Pawan Kalyan : ಪವನ್‌ ಕಲ್ಯಾಣ್‌ ವಿರುದ್ಧ ಆರ್‌ಜಿವಿ ಕಣಕ್ಕೆ..! ಕುತೂಹಲ ಕೆರಳಿಸಿದ ಆಂಧ್ರ ಚುನಾವಣೆ

RGV Political entry : ಅಂಧ್ರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಜನಸೇನಾ ಪಕ್ಷದಿಂದ ಪವನ್‌ ಕಲ್ಯಾಣ್‌ ಅವರು ಪಿಠಾಪುರದಿಂದ ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ರಾಮ್‌ ಗೋಪಾಲ್‌ ವರ್ಮಾ ಸಹ ತಾವೂ ಪಿಠಾಪುರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

  • ಜನಸೇನಾ ಪಕ್ಷ ಮುಖ್ಯಸ್ಥ ಪವನ್ ಕಲ್ಯಾಣ್ ಕ್ಷೇತ್ರ ಘೋಷಣೆ
  • ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಮ ಗೋಪಾಲ್‌ ವರ್ಮಾ
  • ಪಿಠಾಪುರದಿಂದ ನಟ ಪವನ್‌ ಕಲ್ಯಾಣ ಚುನಾವಣಾ ಕಣಕ್ಕೆ

Pawan Kalyan : ಜನಸೇನಾ ಪಕ್ಷ ಮುಖ್ಯಸ್ಥ ಪವನ್ ಕಲ್ಯಾಣ್ ಕ್ಷೇತ್ರ ಘೋಷಣೆ ಬೆನ್ನಲ್ಲೆ ಖ್ಯಾತ ನಿರ್ದೇಶಕ ರಾಮ ಗೋಪಾಲ್‌ ವರ್ಮಾ ಅದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಅವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು.. ಅಂಧ್ರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಜನಸೇನಾ ಪಕ್ಷದಿಂದ ಪವನ್‌ ಕಲ್ಯಾಣ್‌ ಅವರು ಪಿಠಾಪುರದಿಂದ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಇದೇ ವೇಳೆ ರಾಮ್‌ ಗೋಪಾಲ್‌ ವರ್ಮಾ ಸಹ ತಾವೂ ಪಿಠಾಪುರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. (Andhra Pradesh assembly election) ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಮತ್ತು ಬಿಜೆಪಿಯೊಂದಿಗೆ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡು ಕಣ್ಣಕ್ಕಿಳಿದಿದೆ.

2019 ರಲ್ಲಿ, ಪವನ್ ಕಲ್ಯಾಣ್ ಗಾಜುವಾಕ ಮತ್ತು ಭೀಮಾವರಂ ನಿಂದ ಸ್ಪರ್ಧಿಸಿ ವೈಎಸ್‌ಆರ್‌ಸಿ ಅಭ್ಯರ್ಥಿಗಳ ವಿರುದ್ಧ ಸೋಲು ಅನುಭವಿಸಿದರು. ಈ ಬಾರಿ ಪವನ್‌ ಕಲ್ಯಾಣ್‌ ಹವಾ ಜೋರಾಗಿದ್ದು, ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ. ಇತ್ತ ಮೊದಲ ಬಾರಿಗೆ ಆರ್‌ಜಿವಿ ರಾಜಕೀಯ ಪ್ರವೇಶ ಘೋಷಿಸಿದ್ದು ಪಕ್ಷ ಯಾವುದು ಅಂತ ತಿಳಿಸಿಲ್ಲ.

ಆಂಧ್ರಪ್ರದೇಶ 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಪಿಠಾಪುರಂ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿದೆ. 2014 ರಲ್ಲಿ, ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. 2019 ರಲ್ಲಿ, ಜನಸೇನಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಒಂದು ಸ್ಥಾನವನ್ನು ಗೆದ್ದಿತು. 

Source: https://zeenews.india.com/kannada/entertainment/ram-gopal-varma-contest-against-pawan-kalyan-from-pithapuram-constituency-196575

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebok page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *