IPL 2024 ಪ್ರಾರಂಭ ದಿನಾಂಕ ಮತ್ತು ಸಂಪೂರ್ಣ ವೇಳಾಪಟ್ಟಿ.!

IPL 2024 Full Schedule: ಭಾರತದಲ್ಲಿ ಈ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಐಪಿಎಲ್ 2024 ಪಂದ್ಯಗಳು ಮಾರ್ಚ್ ನಿಂದ ಮೇ ವರೆಗೆ ನಡೆಯಲಿವೆ. 

  • ಐಪಿಎಲ್ 2024 ಪಂದ್ಯಗಳ ವೇಳಾಪಟ್ಟಿ
  • ಐಪಿಎಲ್ 2024 ಪಂದ್ಯಗಳು ನಡೆಯುವ ಸಮಯ
  • ಐಪಿಎಲ್ 2024 ಪ್ರಾರಂಭ ದಿನಾಂಕ

IPL 2024 Full Schedule: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 17 ನೇ ಸೀಸನ್ನ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಅಲ್ಲದೆ ಮಹಿಳೆಯರಿಗಾಗಿ WPL 2024 ಫೆಬ್ರವರಿ 23 ರಿಂದ ಮಾರ್ಚ್ 17 ರವರೆಗೆ ನಡೆಯಲಿದೆ. ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿರುವುದರಿಂದ ಈ ನಡುವೆ ಐಪಿಎಲ್ ಪಂದ್ಯಗಳಿಗೆ ಬ್ರೇಕ್ ಬೀಳುವ ನಿರೀಕ್ಷೆ ಇದೆ. ಒಟ್ಟು 10 ತಂಡಗಳು 70 ಲೀಗ್ ಪಂದ್ಯಗಳನ್ನು ಆಡಲಿವೆ. 

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ವರ್ಷ ಐದನೇ ಬಾರಿ ಟ್ರೋಫಿ ಗೆದ್ದಿತ್ತು. ಹೀಗಾಗಿ ಚೆನ್ನೈ ತಂಡ ಮೊದಲ ಪಂದ್ಯ ಆಡಲಿದೆ. ಮುಂಬೈ ಅಥವಾ ಆರ್‌ಸಿಬಿ ವಿರುದ್ಧ ಪಂದ್ಯ ನಡೆಯುವ ನಿರೀಕ್ಷೆಯಿದೆ. ಲೋಕಸಭೆ ಚುನಾವಣೆ 2024 ನಡೆಯಲಿರುವ ಹಿನ್ನೆಲೆಯಲ್ಲಿ ಐಪಿಎಲ್ 2024 ಅನ್ನು ಮಾರ್ಚ್‌ನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕಳೆದ ವರ್ಷದಂತೆ, IPL 2024 ಪಂದ್ಯಗಳು 7:30 PM IST ಕ್ಕೆ ಪ್ರಾರಂಭವಾಗುತ್ತವೆ ಮತ್ತು ಟಾಸ್ 7 PM ನಡೆಯುತ್ತದೆ. ಮೇ 26 ರಂದು ಫೈನಲ್ ಪಂದ್ಯ ನಡೆಯಲಿದೆ.

ಈ ವರ್ಷದ ಐಪಿಎಲ್ ಹಲವು ರೋಚಕ ಘಟನೆಗಳಿಗೆ ಸಾಕ್ಷಿಯಾಗಲಿದೆ. ಕಳೆದ ಮೆಗಾ ಹರಾಜಿನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಖರೀದಿಸಿತ್ತು. ಪಾಂಡ್ಯ ನಾಯಕತ್ವದ ಗುಜರಾತ್ ತಂಡ ಐಪಿಎಲ್ 2022 ರಲ್ಲಿ ಟ್ರೋಫಿ ಗೆದ್ದಿತು. ಐಪಿಎಲ್ 2023 ರಲ್ಲಿ ಫೈನಲ್‌ಗೆ ಮುನ್ನಡೆಸಿದರು. ಇದೀಗ ಈ ವರ್ಷ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಆಡಲಿದ್ದಾರೆ. 5 ಟ್ರೋಫಿಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.  

ಈ ಬಾರಿಯ ಐಪಿಎಲ್‌ನಿಂದ ಧೋನಿ ನಿವೃತ್ತಿಯಾಗಲಿದ್ದಾರೆ ಎಂಬ ವರದಿಗಳಿವೆ. ಕಳೆದ ವರ್ಷ ನಿವೃತ್ತಿಯಾಗುವ ನಿರೀಕ್ಷೆಯಲ್ಲಿದ್ದರೂ, ಅಭಿಮಾನಿಗಳಿಗಾಗಿ ಮತ್ತೊಮ್ಮೆ ಆಡುವುದಾಗಿ ಹೇಳಿದ್ದರು. ಕಳೆದ ವರ್ಷ ಧೋನಿ ನಾಯಕತ್ವದ ಚೆನ್ನೈ ತಂಡ 5ನೇ ಬಾರಿ ಟ್ರೋಫಿ ಗೆದ್ದಿತು. 42ರ ಹರೆಯದ ಧೋನಿ ಸದ್ಯ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಚೆನ್ನೈ ತಂಡದ ಆಟಗಾರರು ಮಾರ್ಚ್ 1 ರಿಂದ ಪ್ರ್ಯಾಕ್ಟಿಸ್ ಆರಂಭಿಸಲಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *