ನಿಮ್ಮ ಮಕ್ಕಳು ಅಥವಾ ಮನೆಯಲ್ಲಿ ಯಾವುದಾದರು ಬಟ್ಟೆಯ ಮೇಲೆ ಇಂಕ್ ಹಿಡಿದಿರುತ್ತೆ. ಆದ್ರೆ ನೀವು ಅದನ್ನು ಎಷ್ಟೇ ತೊಳೆದರು ಈ ಕಲೆ ಹೋಗುವುದಿಲ್ಲ. ಕಾಲಾಂತರದಲ್ಲಿ ಈ ಕಲೆ ಸ್ವಲ್ಪ ಮಂದವಾಗುತ್ತದೆಯೇ ಹೊರತು ಸಂಪೂರ್ಣವಾಗಿ ಹೋಗುವುದಿಲ್ಲ. ಇನ್ನು ಬಿಳಿ ಬಟ್ಟೆಗೆ ಇಂಕ್ ತಾಕಿದರೆ ಆ ಬಟ್ಟೆ ಇನ್ನು ಮುಂದೆ ಬಳಸಲು ಸಾಧ್ಯವೇ ಇಲ್ಲ.

ಇನ್ನು ಮಕ್ಕಳು ಶಾಲೆಗೆ ಹಾಕುವ ಬಟ್ಟೆಯಲ್ಲಂತು ಈ ಇಂಕಿನ ಕಲೆಗಳು ಇದ್ದೇ ಇರುತ್ತವೆ. ಆಟವಾಡುವ ಮಕ್ಕಳು ಎಲ್ಲೆಂದರಲ್ಲಿ ಪೆನ್ನಿನಿಂದ ಗೆರೆಗಳನ್ನು ಮೂಡಿಸುತ್ತಾರೆ. ಹಾಗೆ ಬಟ್ಟೆ ಮೇಲೂ ಸಹ ಪೆನ್ನಿನಿಂದ ಬರೆದಿರುವುದು, ಇಂಕ್ ಲೀಕ್ ಆಗಿರುವುದನ್ನು ನಾವು ನೋಡುತ್ತೇವೆ.
ಆದ್ರೆ ಈ ಕಲೆಯನ್ನು ಹೋಗಲಾಡಿಸುವುದು ಬಹಳ ಕಷ್ಟ. ಒಂದಿಷ್ಟು ಕೆಮಿಕಲ್‌ಗಳ ಬಳಸಿ ನಾವು ಆ ಬಟ್ಟೆಯನ್ನು ತೊಳೆದ ಬಳಿಕವೂ ಅದರ ಕಲೆ ಹಾಗೆ ಉಳಿದುಬಿಡುತ್ತವೆ. ಬೇರೆ ಬಣ್ಣದ ಬಟ್ಟೆಯಾದರೆ ಅಷ್ಟೊಂದು ಗೊತ್ತಾಗುವುದಿಲ್ಲ, ಆದರೆ ಬಿಳಿ ಬಟ್ಟೆಯಾದರೆ ಇಂಕ್ ಕಲೆಯಿಂದ ಮತ್ತೆ ಅದನ್ನು ಬಳಸಲು ಬರುವುದಿಲ್ಲ. ಆದ್ರೆ ಇಲ್ಲೊಬ್ಬರು ಈ ಇಂಕ್ ಕಲೆಯನ್ನು ಹೇಗೆ 1 ನಿಮಿಷದಲ್ಲಿ ತೊಲಗಿಸಬಹುದು ಎಂದು ವಿಡಿಯೋ ಮಾಡಿದ್ದು, ಇದನ್ನು ಕಂಡ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಹಲವು ವರ್ಷದಿಂದ ಬಗೆಹರಿಯದ ಈ ಸಮಸ್ಯೆಯನ್ನು ಒಂದು ನಿಮಿಷದಲ್ಲಿ ಆಕೆ ಬಗೆಹರಿಸಿರುವುದನ್ನು ಕಂಡು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.
ಹೌದು ಹೌದು ವಿಡಿಯೋದಲ್ಲಿ ಆಕೆ ಕೇವಲ ಡೆಟಾಲ್ ಬಳಸಿ ಈ ಕಲೆಯನ್ನು ತೆಗೆಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಿಯ ವಿಜಯ್ ಕಿಚನ್ ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗಿದೆ. ನಾವು ಗಾಯಗಳಿಗೆ ಹಚ್ಚುವ ಮತ್ತು ಹ್ಯಾಂಡ್ ವಾಶ್ ಆಗಿ ಬಳಸುವ ಡೆಟಾಲ್ ಅನ್ನು ಹಾಗೂ ಒಂದು ಟೂಥ್ ಬ್ರಶ್ ಬಳಸಿ ಆಕೆ ಕಲೆಯನ್ನು ಹೋಗಲಾಡಿಸಿದ್ದಾರೆ.

https://www.instagram.com/reel/C4rzL_dPfyK/?utm_source=ig_web_copy_link
ವಿಡಿಯೋದಲ್ಲಿ ಏನಿದೆ?
ಮಕ್ಕಳ ಬಿಳಿ ಬಟ್ಟಗೆ ಪೆನ್ನಿನಲ್ಲಿ ಮೊದಲು ಆಕೆಯೇ ಗೀಚುತ್ತಾರೆ. ಇದಾದ ಬಳಿಕ ಟೆಡಾಲ್ ಹನಿಯನ್ನು ಆ ಕಲೆಗಳ ಮೇಲೆ ಹಾಕಿ ಹಲ್ಲು ಉಜ್ಜಲು ಬಳಸುವ ಬ್ರಶ್‌ನಿಂದ ಆ ಕಲೆಯ ಮೇಲೆ ಚೆನ್ನಾಗಿ ಉಜ್ಜುತ್ತಾರೆ. ಒಂದೇ ನಿಮಿಷದಲ್ಲಿ ಬಿಳಿ ಬಟ್ಟೆ ಮೇಲಿದ್ದ ಕಲೆಗಳು ಮಾಯವಾಗುತ್ತವೆ. ಇದನ್ನು ಕಂಡು ನೆಟ್ಟಿಗರು ಅಚ್ಚರಿ ಹೊರಹಾಕಿದ್ದು, ಇದೊಂದು ಉಪಯೋಗಕರ ಐಡಿಯಾ ಎಂದು ಮೆಚ್ಚುಗೆ ಹೊರಹಾಕಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1