ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಗುಡ್ ನ್ಯೂಸ್ : ಮುಖ್ಯ ಶಿಕ್ಷಕರ ʻಬಡ್ತಿʼ ಪ್ರಕ್ರಿಯೆಗೆ ಸೂಚನೆ.

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆ ಮತ್ತು ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವುದರ ಜೊತೆಗೆ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಮೇಲಿನ ವಿಷಯದನ್ವಯ, 2023-24ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ (HM) ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ (SHM) ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಿ ಉಲ್ಲೇಖಿತ-9ರಲ್ಲಿ ಬಡ್ತಿ ಕುರಿತಂತೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ ಸರ್ಕಾರದ ಆದೇಶದಂತೆ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ‘ಸಿ’ ವೃಂದದ ಹುದ್ದೆಗಳಿಗೆ ಬಡ್ತಿ ನೀಡುವ ಸಂದರ್ಭದಲ್ಲಿ ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಹಾಗೂ ಅಂಗವೈಕಲ್ಯತೆಯನ್ನು ಗುರುತಿಸುವ ಬಗ್ಗೆ. ಮಾರ್ಗಸೂಚಿ ಹೊರಡಿಸುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ಚಾಲ್ತಿಯಲ್ಲಿದೆ. ಜಿಲ್ಲೆಯಲ್ಲಿ ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಎದುರಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ, ಮುಖ್ಯ ಶಿಕ್ಷಕರಿಗೆ ಹಿರಿಯ ಶಿಕ್ಷಕರ ಹುದ್ದೆಗೆ ನೀಡುವ ಸಕ್ಷಮ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪನಿರ್ದೆಶಕರು(ಆಡಳಿತ)ರವರುಗಳ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಕ್ಕೆ ರಾಜ್ಯದಾದ್ಯಂತ ಏಕಕಾಲದಲ್ಲಿ ಕೆಳಕಂಡ ನಿಯಮಾನುಸಾರ ಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಬೇಕಾಗಿದೆ.

ಪ್ರಯುಕ್ತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಉಲ್ಲೇಖ-1ರ ಜೈಷತಾ ನಿಯಮಾನುಸಾರ ದಿನಾಂಕ: 01/01/2023ರಲ್ಲಿದ್ದಂತೆ ಆಯಾ ವೃಂದವಾರು ಪ್ರಕಟಿಸಲಾಗಿರುವ ಜಿಲ್ಲಾ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗಿದ್ದು ಉಲ್ಲೇಖ-9 ಅಧಿಸೂಚನೆಯಲ್ಲಿ ಪ್ರಕಟಿತ ವೇಳಾಪಟ್ಟಿಯಂತೆ ಜಿಲ್ಲಾ ಹಂತದಲ್ಲಿ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಮುಖ್ಯಶಿಕ್ಷಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಭಾವಿಸಲಾಗಿದೆ.

ಆ ನಂತರ ಬಿಂದುವಿನಿಂದ ಮುಂದುವರೆಸತಕ್ಕದ್ದು” ರೋಸ್ಟರ್ ಮತ್ತು ಬಿಂದು ಗುರುತಿಸುವಿಕೆಯ ಬಗ್ಗೆ ಬಡ್ತಿ ವಹಿಯಲ್ಲಿ ಸ್ಪಷ್ಟವಾಗಿ ನಮೂದಿಸತಕ್ಕದ್ದು. ಇದನ್ನು ಕಛೇರಿಯ ಅಧಿಕೃತ ಶಾಶ್ವತ ದಾಖಲೆಯನ್ನಾಗಿ ನಿರ್ವಹಿಸತಕ್ಕದ್ದು ಕಾರಣ ಮುಂದಿನ ದಿನಗಳಲ್ಲಿ ಬಡ್ತಿ ಪ್ರಕ್ರಿಯೆಗೆ ಅಗತ್ಯವಾಗಿ ಸಹಕಾರಿಯಾಗುತ್ತದೆ.

ರ್ನಾಟಕ ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ-2019 ರಾಜ್ಯ ಪತ್ರ ಆದೇಶ ಸಂಖ್ಯೆ: WCD 209 PHP 2017 (Part-2) Date: 30/8/2019 더 수완 – 21 ವಿಧದ ದೈಹಿಕ ಅಂಗವೈಕಲ್ಯತೆಯ ಕುರಿತಾಗಿ ನಮೂನೆ 4. 5 ಮತ್ತು 6 ರಲ್ಲಿ ನಿಗಧಿಪಡಿಸಿರುವ ನಮೂನೆಯಲ್ಲಿರುವಂತೆ ವೈದ್ಯಕೀಯ ಮಂಡಳಿಯಿಂದ ಪ್ರಸ್ತುತ ಬಡ್ತಿಗೆ ಅಧಿಸೂಚಿಸಿದ ದಿನಾಂಕದ ನಂತರ ಪ್ರಮಾಣ ಪತ್ರವನ್ನು ಪಡೆದಿರುವ ಶಿಕ್ಷಕರನ್ನು ಮಾತ್ರ ಅಂಗವೈಕಲ್ಯತೆಯ ಮೀಸಲಾತಿಯಲ್ಲಿ ಅರ್ಹತೆ ಇದಲ್ಲಿ ನಿಯಮಾನುಸಾರ ಪರಿಗಣಿಸುವುದು.

ಬಡ್ತಿಗೆ ಶಿಕ್ಷಕರ ಅಂಗವೈಕಲ್ಯತೆ ಹೊಂದಿದ್ದಲ್ಲಿ ಮಾತ್ರ ನಿಯಮಾನುಸಾರ ಪರಿಗಣಿಸುವುದು. ಶಿಕ್ಷಕರ ಅವಲಂಬಿತರು ಅಂಗವೈಕಲ್ಯತೆಯನ್ನು ಹೊಂದಿದ್ದಲ್ಲಿ ಆಧ್ಯತೆಯನ್ನು /ಮೀಸಲಾತಿಯನ್ನು ಬಯಸಿದ್ದಲ್ಲಿ ಅಂತಹ ಪ್ರಕರಣವನ್ನು ಬಡ್ತಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ. ಉಳಿದಂತೆ ಉಲ್ಲೇಖ-9 ರಲ್ಲಿನ ಅಧಿಸೂಚನೆಯಲ್ಲಿನ ಅಂಶಗಳು ಮುಂದುವರೆದಿರುತ್ತದೆ.

ಹಿನ್ನೆಲೆಯಲ್ಲಿ ಈ ಕೆಳಕಂಡ ವೇಳಾಪಟ್ಟಿಯನುಸಾರ ಬಡ್ತಿ ಪ್ರಕ್ರಿಯೆಯನ್ನು ಪ್ರಾಧಿಕಾರವಾದ ಉಪನಿರ್ದೇಶಕರು(ಆಡಳಿತ) ರವರು ರಾಜ್ಯಾಧ್ಯಂತ ಏಕಕಾಲಕ್ಕೆ ಕೈಗೊಳ್ಳಲು ಅಧಿಕೃತ ಜಾಪನವನ್ನು ಪ್ರಕಟಿಸಲಾಗಿದೆ. ಅದರಂತೆ ಬಡ್ತಿ ಪ್ರಕ್ರಿಯೆ ಕೈಗೊಳ್ಳುವ ಮುಂಚಿತವಾಗಿ ‘ಸಿ’ ವಲಯದಲ್ಲಿ ಅಗತ್ಯಾನುಸಾರ ಹುದ್ದೆಯನ್ನು ಸೃಜಿಸಿಕೊಳ್ಳಲು ಅನುವಾಗುವಂತೆ ಕ್ರಮ ಕೈಗೊಳ್ಳಲು ಕೆಳಕಂಡಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *