ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡುವುದರಿಂದ ಇವೆಯಂತೆ ಅನೇಕ ಪ್ರಯೋಜನಗಳು!

ಮೊದಲೆಲ್ಲಾ ಬೇಸಿಗೆ ರಜೆ (Summer Holidays) ಬಂತು ಅಂತ ಹಳ್ಳಿಯಲ್ಲಿರುವ ಅಜ್ಜ-ಅಜ್ಜಿ ಮನೆಗೆ ಹೋದಾಗ ನಾವು ಅಲ್ಲಿ ಒಲೆಯ ಮೇಲೆ ಮಣ್ಣಿನ ಮಡಕೆಗಳನ್ನು ಇಟ್ಟು, ಅದರಲ್ಲಿ ಅಡುಗೆ (Cooking) ಮಾಡಿರುವುದನ್ನು ತುಂಬಾ ಸಲ ನೋಡಿರುತ್ತೇವೆ. ಅಷ್ಟೇ ಅಲ್ಲದೆ, ಅದರಲ್ಲಿ ಮಾಡಿದ ಅಡುಗೆಯ ರುಚಿಯ ಬಗ್ಗೆ ಸಹ ಬಾಯಿ ತುಂಬಾ ಹೊಗಳಿರುತ್ತೇವೆ. ಹೌದು.. ಮಣ್ಣಿನ ಮಡಕೆಗಳಲ್ಲಿ (Clay Pot) ಮಾಡಿದ ಆಹಾರ ಪದಾರ್ಥದ ರುಚಿಯೇ ಬೇರೆಯಾಗಿರುತ್ತದೆ.

ಮಣ್ಣಿನ ಮಡಕೆಗಳಲ್ಲಿ ಮಾಡಿದ ಆಹಾರ ತುಂಬಾನೇ ರುಚಿಯಾಗಿರುತ್ತದೆ..

ಈಗಲೂ ಸಹ ಕೆಲವು ಹೊಟೇಲ್‌ಗಳಲ್ಲಿ ಹೋದರೆ, ಅಲ್ಲಿ ಮಡಿಕೆಯಲ್ಲಿ ಮಾಡಿದ ಪುಲಾವ್, ಬಿರಿಯಾನಿ ಮತ್ತು ಕೆಲವು ಬಗೆಯ ಪಲ್ಯಗಳು ತಿನ್ನಲು ಸಿಗುತ್ತವೆ.

ಬೇರೆ ರೀತಿಯ ಲೋಹದ ಪಾತ್ರೆಗಳಲ್ಲಿ ಬೇಯಿಸಿದ ಆಹಾರಕ್ಕಿಂತ ಮಣ್ಣಿನ ಮಡಕೆಯಲ್ಲಿ ಬೇಯಿಸಿದ ಆಹಾರವು ತುಂಬಾ ರುಚಿಯಾಗಿರುತ್ತದೆ. ಪ್ರಾಚೀನ ಕಾಲದಲ್ಲಿ ಮಣ್ಣಿನ ಮಡಕೆಗಳು ಅಡುಗೆಮನೆಯ ಅವಿಭಾಜ್ಯ ಅಂಗವಾಗಿದ್ದವು, ಜನರು ತಮ್ಮ ಎಲ್ಲಾ ಪೋಷಕಾಂಶಗಳು ಮತ್ತು ರುಚಿಗಳನ್ನು ಉಳಿಸಿಕೊಳ್ಳಲು ತಮ್ಮ ಊಟವನ್ನು ನಿಧಾನವಾಗಿ ಬೇಯಿಸಿಕೊಳ್ಳುತ್ತಿದ್ದರು.

ಇಂದಿನ ಕಾಲದಲ್ಲಿ ಎಲ್ಲರೂ ಬ್ಯುಸಿಯಾಗಿರುವಾಗ ತ್ವರಿತ ಆಹಾರ ಪದಾರ್ಥಗಳತ್ತ ವೇಗವಾಗಿ ಬದಲಾಗುತ್ತಿದ್ದಾರೆ, ಮಡಿಕೆಗಳಲ್ಲಿ ಅಡುಗೆ ಮಾಡುವ ಕಲೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ.

ಸುರಾಹಿ ಎಂದೂ ಕರೆಯಲ್ಪಡುವ ಮಣ್ಣಿನ ಮಡಕೆಗಳು ಅಥವಾ ಹಂಡಿಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ. ಮಣ್ಣಿನ ಮಡಕೆಗಳು ಆಹಾರಕ್ಕೆ ವಿಶಿಷ್ಟವಾದ ಪರಿಮಳವನ್ನು ನೀಡುವುದು ಮಾತ್ರವಲ್ಲದೆ, ಆಯುರ್ವೇದವು ಇದರಿಂದ ಆಗುವ ಅನೇಕ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಸಿದೆ ನೋಡಿ.

ಮಣ್ಣಿನ ಮಡಕೆಗಳು ನೀಡುವ ಕೆಲವು ಆರೋಗ್ಯಕರ ಪ್ರಯೋಜನಗಳು ಹೀಗಿವೆ ನೋಡಿ..

ಆಹಾರದಲ್ಲಿ ಕಡಿಮೆ ಎಣ್ಣೆ ಇರುವುದು

ನಿಮ್ಮ ಆಹಾರವನ್ನು ಕನಿಷ್ಠ ಎಣ್ಣೆಯಲ್ಲಿ ಬೇಯಿಸಲು ನೀವು ಬಯಸಿದರೆ, ಮಣ್ಣಿನ ಮಡಕೆಗಳು ನಿಮಗೆ ಪರಿಪೂರ್ಣವಾಗಿವೆ. ನಿಮ್ಮ ಎಲ್ಲಾ ಆಹಾರವನ್ನು ನೀವು ಕೇವಲ ಒಂದು ಚಮಚ ಎಣ್ಣೆಯಲ್ಲಿ ಬೇಯಿಸಬಹುದು ಮತ್ತು ಅದನ್ನು ಎಂದಿನಂತೆ ಆರೋಗ್ಯಕರವಾಗಿ ಸಹ ಮಾಡಬಹುದು.

ಮಣ್ಣಿನ ಮಡಕೆಗಳ ನಿಧಾನವಾದ ಅಡುಗೆ ಪ್ರಕ್ರಿಯೆ ಮತ್ತು ಅವುಗಳ ಶಾಖ ನಿರೋಧಕ ವೈಶಿಷ್ಟ್ಯವು ಆಹಾರದ ನೈಸರ್ಗಿಕ ತೈಲಗಳನ್ನು ಉಳಿಸಿಕೊಳ್ಳುತ್ತದೆ. ಮಣ್ಣಿನ ಮಡಕೆಗಳು ತೇವಾಂಶ ಮತ್ತು ಶಾಖವನ್ನು ಆಹಾರದ ಮೂಲಕ ಪ್ರಸಾರ ಮಾಡಲು ಸಹಾಯ ಮಾಡುತ್ತವೆ.

ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು

ಮಣ್ಣಿನ ಮಡಕೆಗಳು ಅಲ್ಕಲೈನ್ ಗುಣವನ್ನು ಹೊಂದಿರುತ್ತವೆ, ಮಡಕೆಯಲ್ಲಿ ಆಹಾರವನ್ನು ಬೇಯಿಸಿದಾಗ ಜೇಡಿಮಣ್ಣು ಆಹಾರದಲ್ಲಿರುವ ಆಮ್ಲದೊಂದಿಗೆ ಸಂವಹನ ನಡೆಸುತ್ತದೆ, ಪಿಎಚ್ ಮಟ್ಟವನ್ನು ತಟಸ್ಥಗೊಳಿಸುತ್ತದೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗಿಸುತ್ತದೆ.

ಈ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುವುದರಿಂದ ಆಹಾರವನ್ನು ಹೆಚ್ಚು ರುಚಿಕರ ಮತ್ತು ಆರೋಗ್ಯಕರವಾಗಿಸುತ್ತದೆ.

ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ

ಮಣ್ಣಿನ ಮಡಕೆಗಳು ಆಹಾರದ ಪೋಷಕಾಂಶಗಳನ್ನು ಹಾಗೆಯೇ ಇರಿಸುತ್ತವೆ, ಇದು ಊಟದ ಒಟ್ಟಾರೆ ಪರಿಮಳವನ್ನು ಹೆಚ್ಚಿಸುತ್ತದೆ. ಮಣ್ಣಿನ ಮಡಕೆಗಳಲ್ಲಿ ಅಡುಗೆ ಮಾಡುವ ಪ್ರಕ್ರಿಯೆಯು ದೇಹಕ್ಕೆ ಸಾಕಷ್ಟು ಆರೋಗ್ಯಕರವಾದ ಆಹಾರಕ್ಕೆ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸಲ್ಫರ್ ಅನ್ನು ಸೇರಿಸುತ್ತದೆ ಎಂದು ಹೇಳಲಾಗುತ್ತದೆ.

ಇದು ದುಬಾರಿಯಲ್ಲದ ವ್ಯವಸ್ಥೆ

ಇತರ ಸ್ಟೀಲ್ ಮತ್ತು ನಾನ್-ಸ್ಟಿಕ್ ಅಡುಗೆ ಪಾತ್ರೆಗಳಿಗೆ ಹೋಲಿಸಿದರೆ, ಮಣ್ಣಿನ ಮಡಕೆಗಳು ದುಬಾರಿಯಲ್ಲ. ಮಣ್ಣಿನ ಮಡಕೆಗಳು ತುಂಬಾನೇ ಅಗ್ಗವಾಗಿವೆ. ಅವು ಬೀದಿ ಬದಿಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ಎಲ್ಲಾ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ.

ಮಣ್ಣಿನ ಮಡಕೆಗಳನ್ನು ಖರೀದಿಸುವಾಗ, ಯಾವುದೇ ಬಿರುಕುಗಳು ಅಥವಾ ರಂಧ್ರಗಳಿಗಾಗಿ ನೀವು ಅವುಗಳನ್ನು ಸರಿಯಾಗಿ ಪರೀಕ್ಷಿಸಿ. ನೀವು ಮೆರುಗುಗೊಳಿಸಲಾದ ಮಣ್ಣಿನ ಮಡಕೆಗಳನ್ನು ತಪ್ಪಿಸಬೇಕು ಮತ್ತು ಸರಳವಾದವುಗಳನ್ನು ಮಾತ್ರ ಖರೀದಿಸಬೇಕು.

ಏಕೆಂದರೆ ಮೆರುಗುಗೊಳಿಸಲಾದ/ಬಣ್ಣಗಳಿಂದ ಚಿತ್ರಿಸಲಾದ ಮಣ್ಣಿನ ಮಡಕೆಗಳನ್ನು ಸೆರಾಮಿಕ್ ಬಣ್ಣದ ಪದರದಿಂದ ಚಿತ್ರಿಸಲಾಗುತ್ತದೆ. ಇದು ವಿಷಕಾರಿಯಾಗುವುದು ಮಾತ್ರವಲ್ಲದೆ, ಅಡುಗೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ.

Source : https://kannada.news18.com/news/lifestyle/there-are-so-many-benefits-of-cooking-in-a-clay-pot-stg-pjl-1471217.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *