ಪಂಜಾಬ್​ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು, ಕಿಂಗ್​ ಕೊಹ್ಲಿ ಅಬ್ಬರಕ್ಕೆ ತತ್ತರಿಸಿದ ಧವನ್​ ಪಡೆ

ಇಂಡಿಯನ್ ಪ್ರೀಮಿಯರ್ ಲೀಗ್ ನ 17ನೇ (IPL 2024) ಸೀಸನ್​ನ ಆರನೇ ಪಂದ್ಯ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ನಡೆಯಿತು. ಈ ಪಂದ್ಯದಲ್ಲಿ ಚಿನ್ನಸ್ವಾಮಿಯ ಬ್ಯಾಟಿಂಗ್​ ಪಿಚ್​​ ನಲ್ಲಿ ಪಂಜಾಬ್​ ಬ್ಯಾಟರ್​ ಗಳು ಉತ್ತಮ ಪ್ರದರ್ಶನ ನೀಡಿದರು.

ಈ ಮೂಲಕ ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್​ ಕಿಂಗ್ಸ್​ ತಂಡವು ನಿಗದಿತ 20 ಓವರ್​ಗೆ 6 ವಿಕೆಟ್ ನಷ್ಟಕ್ಕೆ 176 ರನ್​ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕರ್ನಾಟಕದ ಮನೆಮಗನಾಗಿರುವ ವಿರಾಟ್ ಕೊಹ್ಲಿ (Virat Kohli) ಅವರ ಅದ್ಭುತ ಬ್ಯಾಟಿಂಗ್​ ಮೂಲಕ ನಿಗದಿತ 19.2 ಓವರ್​ ಗೆ 6 ವಿಕೆಟ್ ನಷ್ಟಕ್ಕೆ 178 ರನ್​ ಗಳಿಸುವ ಮೂಲಕ 4 ವಿಕೆಟ್​ ಗಳ ಭರ್ಜರಿ ಗೆಲುವು ದಾಖಲಿಸಿದರು. ಈ ಮೂಲಕ ಆರ್​ಸಿಬಿ ತಂಡ ಸೀಸನ್​ ನ ಮೊದಲ ಗೆಲುವು ದಾಖಲಿಸಿದೆ.

ಪಂಜಾಬ್​ ವಿರುದ್ಧ ಅಬ್ಬರಿಸಿದ ಕಿಂಗ್​ ಕೊಹ್ಲಿ:

ಇನ್ನು, ಟಾಸ್​ ಗೆದ್ದು ಬೌಲಿಂಗ್​ ಮಾಡಿದ ಆರ್​ಸಿಬಿ ತಂಡಕ್ಕೆ ಪಂಜಾಬ್​ ತಂಡ 177 ರನ್​ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭದಲ್ಲಿಯೇ ನಾಯಕ ಫಾಫ್​ ಡುಪ್ಲೇಸಿಸ್​​ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಫಾಫ್​ 3 ರನ್​ ಸಿಡಿಸಿ ಔಟ್​ ಆದರೆ, ಕ್ಯಾಮರೂನ್​ ಗ್ರೀನ್​ ಸಹ 3 ರನ್​ ಗಳಿಸಿ ಪೆವೆಲಿಯನ್​ ಸೇರಿದರು. ರಜತ್​ ಪಾಟಿದಾರ್​​ ಸಹ 18 ರನ್​ ಗಳಿಸಿ ಔಟ್​​ ಆದರೆ ಗ್ಲೇನ್​ ಮ್ಯಾಕ್ಸ್​​ವೆಲ್​ ಮತ್ತೊಮ್ಮೆ ವಿಫಲರಾಗುವ ಮೂಲಕ 3 ರನ್​ ಗೆ ಪೆವೆಲಿಯನ್​ ಸೇರಿದರು. ಆದರೆ ಪಂಜಾಬ್​ ವಿರುದ್ಧ ಏಕಾಂಗಿಯಾಗಿ ಅಬ್ಬರಿಸಿದ ವಿರಾಟ್ ಕೊಹ್ಲಿ ಒಂದೆಡೆ ಫೋರ್​ ಗಳ ಸುರಿಮಳೆಗೈದರು. ಈ ಮೂಲಕ ಕೊಹ್ಲಿ 49 ಎಸೆತದಲ್ಲಿ 11 ಫೋರ್​ ಮತ್ತು 2 ಸಿಕ್ಸ್​ ಮೂಲಕ 77 ರನ್​ ಸಿಡಿಸಿದರು. ಅನುಜತ್​ ರಾವತ್​ ಸಹ ಕೇವಲ 11 ರನ್​ ಗಳಿಸಿ ಎಲ್​ಬಿ ಬಲೆಗೆ ಬಲಿಯಾದರು.

ಆದರೆ ಕೊಹ್ಲಿ ವಿಕೆಟ್ ಪತವಾಗುತ್ತಿದ್ದಂತೆ ಒಮ್ಮೆಲೆ ಪಂದ್ಯ ಪಂಜಾಬ್​ ಕಡೆ ವಾಲಿದಂತಾಯಿತು. ಆದರೆ ಕೊನೆಯಲ್ಲಿ ದಿನೇಶ್​​ ಕಾರ್ತಿಕ್​ ಮತ್ತು ಇಂಫ್ಯಾಕ್ಟ್​ ಪ್ಲೇಯರ್​ ಆಗಿದ್ದ ಮಹಿಪಾಲ್​ ಲೋಮ್ರೋರ್​ ಅವರ ಅದ್ಭುತ ಜೊತೆಯಾಟದ ಮೂಲಕ​ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ದಿನೇಶ್​​ ಕಾರ್ತಿಕ್​ 10 ಎಸೆತದಲ್ಲಿ 2 ಸಿಕ್ಸ್​ ಮತ್ತು 3 ಬೌಂಡರಿ ಮೂಲಕ 28 ರನ್​ ಹಾಗೂ ಲೋಮ್ರೋರ್​ 8 ಎಸೆತದಲ್ಲಿ 1 ಸಿಕ್ಸ್​ ಮತ್ತು 2 ಫೋರ್ ಮೂಲಕ 17 ರನ್​ ಗಳಿಸಿ ಮಿಂಚಿದರು.

ಪಂಜಾಬ್​ ಉತ್ತಮ ಬ್ಯಾಟಿಂಗ್​:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು vs ಪಂಜಾಬ್ ಪಂದ್ಯದ ಆರಂಭದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಪಂಜಾಬ್ ಕಿಂಗ್ಸ್‌ಗೆ ಮೊದಲು ಬ್ಯಾಟಿಂಗ್ ಆರಂಭಿಸಿತು. ಪಂಜಾಬ್​ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶಿಖರ್ ಧವನ್ 45 ರನ್, ಪ್ರಭಾಸಿಮ್ರಾನ್ ಸಿಂಗ್ 28 ರನ್, ಲಿವಿಂಗ್‌ಸ್ಟೋನ್ 17 ರನ್, ಸ್ಯಾಮ್ ಕರನ್ 23 ರನ್, ಜಾನಿ ಬೇರ್​ಸಅಟೋ 8 ರನ್, ಲೀವಿಂಗ್​ಸ್ಟನ್​ 17 ರನ್, ಜಿತೇಶ್ ಶರ್ಮಾ 27 ರನ್ ಮತ್ತು ಸುಶಾಂಕ್ ಸಿಂಗ್ 21 ರನ್ ಗಳಿಸಿದರು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್, ಗ್ಲೆನ್ ಮ್ಯಾಕ್ಸ್‌ವೆಲ್ 2 ವಿಕೆಟ್ ಪಡೆದರೆ, ಯಶ್ ದಯಾಲ್ 1 ವಿಕೆಟ್, ಅಲ್ಜಾರಿ ಜೋಸೆಫ್ 1 ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

Source: https://kannada.news18.com/news/sports/ipl-2024-pbks-vs-rcb-match-royal-challengers-bengaluru-won-by-4-wickets-skb-1626869.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *