ.
ಶಮಿ ಶೇರ್ ಮಾಡಿರುವ ವಿಡಿಯೊದಲ್ಲಿ ಗಾಯಾಳುವಿನ ಆರೈಕೆ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕಂಡ ಫ್ಯಾನ್ಸ್, “ದೇವರಂತೆ ಬಂದು ಆತನನ್ನು ಕಾಪಾಡಿದ್ದೀರಿ ಸರ್” ಎಂದು ಕಮೆಂಟ್ ಮಾಡಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1