ಕೆಂಪಾದ ಕಲ್ಲಂಗಡಿ ಹಣ್ಣು ನೋಡುವಾಗ ಬಾಯಲ್ಲಿ ನೀರೂರುತ್ತದೆ, ಅಲ್ಲದೆ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ದೇಹದಲ್ಲಿ ನೀರಿನಂಶ ಕಾಪಾಡುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಕಣ್ಣುಗಳಿಗೆ ಒಳ್ಳೆಯದು, ಹೀಗೆ ಇವುಗಳನ್ನು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು ಒಂದಾ.. ಎರಡಾ, ಆದರೆ ಇಷ್ಟೆಲ್ಲಾ ಗುಣಗಳು ಸಿಗಬೇಕೆಂದರೆ ಅವುಗಳಿಗೆ ರಾಸಾಯನಿಕ ಬಳಸಬಾರದಷ್ಟೇ…

ಮಾರುಕಟ್ಟೆಗೆ ಬರುವ ಎಲ್ಲಾ ಕಲ್ಲಗಡಿ ಹಣ್ಣುಗಳು ರಾಸಾಯನಿಕ ಮುಕ್ತ ಎಂದು ಹೇಳಲು ಸಾಧ್ಯವಿಲ್ಲ. ಬೇಗನೆ ಹಾಳಾಗಬಾರದು, ಒಳಭಾಗ ಕೆಂಪು ಬಣ್ಣದಲ್ಲಿ ಇರಬೇಕು ಹೀಗೆ ನಾನಾ ಕಾರಣಗಳಿಗಾಗಿ ಕಲ್ಲಂಗಡಿಗೆ ರಾಸಾಯನಿಕ ಹಾಕುತ್ತಾರೆ. ಇಂಥ ಹಣ್ಣುಗಳು ನೋಡಿದರೆ ತುಂಬಾ ಕೆಂಪಾಗಿ ಇರುತ್ತದೆ, ಆದರೆ ಕಲ್ಲಂಗಡಿ ಹಣ್ಣಿನ ಯಾವುದೇ ರುಚಿ ಇರಲ್ಲ, ಇನ್ನು ಹಣ್ಣು ಸಿಹಿಯಾಗಲಿ ಎಂದು ಕೂಡ ರಾಸಾಯನಿಕ ಬಳಸುತ್ತಾರೆ. ಇಂಥ ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಕೆಟ್ಟದ್ದು…
ಕಲ್ಲಂಗಡಿ ಹಣ್ಣಿಗೆ ರಾಸಾಯನಿಕ ಬಳಸಿದೆ ಎಂದು ಹೇಗೆ ಹೇಳಬಹುದು?
ಬೀಜ ನೋಡಿ ಹೇಳಬಹುದು
ಕಲ್ಲಂಗಡಿ ಹಣ್ಣು ಚೆನ್ನಾಗಿ ಬಲಿತಿರಬೇಕು, ಆದರೆ ಎಳೆಯ ಕಲ್ಲಂಗಡಿ ಹಣ್ಣು ತಂದು ಅದಕ್ಕೆ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ, ಹೀಗೆ ಹಣ್ಣಾದ ಕಲ್ಲಂಗಡಿ ಬೀಜಗಳು ತುಂಬಾ ಎಳೆಯದಾಗಿರುತ್ತದೆ, ಚೆನ್ನಾಗಿ ಬಲಿತಿರುವ ಕಲ್ಲಂಗಡಿ ಹಣ್ಣಿನ ಬೀಜ ಕಪ್ಪಿರುತ್ತದೆ.
ಕತ್ತರಿಸಿದಾಗ ತಿಳಿಯುವುದು

ಕಲ್ಲಂಗಡಿ ಆಯ್ಕೆ ಮಾಡುವಾಗ ತುಂಬಾ ಜನರಿಗೆ ಗೊತ್ತಾಗುವುದಿಲ್ಲ, ಆದರೆ ಅವುಗಳನ್ನು ಕತ್ತರಿಸಿ ನೋಡಿದರೆ ಗೊತ್ತಾಗುವುದು. ಹಣ್ಣುಗಳಿಗೆ ರಾಸಾಯನಿಕ ಇಂಜೆಕ್ಷನ್ ನೀಡಿದ್ದರೆ ಅದರ ತಿರುಳು ಬಿರುಕು ಬಿಟ್ಟಿರುತ್ತದೆ, ಬಣ್ಣದಲ್ಲಿ ವ್ಯತ್ಯಾಸ ಉಂಟಾಗಿರುತ್ತದೆ. ಕತ್ತರಿಸಿದಾಗ ಒಡೆದ ರೀತಿಯಲ್ಲಿದ್ದರೆ ಆ ಕಲ್ಲಂಗಡಿಯಲ್ಲಿ ರಾಸಾಯನಿಕ ಅಂಶವಿದೆ ಎಂದು ಹೇಳಬಹುದು.
ಹಣ್ಣುಗಳ ಮೇಲೆ ಬಿಳಿ ಹುಡಿ

ಕಲ್ಲಂಗಡಿ ಹಣ್ಣುಗಳ ಮೇಲೆ ಬಿಳಿ ರೀತಿಯ ಹುಡಿಗಳು ಕಂಡು ಬಂದರೆ ಅಂಥ ಹಣ್ಣುಗಳ ಮೇಲೆ ರಾಸಾಯನಿಕ ಸಿಂಪಡಿಸಿದ್ದಾರೆ ಎಂದು ಊಹಿಸಬಹುದು. ಅವುಗಳನ್ನು ಕೈಯಿಂದ ಮುಟ್ಟಿದಾಗ ಆ ಹುಡಿ ನಿಮ್ಮ ಕೈಗೆ ಅಂಟುತ್ತದೆ, ಅಂಥ ಹಣ್ಣುಗಳನ್ನು ಕೊಳ್ಳಬೇಡಿ.
ಸೂಜಿ ಚುಚ್ಚಿದಂಥ ರಂಧ್ರ

ಸಾಮಾನ್ಯವಾಗಿ ಹಣ್ಣುಗಳನ್ನು ನೋಡುವಾಗ ಗೊತ್ತಾಗುವುದಿಲ್ಲ. ಆದರೆ ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ. ಕಲ್ಲಂಗಡಿ ಹಣ್ಣಿನ ಮೇಲೆ ಸೂಜಿಯಿಂದ ಚುಚ್ಚಿದ ರಂಧ್ರವಿರುತ್ತದೆ. ಅದನ್ನು ನೀವು ಮಾರಾಟಗಾರರಲ್ಲಿ ಕೇಳಿದರೆ ಅವರು ಅದನ್ನು ಒಪ್ಪಿಕೊಳ್ಳುವುದಿಲ್ಲ.ಅಂಥ ಹಣ್ಣುಗಳನ್ನು ಖರೀದಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಕಲ್ಲಂಗಡಿ ಹಣ್ಣಿಗೆ ಯಾವ ರಾಸಾಯನಿಕ ಬಳಸಲಾಗುವುದು
ಹಣ್ಣುಗಳು ಬೇಗನೆ ಹಣ್ಣಾಗಲು ಕಾರ್ಬೈಡ್ ಹಾಕುತ್ತಾರೆ, ಇದನ್ನು ಹಾಕಿದಾಗ ಈಥೆನಾಲ್ ಗ್ಯಾಸ್ ಉತ್ಪತ್ತಿಯಾಗುವುದು, ಇದರಿಂದ ಹಣ್ಣುಗಳು ಬೇಗನೆ ಹಣ್ಣಾಗುವುದು ಎಂದು FDA ಮೂಲಗಳು ಹೇಳುತ್ತವೆ. ಆಹಾರ ತಜ್ಜರ ಪ್ರಕಾರ ಆಹಾರಗಳು ಬೇಗನೆ ಹಣ್ಣಾಗಲು, ಬಣ್ಣದಿಂದ ಕೂಡಿರಲು ಸುಡನ್ ರೆಡ್, ಮೆಥೆನಾಲ್ ಯೆಲ್ಲೋ, ಪಾದರಸ ಕ್ರೊಮೇಟ್ ಇಂಥ ರಾಸಾಯನಿಕ ಕೂಡ ಬಳಸುತ್ತಾರೆ.
ದೇಹದ ಮೇಲೆ ಬೀರುವ ಅಡ್ಡ ಪರಿಣಾಮಗಳು
ಕಾರ್ಬೈಡ್: ಕಾರ್ಬೈಡ್ ಹಾಕಿ ಹಣ್ಣು ಮಾಡಿರುವ ಹಣ್ಣುಗಳನ್ನು ತಿನ್ನುವುದರಿಂದ ಲಿವರ್ ಹಾಗೂ ಕಿಡ್ನಿ ಆರೋಗ್ಯ ಹಾಳಾಗುವುದು.
ಮೆಥೆನಾಲ್ ಯೆಲ್ಲೋ ಕೂಡ ಲಿವರ್, ಕಿಡ್ನಿ ಆರೋಗ್ಯ ಹಾಳು ಮಾಡುವುದು.
ಕ್ರೊಮೇಟ್: ಕ್ರೊಮೇಟ್‌ನಿಂದಾಗಿ ಹೊಟ್ಟೆ ಸಮಸ್ಯೆ, ರಕ್ತ ಹೀನತೆ, ಮೆದುಳಿಗೆ ಹಾನಿ, ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗುವುದು ಮುಂತಾದ ಸಮಸ್ಯೆ ಕಂಡು ಬರುವುದು.
ನಾವು ಆರೋಗ್ಯಕರವಾಗಿರಲು ಹಣ್ಣುಗಳನ್ನು ಸೇವಿಸುತ್ತೇವೆ, ಆದರೆ ನಾವು ಸೇವಿಸುವ ಹಣ್ಣುಗಳಿಂದಲೇ ದೇಹಕ್ಕೆ ಅಪಾಯ ಉಂಟಾಗುವ ಸಾಧ್ಯತೆ ತುಂಬಾನೇ ಇದೆ, ಏಕೆಂದರೆ ವ್ಯಾಪಾರ ಲಾಭಕ್ಕಾಗಿ ಹಣ್ಣುಗಳಿಗೆ ರಾಸಾಯನಿಕ ಬಳಸುತ್ತಿದ್ದಾರೆ, ಈ ಸತ್ಯಾಂಶ ತಳ್ಳಿ ಹಾಕುವಂತೆ ಇಲ್ಲ, ರಾಸಾಯನಿಕ ಮುಕ್ತ ಹಣ್ಣುಗಳನ್ನು ಸೇವಿಸಿದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1