Bengaluru-Dharwad Vande Bharat: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ದರ, ವಿವರ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2047 ರ ವೇಳೆಗೆ ದೇಶಾದ್ಯಂತ 4,500 ವಂದೇ ಭಾರತ್ ರೈಲುಗಳು ಇರಲಿದೆ ಎಂದು 2023ರ ಡಿಸೆಂಬರ್‌ನಲ್ಲಿ ತಿಳಿಸಿದರು. 2026 ಮತ್ತು 27 ರ ನಡುವೆ ಭಾರತವು ತನ್ನ ಮೊದಲ ಹೈಸ್ಪೀಡ್ ಬುಲೆಟ್ ರೈಲು ಹೊಂದಲಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಈ ವರ್ಷವು ಹಲವಾರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಆರಂಭವಾಗಲಿದೆ. ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದು ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮತ್ತು ಇದು ಕರ್ನಾಟಕದ ರಾಜಧಾನಿ ಮತ್ತು ಅವಳಿ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ…..

ಬೆಂಗಳೂರು ಮತ್ತು ಹುಬ್ಬಳ್ಳಿಯ – ಧಾರವಾಡ ವಂದೇ ಭಾರತ ಸಮಯನೈಋತ್ಯ ರೈಲ್ವೆ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಬೆಳಿಗ್ಗೆ 5.45 ಕ್ಕೆ ಹೊರಡಲಿದ್ದು, ಮಧ್ಯಾಹ್ನ 12.10 ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಆರಂಭವಾಗಲಿದ್ದು, ರಾತ್ರಿ 7.45ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ಪ್ರಯಾಣದ ಸಮಯ ಸರಿಸುಮಾರು 6 ಗಂಟೆ 30 ನಿಮಿಷಗಳು ಆಗಿದೆ. ಇದು ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.

Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಹೊಸ ಸೌಕರ್ಯಗಳು, ಏನೆಲ್ಲ? ಮಾಹಿತಿ, ವಿವರಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಟಿಕೆಟ್ ಬೆಲೆವಂದೇ ಭಾರತ್ ಎಕ್ಸ್‌ಪ್ರೆಸ್ ಎಕ್ಸಿಕ್ಯೂಟಿವ್ ಚೇರ್ (ಇಸಿ) ಮತ್ತು ಎಸಿ ಚೇರ್‌ ಕಾರ್‌ (ಸಿಸಿ) ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಇಸಿ ಟಿಕೆಟ್ ದರ 2010 ರೂಪಾಯಿ ಆಗಿದೆ. ಸಿಸಿ ಟಿಕೆಟ್ ದರ 1165 ರೂಪಾಯಿ ಆಗಿದೆ. ಧಾರವಾಡದಿಂದ ಬೆಂಗಳೂರಿಗೆ ಇಸಿ ಟಿಕೆಟ್ ದರ 2440 ರೂಪಾಯಿ ಆಗಿದೆ. ಸಿಸಿ ಟಿಕೆಟ್ ದರ 1330 ರೂಪಾಯಿ ಆಗಿದೆ.ಧಾರವಾಡ – ಬೆಂಗಳೂರು ಟಿಕೆಟ್ ದರ ಹೆಚ್ಚಾಗಿರುತ್ತದೆ. ಏಕೆಂದರೆ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ತಿಂಡಿಯೊಂದಿಗೆ ಊಟ ಕೂಡಾ ಪಡೆಯುತ್ತಾರೆ. ಆದರೆ ಬೆಂಗಳೂರು – ಧಾರವಾಡ ಪ್ರಯಾಣಿಕರಿಗೆ ಉಪಹಾರ ಮತ್ತು ತಿಂಡಿ ಮಾತ್ರ ಸಿಗುತ್ತದೆ.ಬೆಂಗಳೂರು ಮತ್ತು ಹುಬ್ಬಳ್ಳಿ – ಧಾರವಾಡ ವಂದೇ ಭಾರತಕ್ಕೆ ನಿಲ್ದಾಣಗಳು ಭಾರತೀಯ ರೈಲ್ವೆಯ ಈ ಪ್ರಮುಖ ವಂದೇ ಭಾರತ್ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣ ಮತ್ತು ಧಾರವಾಡ ನಿಲ್ದಾಣದ ನಡುವೆ ಮೂರು ನಿಲ್ದಾಣಗಳನ್ನು ಹೊಂದಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಯಶವಂತಪುರ, ದಾವಣಗೆರೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಬೆಂಗಳೂರು ಮತ್ತು ಧಾರವಾಡ ನಡುವಿನ ರೈಲು ಮಾರ್ಗದ ಅಂತರವು 489 ಕಿಲೋಮೀಟರ್‌ಗಳು ಆಗಿದ್ದು, ಇದು ಸರಾಸರಿ 70 ಕಿಮೀ ವೇಗದಲ್ಲಿ ಚಲಿಸುತ್ತದೆ. ಇತರ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ರೈಲುಗಳು ಹಲವಾರು ನಿಲುಗಡೆ ಹೊಂದಿದ್ದು, ಏಳರಿಂದ ಎಂಟು ಗಂಟೆಗಳ ಪ್ರಯಾಣದ ಸಮಯ ತೆಗೆದುಕೊಳ್ಳುತ್ತದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *