
ಮೇಷ : ಮಂಗಳನ ಪ್ರಭಾವ ನಿಮ್ಮ ರಾಶಿಯ ಮೇಲಿದ್ದು, ಕೌಂಟುಬಿಕ ವ್ಯವಹಾರಗಳು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಕಠಿಣ ಪರಿಶ್ರಮದ ಮೂಲಕ ವೃತ್ತಿಪರ ವಿಚಾರಗಳಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ.
ವೃಷಭ : ಹಣಕಾಸಿನ ಸುದ್ದಿಗಳು ಆಶಾವಾದಿಯಾಗಿರಬಹುದು ಮತ್ತು ದೀರ್ಘ-ಯೋಜಿತ ಉದ್ಯಮದಲ್ಲಿ ಪಾಲುದಾರರೊಂದಿಗೆ ಸೇರಿಕೊಳ್ಳಲು ಇದು ಉಪಯುಕ್ತವಾಗಬಹುದು. ಸಾಮಾಜಿಕವಾಗಿ ಒತ್ತಡಗಳು ಹೆಚ್ಚಾಗಬಹುದು. ವ್ಯಾಪಾರ-ವ್ಯವಹಾರ ಉತ್ತಮವಾಗಿರಲಿವೆ. ಪ್ರೀತಿಪಾತ್ರರ ಮೇಲೆ ಅನುಮಾನ ಬೇಡ.
ಮಿಥುನ : ಆಸಕ್ತಿದಾಯಕ ಸುದ್ದಿಗಳು ನಿಮ್ಮನ್ನು ಹೊಸ ಕ್ರಮದ ಹಾದಿಯಲ್ಲಿ ಇರಿಸಬಹುದು, ನಿಮ್ಮ ಆಲೋಚನೆಗಳನ್ನು ಉತ್ತಮವಾಗಿ ಬಳಸಿಕೊಳ್ಳಿ. ಪ್ರಯಾಣ ಸಾಧ್ಯತೆಗಳಿವೆ. ಹೊಸ ವ್ಯವಹಾರ, ವ್ಯಾಪಾರಕ್ಕಿದೂ ಉತ್ತಮ ಸಮಯವಾಗಿದೆ.
ಕರ್ಕಟಕ : ಕೌಟುಂಬಿಕ ಸಮಸ್ಯೆಗಳಿಂದ ನೊಂದಿರಬಹುದು. ಶೀಘ್ರದಲ್ಲೇ ಆ ಸಮಸ್ಯೆಗಳು ದೂರಾಗಲಿದೆ. ಆತುರ ಬೇಡ, ಉತ್ತಮ ಸಮಯಕ್ಕಾಗಿ ಕಾಯಿರಿ.
ಸಿಂಹ : ಗುರಿ ತಲುಪಲು ಇದು ಉತ್ತಮ ಸಮಯ. ಮಾಡಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಿ ಮುಗಿದ ಸಂಭ್ರಮ ನಿಮ್ಮಲ್ಲಿದೆ. ಸೃಜನಶೀಲ ಚಿಂತನೆಯು ಬೇರೂರಿರುವ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಲಹೆಗಳಿಂದ ಕಠಿಣ ನಿರ್ಧಾರಗಳು ಬೇಡ.
ಕನ್ಯಾ : ವಿಶ್ರಾಂತಿ ಇಲ್ಲ ಎಂಬ ಭಾವನೆ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳೊಂದಿಗೆ ಬೆರೆಯಲು ಪ್ರಯತ್ನಿಸಿ. ಜೊತೆಗಿದ್ದೇ ಎದುರಾಳಿಗಳನ್ನು ಎದುರಿಸಿ.
ತುಲಾ : ಸಮಯ ವ್ಯರ್ಥ ಮಾಡುವ ವ್ಯಕ್ತಿ ನೀವಲ್ಲ. ಗೊಂದಲ ಬೇಡ, ಯಾವುದೇ ಕೆಲಸಕ್ಕೂ ಮುನ್ನು ನಿಮ್ಮದೇ ವೇಳಾಪಟ್ಟಿ ರೂಪಿಸಿಕೊಳ್ಳಿ. ತೆಗೆದುಕೊಂಡ ನಿರ್ಧಾರಗಳು ಯೋಜಿಸಿದಂತೆ ಕಾರ್ಯಗತಗೊಳ್ಳುವ ಎಲ್ಲಾ ಚಿಹ್ನೆಗಳು ಇವೆ.
ವೃಶ್ಚಿಕ : ಮಾತಿನ ಮೇಲೆ ಹಿಡಿತವಿರಲಿ. ಸಂಬಂಧಿಕರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ನಿರ್ಧಾರಗಳ ತೆಗೆದುಕೊಳ್ಳಲು ಇದು ಸಕಾಲವಲ್ಲ. ಮಕ್ಕಳು ಹಾಗೂ ಕುಟುಂಬ ಸದಸ್ಯರಿಗೆ ನಿಮ್ಮ ಸಮಯ ನೀಡಿ.
ಧನು : ಪ್ರಯಾಣದ ಸಾಧ್ಯತೆಗಳಿವೆ. ಸಿದ್ಧತೆ ಉತ್ತಮವಾಗಿ ಮಾಡಿಕೊಳ್ಳಿ. ಇತ್ತೀಚಿನ ಪರಿಸ್ಥಿತಿಗಳು ಒತ್ತಡವನ್ನುಂಟು ಮಾಡಿರಬಹುದು, ಆದರೂ ನಿಮ್ಮ ಹೊಸ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಹೊಣೆಯನ್ನು ನೆನಪಿನಲ್ಲಿಟ್ಟುಕೊಳ್ಳಿ. ಮುಂದಿನ ವಾರದ ಆರಂಭದ ವೇಳೆಗೆ ನೀವು ಅಗತ್ಯವಿರುವ ಎಲ್ಲಾ ಬದಲಾವಣೆಗಳನ್ನು ನೋಡಲಿದ್ದೀರಿ.
ಮಕರ : ವೃತ್ತಿಪರವಾಗಿ, ಬಿಡುವಿಲ್ಲದ ಸಮಯದಲ್ಲಿದ್ದರೂ ಭಾವನಾತ್ಮಕ ತೊಡಕುಗಳು ಮತ್ತು ವೈಯಕ್ತಿಕ ಸಂಬಂಧಗಳ ಕಡೆಗೆ ನಿಮ್ಮ ಗಮನ ಹೆಚ್ಚು ಸೆಳೆಯಬಹುದು. ನಿರ್ದಿಷ್ಟ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ನೀವೇ ಕೇಳಿಕೊಳ್ಳಬೇಕು ತದನಂತರ ನೀವು ಅದನ್ನು ಹೇಗೆ ಪಡೆಯಬಹುದು ಎಂಬುದನ್ನು ಕಂಡುಕೊಳ್ಳಿ.
ಕುಂಭ : ಉತ್ಸಾಹಭರಿತವಾಗಿರಲಿದ್ದೀರಿ, ಏನನ್ನಾದರೂ ಉತ್ತಮವಾಗಿ ಮಾಡಲು ಬಯಸುತ್ತಿದ್ದೀರಿ. ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಹಣದಿಂದ ಕೆಲ ಸಮಸ್ಯೆಗಳು ದೂರಾಗುವ ಸಾಧ್ಯತೆಗಳಿವೆ.
ಮೀನ : ದಿನನಿತ್ಯದ ಕೆಲಸಗಳನ್ನು ಮಾಡಿ. ನೀವು ಉದ್ದೇಶಿಸಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಬಹುದು. ನಿರೀಕ್ಷೆಗಿಂತಲೂ ಮುಂದೆ ಸಾಗಲಿದ್ದೀರಿ. ಈ ಸಂದರ್ಭದಲ್ಲಿ ಒತ್ತಡಗಳು ಹೆಚ್ಚಾಗಬಹುದು. ಹಣಕಾಸು ವಿಚಾರದಲ್ಲಿ ಎಚ್ಚರದಿಂದಿರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1