ಬೆಂಗಳೂರು: ಹೊಸ ರೇಷನ್ ಕಾಡ್‌೯ಗಳಿಗೆ ಎ.1ರಿಂದ ಅಜಿ೯ ಸ್ವೀಕರಿಸಲಾಗುತ್ತದೆ ಎಂದು ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಆಶ್ವಾಸನೆ ನೀಡಿದ್ದಾರೆ. ಈಗಾಗಲೇ ಬಿಪಿಎಲ್ ಹಾಗೂ ಎಪಿಎಲ್ ಕಾಡ್‌೯ಗಳಿಗೆ ಸಲ್ಲಿಕೆಯಾಗಿರುವ 2.95 ಲಕ್ಷ ಅಜಿ೯ಗಳನ್ನು ಮಾ. 31ರೊಳಗೆ ವಿಲೇವಾರಿ ಮಾಡುವುದಾಗಿ ಅವರು ಹೇಳಿದ್ದಾರೆ.
ಈಗಾಗಲೇ ರಾಜ್ಯಾದ್ಯಂತ ಸಲ್ಲಿಕೆಯಾಗಿರುವ 2.95 ಲಕ್ಷ ಬಿಪಿಎಲ್ ಹಾಗೂ ಎಪಿಎಲ್ ಕಾಡ್‌೯ಗಳ ಅಜಿ೯ಗಳನ್ನು ಮಾ.31ರೊಳಗಾಗಿ ವಿಲೇವಾರಿ ಮಾಡುವುದಾಗಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದ್ದಾರೆ. ಅಲ್ಲದೆ ಎ.1ರಿಂದ ಹೊಸ ಕಾಡ್‌೯ಗಳಿಗೆ ಅಜಿ೯ ಸ್ವೀಕರಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದ್ದಾರೆ.
ಬಿಜೆಪಿಯ ಯಶ್‌ಪಾಲ್ ಸುವಣ೯ ಹಾಗೂ ಕಾಂಗ್ರೆಸ್‌ನ ನಯನಾ ಮೋಟಮ್ಮರವರ ಪ್ರಶ್ನೆಗಳಿಗೆ ಉತ್ತರಿಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪನವರು ಹಿಂದಿನ ಸರಕಾರದ ಅವಧಿಯಲ್ಲಿ ಬಂದಿದ್ದ1,95,986 ಅಜಿ೯ಗಳ ಪರಿಶೀಲನೆ ನಡೆಸುತ್ತಿದ್ದು, ಅವುಗಳ ಪೈಕಿ ಎಪಿಎಲ್ ಹಾಗೂ ಬಿಪಿಎಲ್ ಅಜಿ೯ಗಳನ್ನು ಪ್ರತ್ಯೇಕಗೊಳಿಸುತ್ತಿದ್ದೇವೆ. ತುತು೯ ವ್ಯೆದ್ಯಕೀಯ ಸೇವೆಯ ಕಾಡ್‌೯ಗಳನ್ನು ಆದ್ಯತೆ ಮೇರೆಗೆ ವಿತರಿಸಲಾಗುತ್ತಿದ್ದು ಈಗಾಗಲೇ 744 ಕಾಡ್‌೯ ವಿತರಿಸಲಾಗಿದೆ. ಹಾಗೂ 57561 ಎಪಿಎಲ್ ಕಾಡ್೯ಗಳನ್ನು ಸಹ ವಿತರಿಸಿದ್ದೇವೆ ಎಂದು ತಿಳಿಸಿದರು.
ಇಲ್ಲಿದೆ ಅರ್ಹತೆ ಮತ್ತು ಮಾನದಂಡದ ವಿವರ
ಬಿಪಿಎಲ್ ಕಾಡ್‌೯ನ್ನು ಸರಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ಖಾಯಂ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಕುಟುಂಬಳಿಗೆ ಕೊಡಲಾಗುವುದಿಲ್ಲ. ಅಲ್ಲದೆ 1.20 ಲಕ್ಷ ರೂ.ಗೂ. ಅಧಿಕ ವಾಷಿ೯ಕ ಆದಾಯ ಇದ್ದರೆ, ಲಕ್ಷಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಕೃಷಿ ಭೂಮಿ, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀಣ೯ದ ಪಕ್ಕಾ ಮನೆ ಇದ್ದರೆ ಅಂತವರಿಗೂ ಬಿಪಿಎಲ್ ಕಾಡ್‌೯ ಕೊಡುವುದಿಲ್ಲ. ಅಷ್ಟೇ ಅಲ್ಲದೆ ಜೀವನೋಪಾಯಕ್ಕಾಗಿ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಚಲಾಯಿಸುವವರನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಂಟುಂಬಕ್ಕೂ ಬಿಪಿಎಲ್ ಕಾಡ್‌೯ ಪಡೆಯು ಅಹ೯ತೆ ಇಲ್ಲ ಎಂದು ಹೇಳಿದರು.
ಉಡುಪಿಯಲ್ಲಿ 2500ಕ್ಕೂ ಹೆಚ್ಚು ಅರ್ಜಿ ಫೆಂಡಿಂಗ್
ಬಿಜೆಪಿಯ ಯಶ್‌ಪಾಲ್ ಎ. ಸುವಣ೯ರವರು ಉಡುಪಿಯಲ್ಲಿ 2500ಕ್ಕೂ ಹೆಚ್ಚು ಅಹ೯ ಕುಟುಂಬಗಳು ಬಿಪಿಎಲ್ ಕಾಡ್‌೯ಗಾಗಿ ಅಜಿ೯ ಸಲ್ಲಿಸಿದ್ದು, ಸುಮಾರು 10 ತಿಂಗಳುಗಳಿಂದ ಕಾಡ್‌೯ಗಳಿಗೆ ಕಾಯುತ್ತಿವೆ. ಈ ಕಾಡ್‌೯ಗಳನ್ನು ಯಾವಾಗ ವಿತರಿಸುತ್ತೀರಿ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಮುನಿಯಪ್ಪನವರು 2021ರ ಜನವರಿಯಿಂದ 2023ರ ಮಾಚ್‌೯ವರೆಗೆ 13104 ಬಿಪಿಎಲ್ ಕಾಡ್‌೯ಗೆ ಉಡುಪಿ ಜಿಲ್ಲೆಯಿಂದ ಅಜಿ೯ಗಳು ಬಂದಿದ್ದು ಅವುಗಳ ಪೈಕಿ 10738 ಅಜಿ೯ ವಿಲೇವಾರಿಯಾಗಿದೆ. ಅಲ್ಲದೆ ಕಳೆದ ಒಂದು ವಷ೯ದಲ್ಲಿ ತುತು೯ ವೈದ್ಯಕೀಯ ಚಿಕಿತ್ಸೆಗೆ ಬಂದಿದ್ದ 134 ಅಜಿ೯ಗಳಿಗೂ ಬಿಪಿಎಲ್ ಕಾಡ್‌೯ ವಿತರಿಸಲಾಗಿದೆ ಎಂದು ವಿವರಣೆ ನೀಡಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1