ಬೆಂಗಳೂರು : ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯದಿಂದ ರೈಲು ಕಾರ್ಯಾಚರಣೆ ಆರಂಭಿಸಿದೆ. ಫೆಬ್ರವರಿ 4ರಿಂದಲೇ ಈ ರೈಲು ಸಂಚಾರ ಆರಂಭಿಸಿದ್ದು, ಎಲ್ಲವು ಅಂದುಕೊಂಡಂತೆ ಆದರೆ ಈ ರೈಲು ವಿಸ್ತರಣೆ ಆಗುವ ಸಾಧ್ಯತೆ ಇದೆ.
ಹೌದು, ನೆರೆಯ ರಾಜ್ಯ ತೆಲಂಗಾಣದಲ್ಲಿರುವ ದಕ್ಷಿಣ ಭಾರತದ ಪ್ರಸಿದ್ದ ರಾಮಕ್ಷೇತ್ರವಾದ ಭದ್ರಾಚಲಂಗೆ ಕರ್ನಾಟಕದಿಂದ ನೇರ ರೈಲು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಬೆಳಗಾವಿ ಹಾಗೂ ಕಾಜಿಪೇಟೆ ನಡುವೆ ಇರುವ ವಿಶೇಷ ರೈಲನ್ನೇ ಭದ್ರಾಚಲಂವರೆಗೂ ವಿಸ್ತರಣೆ ಮಾಡಲಾಗಿದೆ. ಈ ವಿಶೇಷ ರೈಲು ಕಳೆದ ಫೆಬ್ರುವರಿ 4ರಿಂದ ತನ್ನ ಕಾರ್ಯಾಚರಣೆ ಆರಂಭಿಸಿದೆ. ಫೆಬ್ರವರಿ ಮಾಸಾಂತ್ಯದವರೆಗೂ ಈ ವಿಶೇಷ ರೈಲು ಬೆಳಗಾವಿಯಿಂದ ಕಾಜಿಪೇಟೆ ಮಾರ್ಗವಾಗಿ ಭದ್ರಾಚಲಂವರೆಗೆ ಸಂಚರಿಸಲಿದೆ.
ಇದರ ಸ್ಪಂದನೆ ಅಗತ್ಯತೆ ನೋಡಿಕೊಂಡ ರೈಲ್ವೆ ಇಲಾಖೆಯು ಇದೇ ರೈಲನ್ನು ವಿಸ್ತರಣೆ ಮಾಡಲಿದೆ. ಸದ್ಯ ಒಂದು ತಿಂಗಳು ಅಂದರೆ ಫೆಬ್ರುವರಿ ಅಂತ್ಯದವರೆಗೆ ಓಡಾಡಲಿದೆ. ಈ ಮಾರ್ಗದ ಭಕ್ತರು ರೈಲು ಸೇವೆ ಪಡೆಯಬಹುದು ಹೈದ್ರಾಬಾದ್ ಕೇಂದ್ರಿತ ದಕ್ಷಿಣ ಮಧ್ಯೆ ರೈಲ್ವೆ ವ್ಯಾಪ್ತಿಯ ರೈಲು ಪ್ರಸ್ತುತದಲ್ಲಿ ಬೆಳಗಾವಿಯಿಂದ ಕಾಜಿಪೇಟ್ ಹಾಗೂ ಕಾಜಿಪೇಟ್ ನಿಂದ ಬೆಳಗಾವಿವರೆಗೂ ಎಕ್ಸ್ಪ್ರೆಸ್ ರೈಲು ಓಡಾಡುತ್ತಿದೆ. ಈವರೆಗೆ ಬೆಳಗಾವಿಯಿಂದ ಕಾಜಿಪೇಟ್ ವರೆಗೆ ಹೋಗುತ್ತಿದ್ದ ರೈಲು ಇದೀಗ ತೆಲಂಗಾಣದ ಭದ್ರಾಚಲಂವರೆಗೆ ಪ್ರಯಾಣಿಕರಿಗೆ/ಭಕ್ತರಿಗೆ ಸೇವೆ ನೀಡುತ್ತಿದೆ. ಮತ್ತದೇ ಮಾರ್ಗವಾಗಿ ಮರಳಲಿದೆ.
ರೈಲು ಸಂಚಾರದ ವೇಳಾಪಟ್ಟಿ :
ಬೆಳಗಾವಿ ಕಾಜಿಪೇಟ್ ವಿಶೇಷ ರೈಲು (ಸಂಖ್ಯೆ 07335) ಬೆಳಗಾವಿಯಿಂದ ಮಧ್ಯಾಹ್ನ 12:30 ಗಂಟೆಗೆ ಪ್ರಯಾಣ ಆರಂಭಿಸುತ್ತದೆ. ನಂತರ ಅಲ್ಲಿಂದ ಹೈದರಾಬಾದ್ ಮಾರ್ಗವಾಗಿ ಮಾರನ ದಿನ ಬೆಳಗ್ಗೆ 7.33ಕ್ಕೆ ಗಂಟೆಗೆ ಕಾಜಿಪೇಟೆ ನಿಲ್ದಾಣಕ್ಕೆ ಆಗಮಿಸುತ್ತದೆ. ಅಲ್ಲಿಂದ ಬೆಳಗ್ಗೆ 7.35ಕ್ಕೆ ಹೊರಟು ವಾರಂಗಲ್, ಕೇಸಮುದ್ರಮ್, ಮೆಹಬುಬಾಬಾದ್ ಹಾಗೂ ದೊಮಕಲ್ ಮೂಲಕ ಶ್ರೀಕ್ಷೇತ್ರ ಭದ್ರಾಚಲಂ ರೋಡ್ ಅನ್ನು ಬೆಳಗ್ಗೆ 11:30 ಕ್ಕೆ ತಲುಪಲಿದೆ. ಅದೇ ದಿನವೇ ಮರಳಿ ಬೆಳಗಾವಿಯತ್ತ ಪ್ರಯಾಣ ಬೆಳೆಸುತ್ತದೆ. ತಲುಪಿದ ದಿನವೇ ಸಂಜೆ 4.35ಕ್ಕೆ ಹೊರಟು ದೊಮಕಲ್, ಮೆಹಬುಬಾಬಾದ್, ಕೆಸಸಮುದ್ರಂ, ವಾರಂಗಲ್ ಮೂಲಕ ಹಾದು ಕಾಜಪೇಟ್ಗೆ ರಾತ್ರಿ 7.18ಕ್ಕೆ ಬರುತ್ತದೆ. ನಂತರ ಅಲ್ಲಿಂದ 7.20ಕ್ಕೆ ಮರುದಿನ ಮಧ್ಯಾಹ್ನ 3:55ಕ್ಕೆ ಬೆಳಗಾವಿಗೆ ಬಂದು ತಲುಪಲಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಕರ್ನಾಟಕದ ಪ್ರಯಾಣಿಕರಿಗೂ ಅನುಕೂಲ ಈ ಮೂಲಕ ಒಟ್ಟು 1093 ಕಿಲೋಮೀಟರ್ ದೂರವನ್ನು ಈ ವಿಶೇಷ ಎಕ್ಸ್ಪ್ರೆಸ್ ರೈಲು ಒಟ್ಟು ಪ್ರತಿ ಗಂಟೆಗೆ 47 ಕಿಲೋ ಮೀಟರ್ ಲೆಕ್ಕದಲ್ಲಿ ಕ್ರಮಿಸಲಿದೆ. ಈ ವಿಶೇಷ ರೈಲು ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಮಂತ್ರಾಲಯ, ರಾಯಚೂರು, ಯಾದಗಿರಿ ಮಾರ್ಗವಾಗಿ ರಾಜ್ಯದ ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ. ಇಲ್ಲಿನ ಭಕ್ತರು ಸಹ ರಾಮಕ್ಷೇತ್ರಕ್ಕೆ ತೆರಳಲು ಈ ರೈಲು ಸೇವೆ ಅನುಕೂಲವಾಗಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1