ಅನೇಕ ಮಹಿಳೆಯರು ಕಂಪನಿಗಳಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಸಹ ಭಾರತೀಯ ವಿದ್ಯುತ್ ವಲಯದ ಹೈಡ್ರೋ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸ್ (ಸಿಪಿಎಸ್ಇ) ಅನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ ನೋಡಿ.

ಮೊದಲೆಲ್ಲಾ ಮಹಿಳೆಯರು (Womens) ಗಂಡ, ಮಕ್ಕಳು ಅಂತ ಸಂಸಾರ ನೋಡಿಕೊಂಡು ಇದ್ದು ಬಿಡುತ್ತಿದ್ದರು, ಮಹಿಳೆಯರ ಪಾತ್ರ ಬರೀ ಮನೆಗೆ ಸೀಮಿತವಾಗಿತ್ತು. ಆದರೆ ಈಗ ಮಹಿಳೆಯರು ತಮ್ಮ ಮನೆ, ಸಂಸಾರವನ್ನು ನಿಭಾಯಿಸುವುದರ ಜೊತೆಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಪುರುಷರಿಗೆ ಸರಿಸಮಾನ ಎಂಬಂತೆ ಕೆಲಸ ಮಾಡುತ್ತಿದ್ದಾರೆ ಅಂತ ಹೇಳಬಹುದು.
ಪುರುಷರಂತೆ ಮಹಿಳೆಯರು ಸಹ ಇಂದು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಉನ್ನತವಾದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಭಾರತ ದೇಶದಲ್ಲಿ ಮಹಿಳೆಯರು ಪುರುಷರಿಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ ಕೆಲಸ ಮಾಡಿ ಭೇಷ್ ಅಂತ ಅನ್ನಿಸಿಕೊಳ್ಳುತ್ತಿದ್ದಾರೆ.
ಹೊಸ ಹೊಸ ದಾಖಲೆಗಳನ್ನು ಮಾಡುತ್ತಿರುವ ಮಹಿಳೆಯರು
ಅನೇಕ ಮಹಿಳೆಯರು ಕಂಪನಿಗಳಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. ಇದರ ಬಗ್ಗೆ ಈಗೇಕೆ ಮಾತು ಅಂತೀರಾ?
ಮೊದಲ ಬಾರಿಗೆ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಸಂಪೂರ್ಣ ಮಹಿಳಾ ತುಕಡಿಯು 2024ರ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಸಾಗಿತು.
ಈಗ ಮತ್ತೊಬ್ಬ ಮಹಿಳೆಯು ಭಾರತೀಯ ವಿದ್ಯುತ್ ವಲಯದ ಹೈಡ್ರೋ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸ್ (ಸಿಪಿಎಸ್ಇ) ಅನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ ನೋಡಿ.
ಹೌದು.. ಅವರ ಹೆಸರು ಗೀತಾ ಕಪೂರ್ ಅಂತ, ಅವರು ಸರ್ಕಾರಿ ಸ್ವಾಮ್ಯದ ಸಟ್ಲಜ್ ಜಲ್ ವಿದ್ಯುತ್ ನಿಗಮ್ ಲಿಮಿಟೆಡ್ (SJVNL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (CMD) ಹುದ್ದೆಯ ಹೆಚ್ಚುವರಿ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.
ಈ ಹಿಂದೆ, ಅವರು ಜಲವಿದ್ಯುತ್ ಉತ್ಪಾದನೆ ಮತ್ತು ಪ್ರಸರಣದಲ್ಲಿ ತೊಡಗಿಸಿಕೊಂಡಿರುವ ಪಿಎಸ್‌ಯು ನಿರ್ದೇಶಕ (ಸಿಬ್ಬಂದಿ) ಪ್ರಭಾರವನ್ನು ಹೊಂದಿದ್ದರು.
ಎಸ್‌ಜೆವಿಎನ್ಎಲ್ ಉಸ್ತುವಾರಿ ವಹಿಸಿಕೊಂಡ ಗೀತಾ ಕಪೂರ್
ಇದಕ್ಕೂ ಮೊದಲು, ಕಪೂರ್ 2018 ರಲ್ಲಿ (ಎಸ್‌ಜೆವಿಎನ್) ಮೊದಲ ಪೂರ್ಣ ಸಮಯದ ಮಹಿಳಾ ನಿರ್ದೇಶಕರಾಗಿ ಇತಿಹಾಸವನ್ನು ನಿರ್ಮಿಸಿದರು. ಅವರು 1992 ರಲ್ಲಿ ಎಸ್‌ಜೆವಿಎನ್‌ಗೆ ಸೇರಿದಾಗ ಕಂಪನಿಗೆ ಸೇರಿದ ಮೊದಲ ಮಹಿಳಾ ಸಿಬ್ಬಂದಿ ಅಧಿಕಾರಿಯಾದರು. 59 ವರ್ಷ ವಯಸ್ಸಿನ ಗೀತಾ ಕಪೂರ್ ಅವರು ಮೂಲತಃ ಶಿಮ್ಲಾದವರಾಗಿದ್ದಾರೆ.
ಗೀತಾ ಕಪೂರ್ ಅವರು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಬಿಸಿನೆಸ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿ. ಅವರು ಎಚ್ ಆರ್ ಎಂದರೆ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ಕಪೂರ್ ಅವರು ಎಸ್‌ಜೆವಿಎನ್‌ನಲ್ಲಿ 31 ವರ್ಷಗಳಿಗಿಂತ ಹೆಚ್ಚು ವರ್ಷದ ಸೇವಾ ಅನುಭವವನ್ನು ಹೊಂದಿದ್ದಾರೆ. ಅವರು ಮಾನವ ಸಂಪನ್ಮೂಲ, ನಾಗರಿಕ ನಿರ್ಮಾಣ ಮತ್ತು ನಾಗರಿಕ ಒಪ್ಪಂದಗಳ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅನುಭವವನ್ನು ಹೊಂದಿದ್ದಾರೆ.
ಕಂಪನಿಯನ್ನ ಹೊಸ ಎತ್ತರಕ್ಕೆ ಕೊಂಡೊಯ್ದ ಕಪೂರ್ ಅವರ ವೃತ್ತಿ ಅನುಭವ
ಮಾನವ ಸಂಪನ್ಮೂಲದಲ್ಲಿ ಅವರ ಅಮೂಲ್ಯ ಅನುಭವದೊಂದಿಗೆ, ಗೀತಾ ಕಪೂರ್ ಅವರು ಹೊಸ ಹೊಸ ಉದ್ಯೋಗಿ ಸ್ನೇಹಿ ಮತ್ತು ಕಂಪನಿ ಸ್ನೇಹಿ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಕಪೂರ್ ಅವರು ವ್ಯಾಖ್ಯಾನಿಸಿದ್ದಾರೆ ಮತ್ತು ಒಕ್ಕೂಟಗಳೊಂದಿಗೆ ವೇತನ ಇತ್ಯರ್ಥವನ್ನು ಸಹ ಇವರು ಯಶಸ್ವಿಯಾಗಿ ಮಾಡುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ.
ಅಷ್ಟೇ ಅಲ್ಲದೆ, ಅವರು ಜನವರಿ 2024 ರಲ್ಲಿ ಈ ಕಂಪನಿಯನ್ನು ಪ್ರತಿಷ್ಠಿತ ‘ಗ್ರೇಟ್ ಪ್ಲೇಸ್ ಟು ವರ್ಕ್’ ಪಟ್ಟಿಗೆ ಸೇರಿಸುವಲ್ಲಿ ತುಂಬಾನೇ ಪ್ರಮುಖವಾದ ಪಾತ್ರವನ್ನು ಇವರು ವಹಿಸಿದ್ದಾರೆ ಅಂತ ಹೇಳಲಾಗುತ್ತಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1