
ಉದ್ದಿನ ವಡೆ ಮಾಡಬೇಕಾದ್ರೆ ಸುಮಾರು ಆರರಿಂದ ಏಳು ಗಂಟೆ ಉದ್ದಿನಬೇಳೆ (Urad Dal) ನೆನಸಿಡಬೇಕಾಗುತ್ತದೆ. ಬೆಳಗ್ಗೆ ಇಡ್ಲಿ ಜೊತೆ ಉದ್ದಿನ ವಡೆ ಬೆಸ್ಟ್ ಕಾಂಬಿನೇಷನ್. ಆದ್ರೆ ರಾತ್ರಿ ಉದ್ದಿನಬೇಳೆ ನೆನೆಸಿಡೋದನ್ನು ಮರೆತಿದ್ರೆ ಚಿಂತೆ ಮಾಡಬೇಕಿಲ್ಲ. ರಾತ್ರಿ ಉಳಿದ ಅನ್ನದಿಂದಲೇ ರುಚಿಯಾದ ಮಸಾಲೆ ವಡೆ ತಯಾರಿಸಬಹುದಾಗಿದೆ.
ಇದರಿಂದ ಉಳಿದಿರೋ ಅನ್ನ ಸಹ ವೇಸ್ಟ್ ಮಾಡಲ್ಲ. ಯಾವುದೇ ಅಡುಗೆ ವೇಸ್ಟ್ ಆಗದಂತೆ ಮಾಡಲು ಗೃಹಿಣಿಯರು ಕಂಡುಕೊಂಡಿರುವ ರೆಸಿಪಿಗಳು ಇವಾಗಿದೆ. ಒಂದು ವೇಳೆ ಮನೆಯಲ್ಲಿ ತಂಗಳು ಅನ್ನ ಉಳಿದಿದ್ರೆ ಸಂಜೆ ಸ್ನಾಕ್ಸ್ ರೂಪದಲ್ಲಿ ಮಸಾಲೆ ವಡೆಗಳನ್ನು ಮಾಡಬಹುದಾಗಿದೆ.
ಉಳಿದಿರುವ ಅನ್ನದಿಂದ ಮಸಾಲೆ ವಡೆ ಹೇಗೆ ಮಾಡಬೇಕು ಅನ್ನೋದನ್ನು ನೋಡೋಣ ಬನ್ನಿ. ಇದಕ್ಕೆ ಹೆಚ್ಚು ಸಮಯ ಬೇಕಾಗಲ್ಲ. ಅತಿಥಿಗಳು ಬಂದಾಗ್ಲೂ ಈ ರೆಸಿಪಿ ಮಾಡಬಹುದಾಗಿದೆ.
ಬೇಕಾಗುವ ಸಾಮಾಗ್ರಿಗಳು
ಅನ್ನ: ಒಂದು ಕಪ್
ಕಡಲೆಹಿಟ್ಟು: ಅರ್ಧ ಕಪ್
ಅಕ್ಕಿ ಹಿಟ್ಟು: ಅರ್ಧ ಕಪ್
ಈರುಳ್ಳಿ: ನಾಲ್ಕರಿಂದ ಐದು (ದೊಡ್ಡ ಗಾತ್ರದ್ದು)
ಹಸಿ ಮೆಣಸಿನಕಾಯಿ: ಏಳರಿಂದ ಎಂಟು
ಕೋತಂಬರಿ ಸೊಪ್ಪು
ಕರೀಬೇವು: 10 ರಿಂದ 15 ದಳ
ಜೀರಿಗೆ: ಒಂದು ಟೀ ಸ್ಪೂನ್
ಓಂ ಕಾಳು: ಒಂದು ಟೀ ಸ್ಪೂನ್
ಆಲೂಗಡ್ಡೆ: ದೊಡ್ಡ ಗಾತ್ರದ್ದು ಒಂದು
ಅಡುಗೆ ಸೋಡ: ಅರ್ಧ ಟೀ ಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ: ಫ್ರೈ ಮಾಡಲು ಬೇಕಾಗುವಷ್ಟು
ಮಾಡುವ ವಿಧಾನ
*ಮೊದಲಿಗೆ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಉದ್ದವಾಗಿ ತೆಳುವಾಗಿ ಕತ್ತರಿಸಿಕೊಳ್ಳಿ. ಇದರ ಜೊತೆಯಲ್ಲಿ ಹಸಿಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
*ಈಗ ಮಿಕ್ಸಿಂಗ್ ಬೌಲ್ಗೆ ಅನ್ನ ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ವೇಳೆ ನೀರು ಸೇರಿಸಬಾರದು.
*ನಂತರ ಇದೇ ಬೌಲ್ಗೆ ಆಲೂಗಡ್ಡೆ ಸ್ಲೈಸ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಕಡಲೆಹಿಟ್ಟು, ಅಕ್ಕಿಹಿಟ್ಟು ಸೇರಿಸಿಕೊಳ್ಳಿ. ನಂತರ ಇದಕ್ಕೆ ಜೀರಿಗೆ, ಓಂಕಾಳು, ಕೋತಂಬರಿ ಸೊಪ್ಪು, ಕರೀಬೇವು, ಅಡುಗೆ ಸೋಡಾ ಮತ್ತು ಎರಡು ಟೀ ಸ್ಪೂನ್ನಷ್ಟು ಬಿಸಿ ಎಣ್ಣೆ ಸೇರಿಸಿ ಚೆನ್ನಾಗಿ ಕಲಿಸಿಕೊಳ್ಳಿ.
*ಈರುಳ್ಳಿ ಜೊತೆ ಉಪ್ಪು ಸೇರಿಸಿದ್ದರಿಂದ ನೀರಿನಂಶ ಬಿಡುಗಡೆ ಆಗುತ್ತದೆ. ಆದ್ದರಿಂದ ನೀರು ಸೇರಿಸಬಾರದು. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಎತ್ತಿಟ್ಟುಕೊಳ್ಳಿ.
*ಈಗ ಅಗಲವಾದ ಪ್ಯಾನ್ ಇರಿಸಿಕೊಂಡು ನಿಮ್ಮ ವಡೆ ಅರ್ಧ ಮುಳುಗುವ ಪ್ರಮಾಣದಲ್ಲಿ ಅಡುಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ವಡೆ ಆಕಾರದಲ್ಲಿ ತಟ್ಟಿಕೊಂಡು ಫ್ರೈ ಮಾಡಿಕೊಳ್ಳಿ. ಎರಡು ಕಡೆ ಚೆನ್ನಾಗಿ ಫ್ರೈ ಮಾಡಿಕೊಂಡರೆ ರುಚಿಯಾದ ಮಸಾಲೆ ವಡೆ ಸವಿಯಲು ಸಿದ್ಧ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1