ಮಂದಹಾಸ ಬೀರುತ್ತಿರುವ ಬಾಲರಾಮನ ಮೊದಲ ನೋಟ ಇಲ್ಲಿದೆ ನೋಡಿ. ಭಾವಪರವಶವಾಗೋದು ಖಚಿತ.

ಅಯೋಧ್ಯೆ: ದೇಶದ ಜನತೆಗೆ ಇದುವರೆಗೂ ಕಾತರದಿಂದ ಎದುರು ನೋಡುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ಹೌದು, ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾದ ವಿಧಿ-ವಿಧಾನಗಳು ನೇರವೇರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಐತಿಹಾಸಿಕ ಸಮಾರಂಭ ನಡೆಯುತ್ತಿದ್ದು, ದೇಶದ ಸಾಕಷ್ಟು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಅಲ್ಲದೆ, ರಾಮಲಲ್ಲಾನ ಮೊದಲ ನೋಟದ ವಿಡಿಯೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಮಂದಹಾಸ ಬೀರುತ್ತಿರುವ ರಾಮನ ವಿಗ್ರಹ ನೋಡಿದವರು ಭಕ್ತಿಯಲ್ಲಿ ಭಾವಪರವಶವಾಗುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಿತು. ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಯೋಗಿ ಆದಿತ್ಯನಾಥ್ ಸಹ ಪ್ರಾಣ ಪ್ರತಿಷ್ಠಾದಲ್ಲಿ ಭಾಗಿಯಾಗಿದ್ದಾರೆ.

ಗರ್ಭಗುಡಿಯಲ್ಲಿ ನೆಲೆ ನಿಂತಿರುವ ಬಾಲರಾಮ ಅಥವಾ ರಾಮಲಲ್ಲಾ ಹೂವಿನ ಹಾರ ಮತ್ತು ಒಡವೆಗಳಿಂದ ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ರಾಮ ಲಲ್ಲಾನ ವಿಗ್ರಹವನ್ನು ಅನಾವರಣಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ನೂತನವಾಗಿ ಅನಾವರಣಗೊಂಡ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ರಾಮಲಲ್ಲಾ ಮೂರ್ತಿಯ ಪಾದಗಳಿಗೆ ಕಮಲದ ಹೂವನ್ನು ಅರ್ಪಿಸಿದರು.

ವಿಷ್ಣು ದೇವರ ಪ್ರಾರ್ಥನೆಯೊಂದಿಗೆ ಆರಂಭ
ಪ್ರಾಣ ಪ್ರತಿಷ್ಠಾ ಸಮಾರಂಭವು ವಿಷ್ಣು ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪುರೋಹಿತರು ಶ್ರೀರಾಮನ ಸನ್ನಿಧಿಯಲ್ಲಿ ಮಂತ್ರಗಳನ್ನು ಪಠಿಸಿದರು. ವಿಶೇಷ 84 ಸೆಕೆಂಡುಗಳ ಮಂಗಳಕರ ‘ಮಹೂರ್ತ’ ಸಮಯದಲ್ಲಿ, ರಾಮಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಲಾಯಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *