ಚೀನಾದ ನಕಲಿ ಬೆಳ್ಳುಳ್ಳಿ:: ಮಾರ್ಕೆಟ್‍ನಲ್ಲಿ ಅತ್ಯುತ್ತಮ ಬೆಳ್ಳುಳ್ಳಿ ಸೆಲೆಕ್ಟ್ ಮಾಡುವ ಟೆಕ್ನಿಕ್ ಇಲ್ಲಿದೆ ನೋಡಿ..

ನೀವು ತಿನ್ನುವ ಬೆಳ್ಳುಳ್ಳಿ ಸೇಫ್ ಅಲ್ಲ ಎಂದು ಅಮೇರಿಕಾ ಹೇಳುತ್ತಿದೆ. ಹಾಗಾದರೆ ನಮಗೆ ಬೆಳ್ಳುಳ್ಳಿ ಯಾವ ದೇಶದಿಂದ ಬರುತ್ತಿದೆ ಮತ್ತು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲು ಕಾರಣವೇನು?

ಪ್ರಪಂಚದಲ್ಲಿ ಸಿಗುವ ಆಹಾರ ಪದಾರ್ಥಗಳು, ದವಸ ಧಾನ್ಯಗಳು, ಹಣ್ಣು ತರಕಾರಿಗಳು ಎಲ್ಲವೂ ಸಹ ಇಂದು ಕಲಬೆರಕೆ ಆಗುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಈಗ ಬೆಳ್ಳುಳ್ಳಿಯ ಸರದಿ. ನಾವು ಮನೆಯಲ್ಲಿ ತಯಾರು ಮಾಡುವ ಅನೇಕ ಆಹಾರ ಪದಾರ್ಥಗಳಿಗೆ ಬೆಳ್ಳುಳ್ಳಿಯ ಅವಶ್ಯಕತೆ ತುಂಬಾ ಇದೆ. ಆರೋಗ್ಯಕರ ಗುಣಗಳಿಗಾಗಿ ಮತ್ತು ಆಹಾರದ ರುಚಿಗಾಗಿ ನಾವು ಬೆಳ್ಳುಳ್ಳಿಯನ್ನು ಖರೀದಿಸುತ್ತೇವೆ. ಆದರೆ ಅಂತಹ ಬೆಳ್ಳುಳ್ಳಿ ನಮಗೆ ಅನಾರೋಗ್ಯವನ್ನು ಉಂಟು ಮಾಡಿದರೆ? ಹೌದು, ಇದು ಸತ್ಯ.

ಹೀಗೆಂದು ಅಮೆರಿಕ ಆರೋಗ್ಯ ಸಂಸ್ಥೆ ಹೇಳಿದೆ. ಚೀನಾದಿಂದ ಪ್ರಪಂಚದಾದ್ಯಂತ ರಫ್ತಾಗುತ್ತಿರುವ ಬೆಳ್ಳುಳ್ಳಿ ಈಗ ಎಲ್ಲಾ ದೇಶಗಳಿಗೂ ತಲೆನೋವು ತಂದಿಟ್ಟಿದೆ. ಕಾರಣ ಇಷ್ಟೇ, ಚೀನಾದಲ್ಲಿ ಬೆಳೆಯಲಾಗಿರುವ ಬೆಳ್ಳುಳ್ಳಿ ಮಾನವರ ಮಲಮೂತ್ರಗಳನ್ನು ಉಪಯೋಗಿಸಿಕೊಂಡಿದೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ. ಹಾಗಾಗಿ ಬೆಳ್ಳುಳ್ಳಿಯನ್ನು ಖರೀದಿಸಲು ಹೋದಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ. ನಮ್ಮ ಭಾರತದ ಬೆಳ್ಳುಳ್ಳಿ ಬಗ್ಗೆ ನಮಗೆ ಗೊತ್ತಲ್ಲವೇ? ಹಾಗಾಗಿ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ.

ಬೆಳ್ಳುಳ್ಳಿ ಗಟ್ಟಿಯಾಗಿರಬೇಕು

ಸಾಮಾನ್ಯವಾಗಿ ತಾಜಾ ಬೆಳ್ಳುಳ್ಳಿ ಮುಟ್ಟಲು ಕಲ್ಲಿನಂತೆ ಇರುತ್ತದೆ. ಬೇರೆ ಬಗೆಯ ಬೆಳ್ಳುಳ್ಳಿಗಳಿಗೆ ಹೋಲಿಸಿದರೆ ತೂಕ ಕೂಡ ಜಾಸ್ತಿ ಇರುತ್ತದೆ. ಗಟ್ಟಿಯಾದ ಬೆಳ್ಳುಳ್ಳಿ ನಿಮ್ಮ ಆಯ್ಕೆಯಾಗಿದ್ದರೆ, ಅದು ಹೆಚ್ಚು ದಿನಗಳ ಕಾಲ ತಾಜಾ ಆಗಿ ಉಳಿಯುತ್ತದೆ ಮತ್ತು ಕೊಳೆತು ಹೋಗುವುದಿಲ್ಲ.

ಎಸಳುಗಳನ್ನು ಚೆಕ್ ಮಾಡಿ

ಬೆಳ್ಳುಳ್ಳಿಯನ್ನು ಕೊಳ್ಳುವ ಮುಂಚೆ ಒಂದು ಅಥವಾ ಎರಡು ಎಸಳು ಗಳನ್ನು ಬೆಳ್ಳುಳ್ಳಿಯಿಂದ ಬೇರ್ಪಡಿಸಿ ಚೆಕ್ ಮಾಡಿ ನೋಡಿ. ಅವುಗಳ ಮೇಲೆ ಯಾವುದೇ ಕಪ್ಪು ಕಲೆಗಳು ಇಲ್ಲದಿದ್ದರೆ, ನೋಡಲು ಚೆನ್ನಾಗಿದ್ದರೆ ನಿಮಗೆ ಗೊತ್ತಾಗುತ್ತದೆ. ಅಂತಹ ಬೆಳ್ಳುಳ್ಳಿ ಬಳಸಲು ಆರೋಗ್ಯಕರ.

ಬಿಗುವಿನ ಸಿಪ್ಪೆ ಬಹಳ ಮುಖ್ಯ

ಬೆಳ್ಳುಳ್ಳಿಯ ಸಿಪ್ಪೆ ಬಗ್ಗೆ ಎಚ್ಚರಿಕೆವಹಿಸಿ. ಲೂಸ್ ಆದ ಸಿಪ್ಪೆ ಇದ್ದರೆ ಅಂತಹ ಬೆಳ್ಳುಳ್ಳಿ ಹಳೆಯದು ಮತ್ತು ಹಾಳಾಗಿರುತ್ತದೆ. ಕೆಲವೊಮ್ಮೆ ಬೆಳ್ಳುಳ್ಳಿ ತೇವಾಂಶಕ್ಕೂ ಕೂಡ ಒಳಗಾಗಿರಬಹುದು. ಇದರಿಂದ ಬೆಳ್ಳುಳ್ಳಿಯ ಗುಣಮಟ್ಟ ಕುಸಿದಿರುತ್ತದೆ.

ಮೊಳಕೆ ಬಂದ ಬೆಳ್ಳುಳ್ಳಿ

ಒಂದು ವೇಳೆ ನೀವು ತೆಗೆದುಕೊಳ್ಳುವ ಬೆಳ್ಳುಳ್ಳಿಯಲ್ಲಿ ಹಸಿರಾದ ಮೊಳಕೆ ಗಳು ಕಾಣಿಸುತ್ತಿದ್ದರೆ, ಅಂತಹ ಬೆಳ್ಳುಳ್ಳಿ ತಿನ್ನಲು ಚೆನ್ನಾಗಿರು ವುದಿಲ್ಲ. ಒಂದು ರೀತಿ ಕಹಿ ಅನುಭವವಾಗುತ್ತದೆ. ಇದರಿಂದ ನಿಮ್ಮ ಆಹಾರ ಕೂಡ ಚೆನ್ನಾಗಿ ತಯಾರಾಗುವುದಿಲ್ಲ.

ಬೆಳ್ಳುಳ್ಳಿಯ ವಾಸನೆ ನೋಡಿ

ಬೆಳ್ಳುಳ್ಳಿಯ ವಾಸನೆ ನಿಮಗೆ ಗೊತ್ತೇ ಇದೆ. ಹೊಸ ಬೆಳ್ಳುಳ್ಳಿ ಅಥವಾ ತಾಜಾ ಬೆಳ್ಳುಳ್ಳಿ ಎಷ್ಟು ಗಾಢವಾದ ವಾಸನೆ ಬೀರುತ್ತದೆ ಎಂದು ನಿಮಗೆ ತಿಳಿದಿರುತ್ತದೆ. ಒಂದು ವೇಳೆ ವಾಸನೆ ಬೇರೆ ತರಹ ಬಂದರೆ ಅಂತಹ ಬೆಳ್ಳುಳ್ಳಿಯನ್ನು ಆಯ್ಕೆ ಮಾಡಬೇಡಿ. ಇದಕ್ಕಾಗಿ ನೀವು ಬೆಳ್ಳುಳ್ಳಿಯನ್ನು ಸ್ವಲ್ಪ ಗಿಲ್ಲಿ ನೋಡಿ.

ಬೆಳ್ಳುಳ್ಳಿಯ ಗಾತ್ರ

ಮಾರುಕಟ್ಟೆಯಲ್ಲಿ ಬೇರೆ ಬೇರೆ ಗಾತ್ರದ ಬೆಳ್ಳುಳ್ಳಿ ಸಿಗುತ್ತವೆ. ಸಣ್ಣ ಗಾತ್ರದ ಬೆಳ್ಳುಳ್ಳಿ ಹೆಚ್ಚು ಗಾಢವಾದ ವಾಸನೆಯನ್ನು ಹೊಂದಿರುತ್ತದೆ. ಆದರೆ ದೊಡ್ಡ ಗಾತ್ರದ ಬೆಳ್ಳುಳ್ಳಿ ಅಷ್ಟೊಂದು ಗಾಢ ವಾಸನೆಯನ್ನು ಹೊಂದಿ ರುವುದಿಲ್ಲ. ಒಟ್ಟಿನಲ್ಲಿ ಬೆಳ್ಳುಳ್ಳಿಯ ವಾಸನೆ ನಿಮಗೆ ಅನುಭವವಾಗಿ ರುತ್ತದೆ. ಅಂತಹ ಬೆಳ್ಳುಳ್ಳಿಯನ್ನು ಮಾತ್ರ ಖರೀದಿಸಲು ಮುಂದಾಗಿ.

ಸಾವಯುವ ಬೆಳ್ಳುಳ್ಳಿ ಖರೀದಿ ಮಾಡಿ

ಸಾಧ್ಯವಾದಷ್ಟು ಸಾವಯುವ ಅಥವಾ ಹತ್ತಿರದಲ್ಲೇ ಬೆಳೆದ ಬೆಳ್ಳುಳ್ಳಿ ಯನ್ನು ಖರೀದಿಸಿ. ಇದರಿಂದ ಬೆಳ್ಳುಳ್ಳಿ ಗುಣಮಟ್ಟ ಚೆನ್ನಾಗಿರುತ್ತದೆ. ದೂರದ ಪ್ರದೇಶಗಳಿಂದ ಬಂದ ಬೆಳ್ಳುಳ್ಳಿ ಹಾಳಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬೆಳ್ಳುಳ್ಳಿಯ ಶೇಖರಣೆ ಕೂಡ ಇಲ್ಲಿ ಬಹಳ ಮುಖ್ಯ ವಾಗುತ್ತದೆ.

Source : https://vijaykarnataka.com/lifestyle/home-decor/simple-tips-to-pick-the-freshest-and-good-garlics-from-market/articleshow/105892512.cms?story=7

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *