ರಾಜ್ಯ ಸರ್ಕಾರದಿಂದ ʻರೈತರಿಗೆ ಹೊಸ ವರ್ಷದ ಗಿಫ್ಟ್‌ʼ : ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ.

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಲಾಗಿದೆ.

ಸ್ವಾವಲಂಬಿ ಯೋಜನೆ ಅಡಿ ಜಮೀನು ನಕ್ಷೆಗಾಗಿ (ಸ್ಕೆಚ್‌) ಸಲ್ಲಿಸುವ ಪ್ರತಿ ಅರ್ಜಿಗೆ ನಿಗದಿ ಪಡಿಸಿದ ಪರಿಷ್ಕೃತ ಶುಲ್ಕ ಈ ಕೆಳಗಿನಂತಿದೆ.

ಜಮೀನು ನಕ್ಷೆ ಸೇವಾ ಶುಲ್ಕ ಇಳಿಕೆ: ಸ್ವಾವಲಂಬಿ ಯೋಜನೆ ಅಡೆ ನಿಗದಿ

11-ಇ ನಕ್ಷೆ, ತತ್ಕಾಲ್ ಪೋಡಿ, ಭೂ ಪರಿವರ್ತನೆ ಪೂರ್ವನಕ್ಷೆ

2 ಎಕರೆವರೆಗೆ 2,500 ರೂ. (ನಗರ), 1,500 ರೂ. (ಗ್ರಾಮೀಣ)

2 ಎಕರೆ ನಂತರ ಪ್ರತಿ ಎಕರೆಗೆ 1,000 ರೂ. (ನಗರ), 400 ರೂ. (ಗ್ರಾಮೀಣ)

ಜಮೀನು ಹದ್ದುಬಸ್ತು

2 ಎಕರೆವರೆಗೆ ₹ 2,000 (ನಗರ), ₹ 500 (ಗ್ರಾಮೀಣ)

2 ಎಕರೆ ನಂತರ ಪ್ರತಿ ಎಕರೆಗೆ 400 ರೂ. (ನಗರ), 300 ರೂ. (ಗ್ರಾಮೀಣ)

ಅದೇಶದಲ್ಲಿ ಸಾರ್ವಜನಿಕರು ತಮ್ಮ ಸ್ವಂತ ಖಾಸಗಿ ಜಮೀನಿನಲ್ಲಿ ‘ಸ್ವಾವಲಂಬಿ ಆಪ್’ ಮೂಲಕ ಸ್ವಯಂ ಸರ್ವೆ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮೇಲೆ ಓದಲಾದ ಕ್ರ.ಸಂ. (7) ರ ಆದೇಶದಲ್ಲಿ ಪ್ರತಿ ಅರ್ಜಿಗೆ ರೂ.1000/- ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಲಾಗಿದೆ.

ಮೇಲಿನ ಸರ್ಕಾರದ ಆದೇಶಗಳಲ್ಲಿ ಅರ್ಜಿ ಶುಲ್ಕವನ್ನು ನಿರ್ದಿಷ್ಟವಾಗಿ ಪಹಣಿ ಕಾಲಂ-3 ಅಥವಾ ಕಾಲಂ-9 ವಿಸ್ತೀರ್ಣಕ್ಕೆ ಅನುಗುಣವಾಗಿ ಪಾವತಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಸ್ವಾವಲಂಬಿ ಯೋಜನೆಯಡಿಯಲ್ಲಿ ಸಲ್ಲಿಸುವ ಅರ್ಜಿಗಳಿಗೆ ಪಹಣಿಯ 900-3 ರಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಪಾವತಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಅದೇ ರೀತಿಯಲ್ಲಿ, ನಾಗರಿಕರು ಅಳತೆ ಕೋರಿ ಸಲ್ಲಿಸುವ ವಿವಿಧ ಅರ್ಜಿಗಳಿಗೆ ಪಹಣಿ ಕಾಲಂ-9 ರ ವಿಸ್ತೀರ್ಣಕ್ಕೆ ಶುಲ್ಕ ಪಾವತಿಸಿಕೊಳ್ಳುವ ಬದಲಾಗಿ ಏಕರೂಪ ಶುಲ್ಕ ಪದ್ಧತಿಯನ್ನು ಅನುಸರಿಸುವ ಸಲುವಾಗಿ ವಹಣಿಯ ಕಾಲಂ-3 ರ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳಲು ಮೋಜಿಣಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ.

ಆದರೆ ಪಹಣಿಯ ಕಾಲಂ-3 ರ ವಿಸ್ತೀರ್ಣ ಹೆಚ್ಚಿಗೆ ಇದ್ದು ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದು, ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಪಾವತಿಸಿಕೊಳ್ಳುತ್ತಿರುವ ಕಾರಣ ಸಾರ್ವಜನಿಕರಿಗೆ ಹೊರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಲ್ಲದೆ, 2023 ರ ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅರ್ಜಿ ಶುಲ್ಕ ಹೆಚ್ಚಾಗಿರುವ ಕುರಿತು ಮಾನ್ಯ ಸದಸ್ಯರುಗಳು ಸದನದಲ್ಲಿ ಪ್ರಸ್ತಾಪಿಸಿರುತ್ತಾರೆ. ಜೊತೆಗೆ, ಅರ್ಜಿದಾರರು / ಜನಪ್ರತಿನಿಧಿಗಳಿಂದಲೂ ಸಹ ಪೋಡಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಸಹ ಸ್ವೀಕೃತವಾಗಿರುತ್ತವೆ.

ಈ ಮೇಲ್ಕಂಡ ಎಲ್ಲಾ ಸೇವೆಗಳನ್ನು ಸರ್ಕಾರಕ್ಕೆ ಹೊರೆಯಾಗದಂತೆ ಸಾರ್ವಜನಿಕರಿಗೆ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಅನುವಾಗುವಂತೆ ಸರ್ಕಾರಿ ಭೂಮಾಪಕರ ಜೊತೆಗೆ ಪರವಾನಗಿ ಭೂಮಾಪಕರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಪರವಾನಗಿ ಭೂಮಾಪಕರು ನೀಡುವ ಸೇವೆಗೆ ಸಾರ್ವಜನಿಕರು ಪಾವತಿಸುವ ಶುಲ್ಕದಿಂದಲೇ ನಿಗಧಿತ ಸೇವಾ ಶುಲ್ಕವನ್ನು ಪಾವತಿಸಲಾಗುತ್ತಿದೆ.

ಪ್ರಸ್ತುತ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಬಹುಮಾಲೀಕತ್ವ ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕ ರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಜಾರಿಯಲ್ಲಿರುತ್ತದೆ. ಇದಲ್ಲದೆ ಅಲಿನೇಷನ್, ದರಖಾಸ್ತು ಪೋಡಿಗೆ ಸಂಬಂಧಿಸಿದಂತೆ ಮಂಜೂರಿ ಸಮಯದಲ್ಲಿಯೇ ಅರ್ಜಿದಾರರಿಂದ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ.

Source : https://m.dailyhunt.in/news/india/kannada/kannadadunia-epaper-kannadad/raajya+sarkaaradindha+raitarige+hosa+varshadha+gift+jaminina+alate+sarve+podi+haddubastu+seva+shulka+ilike-newsid-n570992040?listname=topicsList&topic=for%20you&index=1&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *