ನಾಯಕನಹಟ್ಟಿ (ಚಿತ್ರದುರ್ಗ): ಇಸ್ರೋ ಬಹುನಿರೀಕ್ಷಿತ ಮರುಬಳಕೆ ರಾಕೆಟ್ ಉಡಾವಣಾ ವಾಹನ (ಆರ್‌ಎಲ್‌ವಿ ಲೆಕ್ಸ್)ದ ಪರೀಕ್ಷೆಯನ್ನು ಮಾ.22ರಂದು ನಡೆಸಲು ಸಿದ್ದಗೊಂಡಿದೆ. ಇದಕ್ಕಾಗಿ ಹಲವಾರು ಬಾರಿ ರಿಹರ್ಸಲ್‌ಗಳನ್ನು ಇಲ್ಲಿನ ಡಿಆರ್‌ಡಿಒದ ಎಟಿಆರ್‌ನಲ್ಲಿ ಕೈಗೊಳ್ಳಲಾಗಿದೆ.

ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಸ್ವತಃ ಈ ಪ್ರಯೋಗಕ್ಕಾಗಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ಗುರುವಾರ ರಾತ್ರಿ ತಂಗಲು ಇಲ್ಲಿನ ಡಿಆರ್‌ಡಿಒದ ಅತಿಥಿ ಗೃಹದಲ್ಲಿ ಎಲ್ಲ ರೀತಿಯ ಸಿದ್ದತೆ ಕೈಗೊಳ್ಳಲಾಗಿದೆ. ಇಸ್ರೋದ ಅಧ್ಯಕ್ಷರಿಗೆ ವಿಶೇಷ ಭದ್ರತೆಯನ್ನು ಸರಕಾರ ಒದಗಿಸಿದೆ.
ಕಳೆದ 15 ದಿನಗಳಿಂದ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಎಟಿಆರ್‌ನಲ್ಲಿ ಬೀಡುಟ್ಟಿದ್ದು, ಈ ಪ್ರಯೋಗದ ಅಂತಿಮ ಹಂತಕ್ಕಾಗಿ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ರಾಕೆಟ್ ಉಡಾವಣೆ ವೆಚ್ಚ ಶೇ.80ರಷ್ಟು ಕಡಿಮೆ ಮಾಡುವ ಮತ್ತು ಚಂದ್ರಯಾನ 3ಕ್ಕೆ ಮೈಲುಗಲ್ಲಾಗಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1