ಗುಡಿಸಲಲ್ಲಿ ವಾಸ, ಪಾನಿಪೂರಿ ಮಾರಾಟ..! ರೋಚಕವಾಗಿದೆ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ʼಯಶಸ್ವಿʼ ಕಥೆ.

Yashaswi Jaiswal : ಸಾಧನೆ ಸಾಧಕನ ಸ್ವತ್ತು ಎನ್ನುವ ಮಾತು ಅಕ್ಷರಶಃ ಸತ್ಯ. ಯಾರು ಬೇಕಾದ್ರು ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಮುಂದೆ ಹಲವಾರು ಜೀವಂತ ನಿದರ್ಶನಗಳಿಗೆ. ಈ ಪೈಕಿ ಪೆಟ್ಟಿ ಅಂಗಡಿಯೊಬ್ಬನ ಮಗ ಇದೀಗ ಸ್ಟಾರ್‌ ಕ್ರಿಕೆಟಿಗನಾಗಿ ಹೊರ ಹೊಮ್ಮಿದ್ದು, ಇಂದಿನ ಯುವ ಪಿಳೀಗೆಗೆ ಸ್ಪೂರ್ತಿ.

ಹೌದು.. ಸಾಧಿಸುವ ಪಟ್ಟು ಬಿಡದೇ ಛಲದಿಂದ ಮುನ್ನುಗ್ಗಿದರೆ ಎಂತಹ ಗುರಿಯನ್ನಾದರೂ ʼಯಶಸ್ವಿʼಯಾಗಿಸಬಹುದು ಎನ್ನುವುದಕ್ಕೆ ಸ್ಟಾರ್‌ ಕ್ರಿಕೆಟ್‌ ಯಶಸ್ವಿ ಜೈಸ್ವಾಲ್‌ ಉತ್ತಮ ಉದಾರಹಣೆ.. ಮುಂಬೈನಲ್ಲಿ ನೆಲೆ ಇಲ್ಲದೆ, ಕನಸ್ಸನ್ನು ನನಸಾಗಿಸಲು ಯೋಧನಂತೆ ಹೊರಾಡುತ್ತಿದ್ದ ಹುಡುಗ ಇಂದು ಅಸಂಖ್ಯಾತ ಕ್ರಿಕೆಟ್‌ ಅಭಿಮಾನಿಗಳ ಹೀರೋ..

ಉತ್ತರ ಪ್ರದೇಶದ ಪೆಟ್ಟಿ ಅಂಗಡಿ ವ್ಯಾಪಾರಿಯ ಮಗ ಯಶಸ್ವಿ ಜೈಸ್ವಾಲ್‌, ಜೈಸ್ವಾಲ್‌ಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ʼನೀನು ಇಲ್ಲಿದ್ರೆ ಕ್ರಿಕೆಟರ್ ಆಗಲು ಸಾಧ್ಯವಿಲ್ಲ, ಮುಂಬೈಗೆ ಹೋಗುʼ ಎಂಬ ಮಾತನ್ನು ಬೆನ್ನತ್ತಿ 10ನೇ ವಯಸ್ಸಿನಲ್ಲಿ ಯಶಸ್ವಿ ತನ್ನ ತಂದೆಯ ಜೊತೆ ಮುಂಬೈಗೆ ಬಂದಿಳಿದಿದ್ದ.

ಮುಂಬೈ.. ಇದೊಂದು ಮಾಯಾನಗರಿ ಇಲ್ಲಿ ರಾತ್ರೋ ರಾತ್ರಿ ಯಾರು ಸ್ಟಾರ್‌ ಆಗ್ತಾರೋ.. ಪಾಪರ್‌ ಆಗ್ತಾರೋ ಗೊತ್ತಿಲ್ಲ. ಆದ್ರೂ ದಿನ ಬೆಳಗಾದ್ರೆ ಅಸಂಖ್ಯಾತ ಜನ ಗುರಿ ಮುಟ್ಟುವ ಕೆಲಸಕ್ಕೆ ಸಿದ್ದರಾಗುತ್ತಾರೆ.. ಇದಕ್ಕೆ ಕಾರಣ ಒಂದಲ್ಲ ಒಂದು ದಿನ ಸಾಧಿಸಿಯೇ ತಿರುತ್ತೇವೆ ಎನ್ನುವ ಛಲ.

ಅದರಂತೆ ಯಶಸ್ವಿ ತಂದೆಗೆ.. ತಮ್ಮ ಮಗ ಮುಂಬೈನಂತಹ ದೊಡ್ಡ ಊರಲ್ಲಿ ಹೇಗೆ ಇರಬಲ್ಲ ಎನ್ನುವ ಚಿಂತೆ. ಆದ್ರೆ ಯಾರೋ ಒಬ್ಬರು ಅಂಕಲ್ ಜೊತೆ ಇರುತ್ತೇನೆ ಅಂದಿದ್ದ ಜೈಸ್ವಾಲ್. ಆ ಅಂಕಲ್ ಬಾಂಬೆಯಲ್ಲಿ ಕೋಟೆ ಕಟ್ಟಿಕೊಂಡಿ ಕೋಟಿ ಇಟ್ಟು ಕೊಂಡಿದ್ದವರಲ್ಲ. ಅವರೂ ಒಬ್ಬ ಬಡ ವ್ಯಾಪಾರಿ.

ಆ ವ್ಯಕ್ತಿ 10 ವರ್ಷದ ಜಸ್ವಾಲ್‌ನನ್ನು ಹಾಲಿನ ಡೈರಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಹಾಕ್ತಾರೆ. ಅಲ್ಲೇ ಪುಟ್ಟ ಕೋಣೆಯೊಂದರಲ್ಲಿ ವಾಸ. ಬೆಳಗ್ಗೆ 5 ಗಂಟೆಗೆ ಎದ್ದು ಅಂಗಡಿಯನ್ನು ಕ್ಲೀನ್ ಮಾಡಿ, ಕ್ರಿಕೆಟ್ ಪ್ರಾಕ್ಟೀಸ್‌ ಮಾಡೋಕೆ ಹೋಗಬೇಕಿತ್ತು. ಕ್ರಿಕೆಟ್ ಅಭ್ಯಾಸ ಮುಗಿಸಿ ಬಂದು ಅಂಗಡಿಯಲ್ಲಿ ಕೂರಬೇಕಿತ್ತು. ಆದ್ರೆ ಬೆಳಗ್ಗೆಯಿಂದ ಕ್ರಿಕೆಟ್ ಆಡಿ ಸುಸ್ತಾಗುತ್ತಿದ್ದ ಪುಟ್ಟ ಬಾಲಕನಿಗೆ ಅಂಗಡಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಮಾಲೀಕ ಅವನನ್ನು ಕೆಲಸದಿಂದ ಓಡಿಸುತ್ತಾರೆ.

ಗೊತ್ತು ಗುರಿ ಇಲ್ಲದ ದೊಡ್ಡ ನಗರದಲ್ಲಿ ಜೈಸ್ವಾಲ್‌ ಏಕಾಂಗಿ ಓಟ ಇಲ್ಲಿಂದ ಪ್ರಾರಂಭವಾಗುತ್ತದೆ. ಒಂದು ದಿನ ಯಶಸ್ವಿ ಮುಂಬೈನ ಆಜಾದ್ ಮೈದಾನಕ್ಕೆ ಬರ್ತಾನೆ. ಅಲ್ಲಿ ಮುಸ್ಲಿಂ ಯುನೈಟೆಡ್ ಎಂಬ ಕ್ರಿಕೆಟ್ ಕ್ಲಬ್ ಇರುತ್ತದೆ. ಅವರು ಯಶಸ್ವಿ ಜೈಸ್ವಾಲ್’ಗೆ ಒಂದು ಮ್ಯಾಚ್ ಆಡುವಂತೆ ಹೇಳುತ್ತಾರೆ. ಅಲ್ಲದೆ, ಚನ್ನಾಗಿ ಆಡಿದ್ರೆ ಮಾತ್ರ ಇರೋಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ಕೊಡ್ತಾರೆ. ಇಂತಹ ಒಂದು ಅವಕಾಶಕ್ಕಾಗಿ ಕಾದಿದ್ದ ಹುಡುಗ ತನ್ನ ಬ್ಯಾಟಿಂಗ್‌ ವೈಖರಿಯಿಂದ ಅಲ್ಲಿದ್ದವರನ್ನು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡ್ತಾನೆ.. ಅಷ್ಟರ ಮಟ್ಟಿಗೆ ಚನ್ನಾಗಿ ಆಡುತ್ತಾನೆ..

ಯಶಸ್ವಿ ಆಟ ನೋಡಿ ಮೆಚ್ಚಿದ ಕೋಚ್ ಇಮ್ರಾನ್ ಬಾಲಕನನ್ನು ಒಂದು ಟೆಂಟ್ ಬಳಿ ಕರ್ಕೊಂಡ್ ಬರ್ತಾರೆ. ಅಲ್ಲಿಯೆ ಬಿಸಿಲು, ಧಗೆ, ಮಳೆ, ಚಳಿ ಅನುಭವಿಸಿ 3 ವರ್ಷ ಕಳೆಯುತ್ತಾನೆ. ಕರೆಂಟ್ ಇಲ್ಲ, ಶೌಚಾಲಯ ಇಲ್ಲವೇ ಇಲ್ಲ. ಅಪ್ಪ ಅಮ್ಮನ ಮಡಿಲಲ್ಲಿ ಸುಖವಾಗಿ ಇರಬೇಕಿದ್ದ 10-14ನೇ ಬಾಲಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ದೇವರ ದಯೆ ಕ್ರಿಕೆಟ್ ಆಡಲು ಹೇಗೋ ಒಂದು ಕ್ಲಬ್ ಸಿಕ್ಕಿತ್ತು. ಆದ್ರೆ, ಕೈಯಲ್ಲಿ ದುಡ್ಡು ಬೇಕಲ್ವಾ..? ಅದಕ್ಕಾಗಿ ಕ್ರಿಕೆಟ್ ಮುಗಿಸಿ ಸಂಜೆ 7 ಗಂಟೆಗೆ ಪಾನಿಪೂರಿ ಮಾರಲು ಶುರು ಮಾಡುತ್ತಾನೆ. ಆದ್ರೆ, ಹೋಗ್ತಾ ಹೋಗ್ತಾ ಜೀವನ ಕಷ್ಟವಾದಾಗ ಯಶಸ್ವಿ ಕ್ರಿಕೆಟ್ ಆಸೆ ಬಿಟ್ಟು ಮರಳಿ ಉತ್ತರ ಪ್ರದೇಶಕ್ಕೆ ಹೋಗೋಣ ಎಂದು ನಿರ್ಧಾರ ಮಾಡಿ ಬಿಡ್ತಾನೆ. ಆದ್ರೆ ಅದೇ ಸಮಯಕ್ಕೆ ಸಿಕ್ಕ ಒಬ್ಬ ವ್ಯಕ್ತಿ ಜೈಸ್ವಾಲ್ ಜೀವನವನ್ನೇ ಬದಲಿಸಿ ಬಿಡ್ತಾರೆ. ಅವರು ಬೇರೆ ಯಾರು ಅಲ್ಲ, ಜ್ವಾಲಾ ಸಿಂಗ್ ಮುಂಬೈನ ಫೇಮಸ್ ಕ್ರಿಕೆಟ್ ಕೋಚ್.

ಯಸ್‌… ಅದು 2013, ಡಿಸೆಂಬರ್ ತಿಂಗಳು. ಒಬ್ಬ ಒಳ್ಳೆಯ ಆಟಗಾರನಿಗಾಗಿ ಹುಡುಕುತ್ತಿದ್ದ ಜ್ವಾಲಾ ಸಿಂಗ್ ಅವರ ಕಣ್ಣಿಗೆ ಯಶಸ್ವಿ ಜೈಸ್ವಾಲ್ ಬಿಳ್ತಾನೆ. ʼಎʼ ಡಿವಿಜನ್ ಬೌಲರʼ ಗಳ ವಿರುದ್ಧ ಬ್ಯಾಟ್ ಬೀಸುತ್ತಿದ್ದ ಹುಡುಗ ಕೈಚಳಕ ನೋಡಿ ಜ್ವಾಲಾ ಸಿಂಗ್ ಒಂದು ಕ್ಷಣ ಅಚ್ಚರಿ ಪಡ್ತಾರೆ. ಅಲ್ಲದೆ, ತಮ್ಮ ಬಳಿ ಪ್ರಾಕ್ಟೀಸ್‌ಗೆ ಬಾ ಅಂತ ಕರೆಯುತ್ತಾರೆ. ಬಹು ದಿನಗಳ ಪ್ರಾರ್ಥನೆ ಫಲಿಸಿದಂತೆ.. ಯಶಸ್ವಿ ಪಾಲಿಗೆ ಜ್ವಾಲಾ ಸಿಂಗ್‌ ದೇವರಾದರು.

ಅಲ್ಲಿಂದ ʼಯಶಸ್ವಿʼ ಮಿಂಚಿನ ಓಟ ಶುರುವಾಗಿತ್ತು. ಮುಂಬೈ ಕ್ರಿಕೆಟ್ ಸಂಸ್ಥೆಯ ಡಿವಿಜನ್ ಮ್ಯಾಚ್’ಗಳಲ್ಲಿ ಶತಕಗಳ ಮೇಲೆ ಶತಕಗಳನ್ನು ಬಾರಿಸಿದ ಜೈಸ್ವಾಲ್, 16ನೇ ವಯಸ್ಸಿನಲ್ಲಿ ಇಂಡಿಯಾ ಅಂಡರ್-19 ತಂಡಕ್ಕೆ ಆಯ್ಕೆಯಾಗುತ್ತಾನೆ. 2020ರಲ್ಲಿ ಅಂಡರ್-19 ವಿಶ್ವಕಪ್ ಆಡಿದ್ದ ಭಾರತ ತಂಡಕ್ಕೆ ಸೆಲೆಕ್ಟ್ ಆಗ್ತಾನೆ. ಟೂರ್ನಿಯಲ್ಲೇ ಅತೀ ಹೆಚ್ಚು 400 ರನ್ ಗಳಿಸಿ ಎಲ್ಲರನ್ನೂ ಬಾಯ್ತೆರೆದು ನೋಡುವಂತೆ ಮಾಡ್ತಾನೆ.

2019ರಲ್ಲಿ ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಯಶಸ್ವಿ ದ್ವಿಶತಕ ಬಾರಿಸುತ್ತಾನೆ.. ಈಗಿನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಗ ಟ್ವೀಟ್ ಮಾಡಿ ʼNext Superstarʼ ಅಂತ ಹಾಡಿ ಹೊಗಳುತ್ತಾರೆ. ಇಂದು ರೋಹಿತ್ ಮಾತು ನೂರಕ್ಕೆ ನೂರರಷ್ಟು ನಿಜವಾಗಿದೆ. ಇವತ್ತು ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ದ್ವಿಶತಕ ಬಾರಿಸಿದ್ದಾರೆ… ಸಲಾಂ ಯಶಸ್ವಿ ಭಾಯ್‌.. ಹ್ಯಾಟ್ಸ್ ಆಫ್ ಟು..

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *