FDA, SDA; ತಾ., ಜಿ. ಪಂಚಾಯಿತಿ ನೇಮಕಾತಿ: ಜಿಲ್ಲಾವಾರು ವಿವರ.

ಬೆಂಗಳೂರು, ಫೆಬ್ರವರಿ 19; ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಆದೇಶಿಸಿದೆ, ಜಿಲ್ಲಾವಾರು ಹಂಚಿಕೆಯನ್ನು ಮಾಡಿದೆ.ಈ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಚಿತ್ರದುರ್ಗ, ವಿಜಯಪುರ, ಚಾಮರಾಜನಗರ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಇವರಿಗೆ ಪತ್ರವನ್ನು ಬರೆಯಲಾಗಿದೆ.

28ರ ತನಕ ಅರ್ಜಿ ಹಾಕಿ ಒಟ್ಟು ಹುದ್ದೆಗಳು ಪ್ರಥಮ ದರ್ಜೆ ಸಹಾಯಕ 100 ಹಾಗೂ ದ್ವಿತೀಯ ದರ್ಜೆ ಸಹಾಯಕ 200 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 24 ಜಿಲ್ಲೆಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಗಣನೀಯ ಮಟ್ಟದಲ್ಲಿ ಲಿಪಿಕ ವೃಂದದ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಈ ಹಿಂದೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.

Indian Post Recruitment; ಫೆ.22ಕ್ಕೆ ನೇರ ಸಂದರ್ಶನ ಆರ್ಥಿಕ ಇಲಾಖೆಯು ದಿನಾಂಕ 02/11/2023ರ ಪತ್ರದಲ್ಲಿ 100 ಪ್ರಥಮ ದರ್ಜೆ ಸಹಾಯಕ ಹಾಗೂ 200 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿ ಮುಖೇನ ಭರ್ತಿ ಮಾಡಲು ಸಹಮತಿ ನೀಡಿದ್ದು, ಈ ಹುದ್ದೆಗಳನ್ನು ಜಿಲ್ಲಾ ಪಂಚಾಯತಿಯಲ್ಲಿ ನೇರ ನೇಮಕಾತಿ ಕೋಟಾದಡಿ ಮಂಜೂರಾದ/ ಖಾಲಿ ಇರುವ ಹುದ್ದೆಗಳ ಆಧಾರದಲ್ಲಿ ಹಂಚಿಕೆ ಮಾಡಲಾಗಿರುತ್ತದೆ ಎಂದು ಆದೇಶ ತಿಳಿಸಿದೆ.

ಕೊಪ್ಪಳ; ಗ್ರಾಮ ಒನ್ ಕೇಂದ್ರಗಳಲ್ಲಿ ಕೆಲಸ ಖಾಲಿ ಇದೆ ಜಿಲ್ಲಾ/ ತಾಲೂಕು ಲಿಪಿಕ ವೃಂದದ ಹುದ್ದೆಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರಿಯಾಗಿದ್ದು, ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ online ಪ್ರಸ್ತಾವನೆ ಸಲ್ಲಿಕೆಯ ಕುರಿತಂತೆ ದಿನಾಂಕ 09/02/2024ರಂದು ಆಯುಕ್ತಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಗಾರದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಲಾಗಿರುತ್ತದೆ.

ಸಾಮಾನ್ಯ ಹುದ್ದೆಗಳಿಗೆ ಗುರುತಿಸಿರುವ ವಿಕಲಚೇತನ ಮೀಸಲಾತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಲಿಪಿಕ ವೃಂದದ ಹುದ್ದೆಗಳಿಗೆ ಸಂಯೋಜಿಸುವಂತೆ ಹಾಗೂ ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳಿಗೆ ಮೀಸಲಾತಿ ರೋಷ್ಟರ್ ಬಿಂದುಗಳನ್ನು ಗುರುತಿಸಿ, ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ ಸದರಿ ಹುದ್ದೆಗಳನ್ನು ಭರ್ತಿ ಮಾಡಲು online ಪ್ರಸ್ತಾವನೆಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಲ್ಲಿಸಲು ಕೂಡಲೇ ಅಗತ್ಯ ಕ್ರಮ ಕೈಗೊಂಡು, 15 ದಿನದೊಳಗಾಗಿ ಅನುಪಾಲನ ವರದಿಯನ್ನು ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ.

ಜಿಲ್ಲಾವಾರು ವಿವರ:

ಬಾಗಲಕೋಟೆ : ಪ್ರ.ದ.ಸ 1 ಹಾಗೂ ದ್ವಿ.ದ.ಸ 6.

ಬೆಂಗಳೂರು ಗ್ರಾಮಾಂತರ : ಪ್ರ.ದ.ಸ 0 ಹಾಗೂ ದ್ವಿ.ದ.ಸ 3.

ಬೆಂಗಳೂರು ನಗರ : ಪ್ರ.ದ.ಸ 1 ಹಾಗೂ ದ್ವಿ.ದ.ಸ 5.

ದಕ್ಷಿಣ ಕನ್ನಡ : ಪ್ರ.ದ.ಸ 6 ಹಾಗೂ ದ್ವಿ.ದ.ಸ 13.

ಬೆಳಗಾವಿ : ಪ್ರ.ದ.ಸ 1 ಹಾಗೂ ದ್ವಿ.ದ.ಸ 4 ಹುದ್ದೆ ಭರ್ತಿ ಮಾಡಲಾಗುತ್ತದೆ.

ಚಿಕ್ಕಮಗಳೂರು : ಪ್ರ.ದ.ಸ 6 ಹಾಗೂ ದ್ವಿ.ದ.ಸ 13.

ಚಿತ್ರದುರ್ಗ : ಪ್ರ.ದ.ಸ 4 ಹಾಗೂ ದ್ವಿ.ದ.ಸ 4.

ವಿಜಯಪುರ : ಪ್ರ.ದ.ಸ 4 ಹಾಗೂ ದ್ವಿ.ದ.ಸ 13.

ಚಾಮರಾಜನಗರ : ಪ್ರ.ದ.ಸ 4 ಹಾಗೂ ದ್ವಿ.ದ.ಸ 9.

ದಾವಣಗೆರೆ : ಪ್ರ.ದ.ಸ 2 ಹಾಗೂ ದ್ವಿ.ದ.ಸ 7.

ಧಾರವಾಡ : ಪ್ರ.ದ.ಸ 1 ಹಾಗೂ ದ್ವಿ.ದ.ಸ 7 ಹುದ್ದೆ ಹಂಚಿಕೆಯಾಗಿದೆ.

ಗದಗ : ಪ್ರ.ದ.ಸ 4 ಹಾಗೂ ದ್ವಿ.ದ.ಸ 10.

ಹಾಸನ : ಪ್ರ.ದ.ಸ 4 ಹಾಗೂ ದ್ವಿ.ದ.ಸ 16.

ಹಾವೇರಿ : ಪ್ರ.ದ.ಸ 7 ಹಾಗೂ ದ್ವಿ.ದ.ಸ 10.

ಕೊಡಗು : ಪ್ರ.ದ.ಸ 4 ಹಾಗೂ ದ್ವಿ.ದ.ಸ 7.

ಕೋಲಾರ : ಪ್ರ.ದ.ಸ 4 ಹಾಗೂ ದ್ವಿ.ದ.ಸ 6.

ಮಂಡ್ಯ : ಪ್ರ.ದ.ಸ 4 ಹಾಗೂ ದ್ವಿ.ದ.ಸ 9 ಹುದ್ದೆಗಳು ಮಂಜೂರು.

ಮೈಸೂರು : ಪ್ರ.ದ.ಸ 4 ಹಾಗೂ ದ್ವಿ.ದ.ಸ 9.

ಶಿವಮೊಗ್ಗ : ಪ್ರ.ದ.ಸ 7 ಹಾಗೂ ದ್ವಿ.ದ.ಸ 9.

ತುಮಕೂರು : ಪ್ರ.ದ.ಸ 7 ಹಾಗೂ ದ್ವಿ.ದ.ಸ 12.

ಉಡುಪಿ : ಪ್ರ.ದ.ಸ 4 ಹಾಗೂ ದ್ವಿ.ದ.ಸ 9.

ಚಿಕ್ಕಬಳ್ಳಾಪುರ : ಪ್ರ.ದ.ಸ 4 ಹಾಗೂ ದ್ವಿ.ದ.ಸ 5.

ರಾಮನಗರ : ಪ್ರ.ದ.ಸ 6 ಹಾಗೂ ದ್ವಿ.ದ.ಸ 3.

ಉತ್ತರ ಕನ್ನಡ : ಪ್ರ.ದ.ಸ 11 ಹಾಗೂ ದ್ವಿ.ದ.ಸ 11 ಹುದ್ದೆಗಳು ಭರ್ತಿ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *