ರಾಮಮಂದಿರ ಉದ್ಘಾಟನೆಯಂದೇ ಧ್ರುವ ಮಕ್ಕಳ ನಾಮಕರಣ: ರಾಮಾಯಣಕ್ಕೆ ಹೊಂದಿದ ಹೆಸರಿಟ್ಟ ಸರ್ಜಾ ಫ್ಯಾಮಿಲಿ!

Dhruva Children Naming Ceremony: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಶುಭ ದಿನವೇ ನಾಮಕರಣ ನೆರವೇರಿಸಿ, ರಾಮಾಯಣಕ್ಕೆ ಸಂಬಂಧಿಸಿದ ಹೆಸರನ್ನು ಇಟ್ಟಿದ್ದಾರೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.

Dhruva Sarja Children Naming Ceremony: ದೇಶದೆಲ್ಲೆಡೆ ಜನರು ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಕಾಯ್ತಾಯಿದ್ದು, ಇಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರು, ಕ್ರೀಡಾಪಟುಗಳಿಗೆ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಇದೇ ಸಂದರ್ಭದಲ್ಲಿ ಆಕ್ಷನ್‌ ಪ್ರನ್ಸ್‌ ಧ್ರುವ ಸರ್ಜಾ ಕುಟುಂಬದಲ್ಲಿ ವಿಶೇಷವೊಂದು ನಡೆದಿದೆ. 

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಶುಭ ದಿನದಂದೆ ರಾಮ, ಆಂಜನೇಯನ ಭಕ್ತ ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಕ್ಕೆ ನಿರ್ಧರಿಸಿದ್ದರು. ಅದರಂತೆ ಇಂದು ಕುಟುಂಬಸ್ಥರ ಸಮುಖದಲ್ಲಿ ಪುತ್ರ – ಪುತ್ರಿಯ ನಾಮಕರಣ ಚಿರು ಸರ್ಜಾ ಸಮಾಧಿ ಇರೋ ನೆಲಗುಳಿಯ ತಮ್ಮ ಫಾರ್ಮ್ ಹೌಸ್‌ನಲ್ಲಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಧ್ರುವ ಸೋದರಮಾವ  ಅರ್ಜುನ್ ಸರ್ಜಾ ಸಹ ಭಾಗಿಯಾಗಿದ್ದರು.

ಈ ಹಿಂದೆ ಧ್ರುವ ಸರ್ಜಾ ಹಾಗೂ ಸರ್ಜಾ ಕುಟುಂಬ ಆಂಜನೇಯ ಹಾಗೂ ಶ್ರೀರಾಮನ ಭಕ್ತರಾಗಿರುವುದರಿಂದ ಮಕ್ಕಳಿಗೆ ಇಡುವ ಹೆಸರು ರಾಮಾಯಣಕ್ಕೆ ಹೊಂದಿಕೊಂಡಂತೆ ಇರುತ್ತೆ ಎಂದು ಹೇಳಲಾಗುತ್ತಿದೆ. ಅದರಂತೆ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿ ತಮ್ಮ ಮಗಳಿಗೆ ‘ರುದ್ರಾಕ್ಷಿ ಧ್ರುವ ಸರ್ಜಾ‘ ಎಂಬ ಹೆಸರನ್ನು ನಾಮಕರಣ ಮಾಡಿದರು. ಹಾಗೆಯೇ ತಮ್ಮ ಪುತ್ರನಿಗೆ  ‘ಹಯಗ್ರೀವ’  ಹೆಸರನ್ನು ಇಟ್ಟಿದ್ದಾರೆ. ಈ ಶುಭಸಮಾರಂಭವನ್ನು ಅರ್ಜುನ್ ಸರ್ಜಾ ನಡೆಸಿ ಕೊಟ್ಟಿದ್ದಾರೆ.

ಈ ಹಿಂದೆ ಮಗಳು ಜನಿಸಿದಾಗಲೇ ನಾಮಕರಣ ಯಾವಾಗ ಅಂತ  ಆಕ್ಷನ್‌ ಪ್ರಿನ್ಸ್‌ ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದು, ಅದಕ್ಕೆ ಧ್ರುವ ಸರ್ಜಾ ಒಂದು ಸಮಯ ನೋಡಿ ನಾಮಕರಣ ಮಾಡುತ್ತೇವೆ ಅಂತ ಪ್ರತಿಕ್ರಿಯೆ ನೀಡಿದ್ದರು. ಆದರೆ ಮಗಳು ಜನಿಸಿದ ಬಳಿಕ ಪುತ್ರನ ಜನನ ಆಗಿದ್ದರೂ, ಮಗಳಿಗೆ ಹೆಸರಿಟ್ಟಿರದ ಕಾರಣ, ಈ ಪ್ರಶ್ನೆ ಅಭಿಮಾನಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಬರುತ್ತಲೇ ಇತ್ತು. ಇದೀಗ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಈ ವಿಶೇಷ ದಿನದಂದೇ ನಾಮಕರಣ ಮಾಡಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *