ಕಾಡಾನೆ ಜೊತೆ ಕಾಳಗದಲ್ಲಿ ಪ್ರಾಣ‌ಬಿಟ್ಟ ‘ಅರ್ಜುನ’.. ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ಗಜರಾಯ!

Arjuna elephant Death News: ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

  • ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ
  • ಕಾಡಾನೆ ದಾಳಿಗೆ ಪ್ರಾಣ ಬಿಟ್ಟ ‘ಅರ್ಜುನ’
  • ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆ

ಹಾಸನ : ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆ ದಾಳಿಗೆ ಪ್ರಾಣ ಬಿಟ್ಟಿದೆ. ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು ನಾಲ್ಕು ಸಾಕಾನೆಗಳೊಂದಿಗೆ   ಅರಣ್ಯ ಇಲಾಖೆ ಸಿಬ್ಬಂದಿ ಹಾಗು ವೈದ್ಯರು  ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯನ್ನು ಸೆರೆಹಿಡಿಯಲು  ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಿಢೀರ್ ದಾಳಿ ಮಾಡಿದೆ. 

ಒಂಟಿಸಲಗ ದಾಳಿ ಮಾಡುತ್ತಿದ್ದಂತೆ  ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಈ ವೇಳೆ ಒಂಟಿಸಲಗದ ಜೊತೆ ಅರ್ಜುನ  ಕಾಳಗಕ್ಕೆ ಇಳಿದಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ನಿಯಂತ್ರಿಸಲಾಗದೆ ಮಾವುತ ಇಳಿದು ಓಡಿದ್ದಾನೆ.  ಕಾಳಗದಲ್ಲಿ ಅರ್ಜುನ ದಾರುಣವಾಗಿ ಸಾವನ್ನಪ್ಪಿದೆ.

ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅರ್ಜುನ, ಸೌಮ್ಯ ಸ್ವಾಭಾವದಿದಲೇ ಎಲ್ಲರ ಪ್ರೀತಿ ಗಳಿಸಿದ್ದ. ಅರ್ಜುನನ ಸಾವು ದುಃಖ ತರಿಸಿದೆ.

Source: https://zeenews.india.com/kannada/karnataka/arjuna-elephant-carrying-the-ambari-of-mysore-dasara-died-174701

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *