Crime News: ಗೋವಾದ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಸುಚನಾ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಬೆಂಗಳೂರು: ಹೆತ್ತ ಮಗುವನ್ನೇ ಕೊಂದು ಶವ ಸಾಗಿಸುವಾಗ ತಾಯಿ (Mother) ಸಿಕ್ಕಿಬಿದ್ದಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ಕಾರಿನಲ್ಲಿ 4 ವರ್ಷದ ಮಗುವಿನ (4 Year Boy Murder) ಶವ ಪತ್ತೆಯಾಗಿದೆ. ಪಶ್ಚಿಮ ಬಂಗಾಳ ಮೂಲದ 39 ವರ್ಷದ ಸುಚನಾ ಸೇಠ್ ಎಂಬಾಕೆ, ತನ್ನ ಮಗನನ್ನ ಗೋವಾದಲ್ಲಿ ಕೊಂದು, ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು, ಕಾರಿನಲ್ಲಿ ಗೋವಾದಿಂದ (Goa) ಬೆಂಗಳೂರಿಗೆ ತೆರಳುತ್ತಿದ್ದಳು. ಇನ್ನೇನು ಮೂರ್ನಾಲ್ಕು ತಾಸಿನಲ್ಲಿ ಸುಚನಾ, ಮಗನ ಶವದೊಂದಿಗೆ ಬೆಂಗಳೂರು (Bengaluru) ತಲುಪಿಬಿಟ್ಟಿರೋಳು. ಅಷ್ಟರಲ್ಲಿ ಐಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಪತಿಯೊಂದಿಗೆ ದೂರವಾಗಲು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದ ಸುಚನಾ, ಜನವರಿ 6ರಂದು ನಾಲ್ಕು ವರ್ಷದ ಮಗನ ಜೊತೆ ಗೋವಾಗೆ ತೆರಳಿದ್ದಳು. ಗೋವಾದ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಸುಚನಾ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕೈ ಕುಯ್ದುಕೊಂಡು ಆತ್ಮಹತ್ಯೆಗೂ ಸುಚನಾ ಪ್ರಯತ್ನಿಸಿದ್ದಳು.
ಹೋಟೆಲ್ ಕೋಣೆಯಲ್ಲಿ ರಕ್ತದ ಕಲೆಗಳು
ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿಕೊಂಡ ಸುಚನಾ, ಕಾರ್ ಬುಕ್ ಮಾಡಿಕೊಂಡು ಮಗುವಿನ ಶವದೊಂದಿಗೆ ಗೋವಾದಿಂದ ಬೆಂಗಳೂರಿನತ್ತ ಹೊರಟಿದ್ದಳು. ಚೆಕ್ಔಟ್ ಬಳಿಕ ರೂಮ್ ಕ್ಲೀನ್ ಮಾಡುವಾಗ ಅಲ್ಲಿಯ ಸಿಬ್ಬಂದಿಗೆ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ಕೂಡಲೇ ಹೋಟೆಲ್ ಸಿಬ್ಬಂದಿ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಕರ್ನಾಟಕ ಪೊಲೀಸರಿಗೆ ಮಾಹಿತಿ ರವಾನೆ
ಹೋಟೆಲ್ನಿಂದಲೇ ಕಾರ್ ಬುಕ್ ಆಗಿದ್ದರಿಂದ ಗೋವಾ ಪೊಲೀಸರಿಗೆ ಸುಚನಾ ಪ್ರಯಾಣದ ಮಾಹಿತಿ ಸಿಕ್ಕಿದೆ. ಕೂಡಲೇ ಕರ್ನಾಟಕ ಪೊಲೀಸರಿಗೆ ಸುಚನಾ ಪ್ರಯಾಣಿಸುತ್ತಿರುವ ಕಾರ್ ನಂಬರ್ ರವಾನಿಸಿದ್ದಾರೆ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ ತಪಾಸಣೆ ನಡೆಸಿದಾಗ ಸುಚನಾಳ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಗೋವಾ ಪೊಲೀಸರ ವಶಕ್ಕೆ ಪಾಪಿ ತಾಯಿ
ಸದ್ಯ ಮಗುವಿನ ಮೃತದೇಹವನ್ನು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸುಚನಾಳ ಪತಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಗೋವಾ ಪೊಲೀಸರು ಸುಚನಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮಗುವಿನ ಮೃತದೇಹವನ್ನು ಕುಟುಂಬಸ್ಥರಿಗೆ ವರ್ಗಾಯಿಸಲಾಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1