ಡಿಸೆಂಬರ್ 2ರಂದು ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ ಕಾರ್ಯಕ್ರಮ ನಡೆಯಲಿದೆ.

ಮೈಸೂರು: ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಡಿಸೆಂಬರ್ 2 ರಂದು ಐಟಿಐ ಅಭ್ಯರ್ಥಿಗಳಿಗೆ (ITI Candidates) ಉದ್ಯೋಗಳ ಮೇಳವನ್ನು ಮೈಸೂರು ನಗರದ ಎನ್.ಆರ್ ಮೊಹಲ್ಲಾದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಡಿಸೆಂಬರ್ 2ರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಉದ್ಯೋಗ ಮೇಳದಲ್ಲಿ (Job Fair) ಭಾಗವಹಿಸಿ ಸಂದರ್ಶನ ನೀಡಬಹುದಾಗಿದೆ.
ಯಾವ ಕಂಪೆನಿಯಿಂದ ಆಯ್ಕೆ?
ಈ ಉದ್ಯೋಗ ಮೇಳವು ಐಟಿಐ ವಿಭಾಗದ ಫಿಟ್ಟರ್ ನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಕಲರ್‌ಟೋನ್ ಪ್ರೈವೇಟ್ ಲಿಮಿಟೆಡ್ ಈ ನೇಮಕಾತಿಯನ್ನು ಮಾಡಿಕೊಳ್ಳಲಿದೆ. ಉದ್ಯೋಗ ಮೇಳ ಸ್ಥಳದಲ್ಲೇ ನೇಮಕಾತಿ ನಡೆಯಲಿದ್ದು, ಖಾಯಂ ಹುದ್ದೆಗಳಿಗಾಗಿ ಆಯ್ಕೆ ಮಾಡಲಿದೆ.
ವಯೋಮತಿ
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು 18 ವರ್ಷದಿಂದ 27 ವರ್ಷ ವಯೋಮಿತಿಯ ಒಳಗಿನವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ,ವಸತಿ,ಪ್ರಯಾಣ ಭತ್ಯೆ ಸೇರಿ 13,000 ದಿಂದ 16,000 ರೂಪಾಯಿವರೆಗೆ ವೇತನ ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರ ದೂರವಾಣಿ ಸಂಖ್ಯೆ 0821-2489972 ಸಂಪರ್ಕಿಸಬಹುದಾಗಿದೆ.