ಪೇಪರ್ ಕಪ್ ನಲ್ಲಿ ಟೀ ಕುಡಿಯುವುದು ಎಷ್ಟೊಂದು ಹಾನಿಕಾರಕ ಗೊತ್ತಾ?

Paper Cup Side Effects: ಇದರಿಂದ ಆರೋಗ್ಯದ ಸಮಸ್ಯೆ ಎದುರಾಗಬಹುದು. ಪೇಪರ್ ಕಪ್ ನಲ್ಲಿ ಟೀ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ.

  • ಪೇಪರ್ ಕಪ್ ನಲ್ಲಿ ಟೀ ಕುಡಿಯುವುದರ ದುಷ್ಪರಿಣಾಮ
  • ಪೇಪರ್ ಕಪ್ ನಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ
  • ಪೇಪರ್ ಕಪ್ ನಿಂದ ದೇಹಕ್ಕೆ ಎದುರಾಗುವ ಸಮಸ್ಯೆ

ಪ್ರತಿ ಟೀ ಸ್ಟಾಲ್ ಅಥವಾ ಕಛೇರಿಯಲ್ಲಿ ನಾವು ಪೇಪರ್ ಕಪ್‌ನಲ್ಲಿ ಚಹಾವನ್ನು ನೀಡುವುದನ್ನು ನೋಡುತ್ತೇವೆ. ನೀವೂ ಪೇಪರ್ ಕಪ್ ನಲ್ಲಿ ಟೀ ಕುಡಿಯುತ್ತಿದ್ದರೆ ಎಚ್ಚರದಿಂದಿರಿ. ಇದರಿಂದ ಆರೋಗ್ಯದ ಸಮಸ್ಯೆ ಎದುರಾಗಬಹುದು. ಪೇಪರ್ ಕಪ್ ನಲ್ಲಿ ಟೀ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ.

ಸಾಮಾನ್ಯವಾಗಿ ಪೇಪರ್ ಕಪ್ ಮೇಲೆ ರಾಸಾಯನಿಕಗಳಿಂದ ಮಾಡಿದ ಡಿಸೈನ್‌ ಇರುತ್ತವೆ. ಈ ಕಾರಣದಿಂದಾಗಿ, ವಿಷವು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಇದು ಸ್ಲೋ ಪಾಯಿಸನ್‌ ರೀತಿ ಕಾರ್ಯನಿರ್ವಹಿಸುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಗಂಭೀರ ಸಮಸ್ಯೆಗಳಿಗೆ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ.

ಇದು ಮೂತ್ರಪಿಂಡಗಳ ಮೇಲೂ ನೇರ ಪರಿಣಾಮ ಬೀರುತ್ತದೆ. ಇದಲ್ಲದೆ, ಪೇಪರ್ ಕಪ್‌ಗಳಲ್ಲಿ ಚಹಾವನ್ನು ಕುಡಿಯುವವರಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಉಂಟಾಗುತ್ತದೆ. ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ 2 ರಿಂದ 3 ಬಾರಿ ಪೇಪರ್ ಕಪ್‌ನಿಂದ ಚಹಾವನ್ನು ಸೇವಿಸಿದರೆ, ಅವನ ದೇಹವು 75,000 ಸೂಕ್ಷ್ಮ ಕಣಗಳನ್ನು ಪಡೆಯುತ್ತದೆಯಂತೆ. ಪೇಪರ್ ಕಪ್ ಅನ್ನು ಮೃದುಗೊಳಿಸಲು ಮತ್ತುಅಂಟಿಸಲು ಫೆವಿಕಾಲ್‌ನಂತಹ ರಾಸಾಯನಿಕ ಗಮ್ ಅನ್ನು ಸಹ ಬಳಸಲಾಗುತ್ತದೆ. ಆ ಕಪ್‌ಗೆ ಬಿಸಿಯಾದ ಟೀ ಸುರಿದಾಗ ಚಹಾದಲ್ಲಿ ಹಲವು ಬಗೆಯ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. 

ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *