Tmailnadu Kodaikenal: ದಕ್ಷಿಣ ಭಾರತದ ಸುಪ್ರಸಿದ್ಧವಾದ ಪ್ರವಾಸಿ ತಾಣವಾದ ಕೊಡೈಕೆನಾಲ್.. ತಮಿಳುನಾಡಿನ ಅತ್ಯಂತ ಜನಪ್ರಿಯವಾದ ಹಿಲ್ ಸ್ಟೇಷನ್ ಆಗಿದ್ದು.. ಇಲ್ಲಿರುವ ಅತ್ಯದ್ಭುತವಾದ ಗಿರಿಧಾಮಗಳು ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇರುತ್ತವೆ.. ಹಾಗಾದರೆ ಇದೀಗ ಈ ಕೊಡೈಕೆನಾಲ್‌ನಲ್ಲಿರುವ ಪ್ರವಾಸಿ ಸೂಕ್ತವಾದ ಸ್ಥಳಗಳು ಯಾವುವು ಎನ್ನುವುದರ ಬಗ್ಗೆ ತಿಳಿದುಕೊಳ್ಳಿ.
- ದಕ್ಷಿಣ ಭಾರತದಲ್ಲಿ ಕೊಡೈಕೆನಾಲ್ ಗಿರಿಧಾಮಗಳ ಪೈಕಿ ಅಗ್ರಸ್ಥಾನದಲ್ಲಿದೆ.
- 5 ಸ್ಟಾರ್ ರೆಸಾರ್ಟ್ ಮತ್ತು ಹೋಟೆಲ್‌ಗಳ ಸೌಲಭ್ಯವಿದೆ.
- ಆಕರ್ಷಣೀಯ ಟೆಲಿಸ್ಕೋಪ್ ಹೌಸ್‌ಗಳ ವ್ಯವಸ್ಥೆ ಇದೆ.

Kodaikenal: ದಕ್ಷಿಣ ಭಾರತದಲ್ಲಿ ಬಹಳ ತಂಪಾಗಿರುವ ಗಿರಿಧಾಮಗಳ ಪೈಕಿ ಕೊಡೈಕೆನಾಲ್ ಅಗ್ರಸ್ಥಾನದಲ್ಲಿದೆ. ಕೊಡೈಕೆನಾಲ್‌ಸುಂದರವಾದ ಪಟ್ಟಣವು ದಟ್ಟವಾದ ಕಾಡುಗಳು, ರೋಲಿಂಗ್ ಬೆಟ್ಟಗಳು ಮತ್ತು ಸಮಶೀತೋಷ್ಣ ಹವಾಮಾನದಿಂದ ಸುತ್ತುವರಿಯಲ್ಪಟ್ಟಿದೆ. ಈ ಸ್ಥಳ ಪ್ರವಾಸಿಗರಿಗೆ ಬೇಸಿಗೆಯನ್ನು ಮರೆಮಾಚುವಂತಹ ಜನಪ್ರಿಯವಾದ ಮಧುಚಂದ್ರದ ತಾಣವಾಗಿದೆ. ಅಲ್ಲದೇ ಇಲ್ಲಿರುವಂತಹ ಪ್ರವಾಸಿತಾಣಗಳಾದ ಕೊಡೈಕೆನಾಲ್ ಸರೋವರವು ಕೊಡೈಕೆನಾಲ್ ನಗರದಲ್ಲಿರುವ ಮಾನವ ನಿರ್ಮಿತ ಸರೋವರವಾಗಿದೆ. ಇದೊಂದು ನಕ್ಷತ್ರಾಕಾರದ ಸರೋವರವಾಗಿದ್ದು, ಶ್ರೀಮಂತ ಹಸಿರು ಪಳನಿ ಬೆಟ್ಟಗಳ ಶ್ರೇಣಿಯಿಂದ ಆವೃತವಾಗಿದೆ. ಬೇರ್ ಶೋಲಾ ಜಲಪಾತವು ಸಹ ಅತ್ಯಂತ ಜನಪ್ರಿಯವಾದ ಪಿಕ್ನಿಕ್ ತಾಣವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಮತ್ತೊಂದು ವಿಶೇಷತೆ ಎಂದರೆ ಸುಮಾರು 12 ವರ್ಷಕ್ಕೊಮ್ಮೆ ಅರಳುವ ಕುರಿಂಜಿ ಹೂವುಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಅಲ್ಲದೆ ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ಕೊಡೈಕೆನಾಲ್ ಪ್ರದೇಶ ಹೆಸರುವಾಸಿಯಾಗಿದೆ.ಈ ಗಿರಿಧಾಮಕ್ಕೆ ಭೇಟಿ ನೀಡುವವರು ಅದರ ಮಿನುಗುವ ಸರೋವರಗಳಿಗೆ ಮನಸೋಲುವವರೆ ಇಲ್ಲ. ಜೊತೆಗೆ ಆರಾಮದಾಯಕವಾದ ಸುಂದರ ರೆಸಾರ್ಟ್ ಮತ್ತು ಹೋಟೆಲ್‌ಗಳು ಕೂಡ ಇಲ್ಲಿ ಲಭ್ಯವಿದೆ. ಸೌಲಭ್ಯವುಳ್ಳ ಹಾಗೂ ಸುಸಜ್ಜಿತವಾದ ರೆಸಾರ್ಟ್ ಮತ್ತು ಹೋಟೆಲ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ..
*ಸ್ಟರ್ಲಿಂಗ್ ಕೊಡೈ-ಲೇಕ್

ಕೊಡೈ ಸರೋವರದ ಸಾಟಿಯಿಲ್ಲದ ನೋಟ ಮತ್ತು ವಿದೇಶದ ಮನೆಗಳ ನೆನಪುಗಳನ್ನು ಮರುಕಳಿಸುವಂತೆ ಇರುತ್ತದೆ. ಶಾಂತಿಯುತ ವಾಸ್ತವ್ಯದ ಅನುಭವ ಸಿಗುವುದರೊಂದಿಗೆ, ಈ ಪ್ರದೇಶದಲ್ಲಿ ಸ್ಟ್ರಾಬೆರಿ ತೋಟಗಳು, ಮಶ್ರೂಮ್ ಫಾರ್ಮ್‌ಗಳು ಮತ್ತು ಚಹಾ ತೋಟಗಳನ್ನು ಅನ್ವೇಷಿಸಲು ರೇಸಾರ್ಟ್ ಅವಕಾಶವನ್ನು ನೀಡುತ್ತದೆ. ಒಟ್ಟು 6.5 ಎಕರೆ ಪ್ರದೇಶದಲ್ಲಿ ಈ ಹೋಟೆಲ್ ಹರಡಿಕೊಂಡಿದ್ದು, ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ. ಇದರ ಜೊತೆಗೆ ಸ್ಪಾ, ಬಾರ್ ಮತ್ತು ವಿವಿಧ ರೀತಿಯ ತಿನಿಸುಗಳು ಈ ರೆಸ್ಟೋರೆಂಟ್‌ನಲ್ಲಿ ಸಿಗುತ್ತದೆ. ಕುಟುಂಬದೊಂದಿಗೆ ಮೋಜಿನ ಸಮಯ ಕಳೆಯುವುದಕ್ಕೆ ಸರಿಯಾದ ಸ್ಥಳವಾಗಿದೆ.ಸರೋವರದ ಸುತ್ತಲೂ ಸೈಕಲ್ ಸವಾರಿಗಾಗಿ ಹೋಗಬಹುದು ಅಥವಾ ಅನೇಕ ರೀತಿಯ ಒಳಾಂಗಣ ಮತ್ತು ಹೊರಾಂಗಣ ಆಟಗಳಿಗೂ ಅವಕಾಶವಿದೆ.
*ಕಾರ್ಲ್ಟನ್
ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ 5 ಸ್ಟಾರ್ ಹೋಟೆಲ್ ಹಾಗೂ ಅತ್ಯಂತ ಜನಪ್ರಿಯ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ಭಾರತೀಯ, ಕಾಂಟಿನೆಂಟಲ್, ಇಟಾಲಿಯನ್, ಚೈನೀಸ್ ಮತ್ತು ಮೆಕ್ಸಿಕನ್ ಶೈಲಿಯ ಬಹು-ತಿನಿಸು ಭಕ್ಷ್ಯಗಳು ಕೂಡ ಇಲ್ಲಿ ಸಿಗುತ್ತದೆ. ಕೊಡೈಕೆನಾಲ್‌ನಲ್ಲಿರುವ ಅತ್ಯುತ್ತಮ ಸರೋವರ-ವೀಕ್ಷಣೆ ಹೋಟೆಲ್‌ಗಳಲ್ಲಿ ಇದು ಕೂಡ ಒಳಪಟ್ಟಿದೆ. ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಮತ್ತು ಸಮೀಪದಲ್ಲಿರುವ ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣಗಳಿಗೆ ಬೇಟಿ ನೀಡಲು ಉತ್ತಮವಾಗಿದೆ. ಇಲ್ಲಿರುವ ನೈಸರ್ಗಿಕ ಸೌಂದರ್ಯ, ವಸಾಹತುಶಾಹಿ ಮೋಡಿಗಳ ಭವ್ಯವಾದ ಮಿಶ್ರಣದೊಂದಿಗೆ ಕಂಗೊಳಿಸುವುದರೊಂದಿಗೆ ನಮ್ಮನ್ನು ಇನ್ನಷ್ಟು ದಿನಗಳ ಕಾಲದವರೆಗೆ ಇಲ್ಲಿ ಉಳಿಯುವಂತೆ ಪ್ರೇರೆಪಿಸುತ್ತದೆ.
*ತಮಾರಾ ಕೊಡೈ

ಕೊಡೈಕೆನಾಲ್‌ನ ಅತ್ಯಂತ ಹಳೆಯ ಹೋಟೆಲ್‌ಗಳಲ್ಲಿ ಒಂದಾಗಿದೆ. 19ನೇ ಶತಮಾನದ ಅತ್ಯಂತ ಹಳೆಯ ನಿವಾಸಗಳಿಂದ ಬೇರೂರಿದೆ. ಕೊಡೈಕೆನಾಲ್‌ನ ಅತ್ಯಂತ ಪ್ರಸಿದ್ಧ ವಾಸ್ತವ್ಯವಾಗಿರುವ ಈ ತಮಾರಾ ಕೊಡೈ, ಇದರ ಇತಿಹಾಸವು 1840 ರ ದಶಕದ ಹಿಂದಿನದು.ವಾಸ್ತವವಾಗಿ, ಈ ಹೋಟೆಲ್ ಮೊದಲು ಬಂಗಲೆಯಾಗಿ ಪ್ರಾರಂಭವಾಗಿ ಕಾಲಾಂತರ ಹೋಟೆಲ್‌ಗಳಾಗಿ ಬದಲಾದವು ಎನ್ನಲಾಗುತ್ತದೆ. ಈ ಹೋಟೆಲ್ ಹೋದಾಗ ಸ್ವಾಗತ ಪ್ರದೇಶದಲ್ಲಿ ನಿಮ್ಮನ್ನು ಮೊದಲು ಪರಿಮಳಯುಕ್ತ ಏಲಕ್ಕಿಯ ಹಾರ ಮತ್ತು ಹಣೆಯ ಮೇಲೆ ಟೀಕಾದೊಂದಿಗೆ ಸ್ವಾಗತಿಸುವುದು ಈ ರೇಸಾರ್ಟ್‌ನ ವೈಶಿಷ್ಟ್ಯವಾಗಿದೆ. ಒಟ್ಟಿನಲ್ಲಿ ಪ್ರಕೃತಿಯಲ್ಲಿ ಶ್ರೀಮಂತ ಅನುಭವ ಸಿಗುವುದಂತು ಕಂಡಿತ.
*JC ರೆಸಿಡೆನ್ಸಿ
ಕೊಡೈಕೆನಾಲ್‌ನಲ್ಲಿ ಕಾಣ ಸಿಗುವ ಗಿರಿಧಾಮ ಬೆಟ್ಟಗಳ ಮಧ್ಯ ನೀವು ಇರಬೇಕು ಅಥವಾ ಸಿಟಿಯ ಜೀವನದಿಂದ ಬೇಸತ್ತು ದೂರ ಹೋಗಿ ಸಮಯ ಕಳೆಯಬೇಕು ಎಂದು ಬಯಸಿದರೆ ಈ ರೆಸಿಡೆನ್ಸಿ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ. ಈ ಹೋಟೆಲ್ ಐಷಾರಾಮಿ ಮತ್ತು ರಮಣೀಯ ಸೌಂದರ್ಯದ ಪರಿಪೂರ್ಣ ಮಿಶ್ರಣದ ದೃಶ್ಯ ಒದಗಿಸುತ್ತದೆ. ಅಷ್ಟೇ ಅಲ್ಲ, ಅದ್ಭುತ ದೃಶ್ಯ, ವೀಕ್ಷಣೆಯ ಹಾದಿಗಳು, ರಾತ್ರಿಯ ವೇಳೆ ಸವಾರಿಗಳು ಮತ್ತು ಎಸ್ಟೇಟ್‌ನ ಭವ್ಯವಾದ ಪ್ರವಾಸದಂತಹ ಚಟುವಟಿಕೆಗಳನ್ನು ಒಂದೇ ಜಾಗದಲ್ಲಿ ಏಂಜಾಯ್ ಮಾಡಬಹುದು.
*ಸ್ಪಾರ್ಸಾ ಅವರಿಂದ ಲೆ ಪೋಶೆ
ಕೊಡೈಕೆನಾಲ್ ಸರೋವರದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳವು ಉದ್ದವಾದ ಸುತ್ತುವ ರಸ್ತೆಗಳು, ಕಾಡುಪ್ರದೇಶಗಳು ಮತ್ತು ಹೂವುಗಳಿಗೆ ಹೆಸರುವಾಸಿಯಾಗಿದೆ. ಪರಿಸರ ಸ್ನೇಹಿ ಹೋಟೆಲ್‌ಗಾಗಿ ಹುಡುಕುತ್ತಿದ್ದರೆ ಈ ಸ್ಪಾರ್ಸಾ ಅವರಿಂದ ಲೆ ಪೋಶೆ ಉತ್ತಮ ಆಯ್ಕೆಯಾಗಿದೆ. ಕಣಿವೆ ಮತ್ತು ಪಕ್ಕದ ಪಟ್ಟಣಗಳ ಮೇಲೆ ಅದ್ಭುತವಾದ ದೃಶ್ಯವನ್ನು ವಿಕ್ಷಿಸಲು ಆಕರ್ಷಣೀಯ ಟೆಲಿಸ್ಕೋಪ್ ಹೌಸ್‌ಗಳ ವ್ಯವಸ್ಥೆ ಇದೆ. ಇದರೊಂದಿಗೆ ಹೋಟೆಲ್‌ನ ಸ್ಪಾ ಕೂಡ ಪ್ರವಾಸಿಗರಿಗೆ ಸಾಕಷ್ಟು ಜನಪ್ರಿಯವಾಗಿದೆ. ಒಮ್ಮೆ ಈ ವಾತಾವರಣಕ್ಕೆ ಬಂದ್ರೆ ಮತ್ತೆ ಹಿಂದಿರುಗಬೇಕೆಂದು ಅನಿಸುವುದಿಲ್ಲ.
ಪ್ರಕೃತಿಯ ರಮಣೀಯ ಸೌಂದರ್ಯವನ್ನು ನೋಡಬೇಕೆಂದರೆ ಒಮ್ಮೆಯಾದರು ಕುಟುಂಬದವರೊಂದಿಗೆ ಅಥಾವ ಸ್ನೇಹಿತರೊಂದಿಗೆ ಕೊಡೈಕೆನಾಲ್ ಪ್ರದೇಶ ಭೇಟಿ ನೀಡಿ ಇಲ್ಲಿರುವಂತಹ ಸರೋವರ, ಗಿರಿಧಾಮ ಪ್ರದೇಶಗಳನ್ನು ಆನಂದಿಸಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1