Post Office Recruitment 2024 : ಸರಕಾರಿ ಉದ್ಯೋಗ ಪಡೆಯಲು ಕನಸು ಮಾಡುತ್ತಿರುವವರಿಗೆ ಇಲ್ಲಿದೆ ಗುಡ್ನ್ಯೂಸ್. ಕೇವಲ ಎಸ್ಎಸ್ಎಲ್ಸಿ ಉತ್ತೀರ್ಣರಾದವರಿಗೆ ಸರಕಾರಿ ಉದ್ಯೋಗ ಪಡೆಯುವ ಅವಕಾಶವಿದೆ. ಭಾರತೀಯ ಅಂಚೆ ಇಲಾಖೆ (Government of India, Department of Post) ಖಾಲಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತ ದೇಶದಾದ್ಯಂತ 98,083ಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿದ್ದು, ಜಸ್ಟ್ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ರೆ ಸಾಕು, ನೀವು ಆನ್ಲೈನ್ ಮೂಲಕ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಹೊರ ಬೀಳಬೇಕಾಗಿದೆ. ಅಧಿಕೃತ ಅಧಿಸೂಚನೆ ಹೊರಬಿದ್ದ ನಂತರವಷ್ಟೇ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಅಂಚೆ ಇಲಾಖೆ ನೇಮಕಾತಿ 2024 ಹುದ್ದೆಗಳ ವಿವರ :
ಜಿಡಿಎಸ್ (ಗ್ರಾಮಿನ್ ಡಾಕ್ ಸೇವಕ್), ಪೋಸ್ಟ್ಮ್ಯಾನ್, ಎಂಟಿಎಸ್, ಪೋಸ್ಟಲ್ ಅಸಿಸ್ಟೆಂಟ್, ಮೇಲ್ ಗಾರ್ಡ್, ಸಾರ್ಟಿಂಗ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಒಟ್ಟು 5,731 ಹುದ್ದೆಗಳು ಖಾಲಿ ಇದ್ದು, MTS – 1,754, ಪೋಸ್ಟ್ಮ್ಯಾನ್ – 3,887 ಮತ್ತು ಮೇಲ್ ಗಾರ್ಡ್ – 90 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅಂಚೆ ಇಲಾಖೆ ನೇಮಕಾತಿ 2024 : ಅರ್ಜಿ ಶುಲ್ಕ ಮತ್ತು ವಯಸ್ಸಿನ ಮಿತಿ
ಸಾಮಾನ್ಯ, ಹಿಂದುಳಿದ ವರ್ಗ ಹಾಗೂ EWS ವರ್ಗಗಳ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕ ಪಾವತಿ ಮಾಡಬೇಕು. ಮಹಿಳೆಯರು / SC / ST ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. 18 ರಿಂದ 40 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಒಳಪಟ್ಟು ವಯೋಮಿತಿ ಸಡಿಲಿಕೆ ಲಭ್ಯವಿದೆ. ಒಬಿಸಿಗೆ 10 ವರ್ಷಗಳ ಸಡಿಲಿಕೆ ಇದೆ- 3 ವರ್ಷಗಳು, – SC/ST ಮತ್ತು PWD ಅಭ್ಯರ್ಥಿಗಳಿಗೆ 5 ವರ್ಷಗಳು.
ಪೋಸ್ಟ್ ಆಫೀಸ್ ನೇಮಕಾತಿ 2024 ಆಯ್ಕೆಯ ವಿಧಾನ:
ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಒಟ್ಟು ಮೂರು ಗಂಟೆಗಳ ಕಾಲ ನಡೆಯಲಿದ್ದು, ಒಟ್ಟು 100 ಅಂಕವನ್ನು ನಿಗದಿ ಪಡಿಸಲಾಗಿದೆ. ಗಣಿತ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಪ್ರತೀ ವಿಷಯಕ್ಕೂ ತಲಾ 25 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲೆ ಹಿಡಿತ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಕಂಪ್ಯೂಟರ್ ಕಲಿಕೆ ಪ್ರಮಾಣಪತ್ರವನ್ನು ಹೊಂದಿರಬೇಕು.
Post Office Recruitment 2024 10th Pass Can Apply For 98,083 Posts, Salary Rs 55000
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1