
ಚಿತ್ರದುರ್ಗ: 2024 ಜನವರಿ ಯಲ್ಲಿ ನಡೆದ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಹೇಶ್ ಪದವಿ ಪೂರ್ವ ಕಾಲೇಜು, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ(ರಿ), ಚಿತ್ರದುರ್ಗ, ವಿದ್ಯಾರ್ಥಿಯಾದ ಸಿದ್ದೇಶ್ ಎನ್ ಶೇಕಡ 93 % ಫಲಿತಾಂಶವನ್ನು ಪಡೆದು ನಮ್ಮ ಕಾಲೇಜಿಗೆ ಯಶಸ್ಸನ್ನು ತಂದಿರುತ್ತಾರೆ. ಈ ವಿದ್ಯಾರ್ಥಿಯ ಸಾಧನೆಗೆ ನಮ್ಮ ಕಾಲೇಜಿನಲ್ಲಿ ನಡೆಯುವ ವಾರ್ಷಿಕ ಮತ್ತು ವಾರದ ಯೋಜನೆಗಳು ಹಾಗೂ ಉಪನ್ಯಾಸಕರ ತರಬೇತಿಗಳು ಸಹಕಾರಿಯಾಗಿರುತ್ತವೆ.
ನಮ್ಮ ಕಾಲೇಜಿನಲ್ಲಿ JEE, NEET& KSETಪರೀಕ್ಷೆಗಳಿಗೆ ವಿಷೇಶ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತೇವೆ ಹಾಗೂ ಕಾಲೇಜಿನ ಸಮಯದ ನಂತರ ಸಾಯಂಕಾಲ 5.30 ರಿಂದ 7.30 ರ ತನಕ ವಿಶೇಷ ತರಗತಿಗಳನ್ನು (Study hour) ನಡೆಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಹಾಗೂ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಗಳಿಗೆ ಸಿದ್ದಗೊಳ್ಳಿಸುತ್ತೇವೆ.
ನಮ್ಮ ಯೋಜನೆ ಮತ್ತು ತರಬೇತಿಗಳ ಸಹಕಾರದಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಸಹಕಾರಿಯಾಗಿರುತ್ತದೆ. ಈ ವಿದ್ಯಾರ್ಥಿಗೆ ಕಾಲೇಜಿನ ಕಾರ್ಯದರ್ಶಿಯಾದ ಶ್ರೀ. ಎಸ್.ಎಮ್ ವಿಜಯಕುಮಾರ್ ಹಾಗೂ ನಿರ್ದೇಶಕರಾದ ಶ್ರೀ. ಎಸ್.ಎಮ್ ಪೃಥ್ವೀಶ ಇವರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಶುಭ ಕೋರಿದ್ದಾರೆ. ವಿದ್ಯಾರ್ಥಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಕೆಂಚನಗೌಡ ಎಸ್.ಜೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರೂ ಸಹ ಶುಭ ಕೋರಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1