Sunrisers Hyderabad: ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನುಹೈದರಾಬಾದ್ ದೂಳಿಪಟ ಮಾಡಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸರ್ರೈಸರ್ಸ್ ಹೈದರಾಬಾದ್ ಬ್ಯಾಟರ್ಗಳು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಲ್ಲಾ ಮುಂಬೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಬೌಂಡರಿ-ಸಿಕ್ಸರ್ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ ನಿಗದಿತ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 3 ನಷ್ಟಕ್ಕೆ 277 ರನ್ ಸಿಡಿಸಿದರು.
ಈ ಬೃಹತ್ ಸ್ಕೋರ್ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನುಹೈದರಾಬಾದ್ ದೂಳಿಪಟ ಮಾಡಿದೆ.
ಆರ್ಸಿಬಿ ತಂಡವು ಪುಣೆ ವಾರಿಯರ್ಸ್ ವಿರುದ್ಧ 2013ರಲ್ಲಿ 263 ರನ್ ಸಿಡಿಸಿದ್ದು ಐಪಿಎಲ್ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಕೋರ್ ಆಗಿತ್ತು. ಅಂದು ಆರ್ಸಿಬಿ ಪರ ಕ್ರಿಸ್ ಗೇಲ್ ಬರೋಬ್ಬರಿ 175 ರನ್ ಸಿಡಿಸಿದ್ದರು. ಇದು ಇತಿಹಾಸ ನಿರ್ಮಿಸಿದ ಪಂದ್ಯವಾಗಿತ್ತು. ಆದರೆ ಇಂದು ಮುಂಬೈ ವಿರುದ್ಧ ಹೈದರಾಬಾದ್ ದಾಖಲೆ ಮುರಿದಿದೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟರ್ಗಳು ಅಬ್ಬರಿಸುವ ಮೂಲಕ 20 ಓವರ್ಗೆ ಕೇವಲ 3 ವಿಕೆಟ್ ನಷ್ಟಕ್ಕೆ 277 ರನ್ ಸಿಡಿಸುವ ಮೂಲಕ ಆರ್ಸಿಬಿ ತಂಡದ 263 ರನ್ ದಾಖಲೆಯನ್ನು ದೂಳಿಪಟ ಮಾಡಿದೆ.
ಐಪಿಎಲ್ನಲ್ಲಿ ಗರಿಷ್ಠ ಸ್ಕೋರ್ಗಳ ಪಟ್ಟಿ: 2024ರಲ್ಲಿ SRH 277/3 vs MI, 2013 ರಲ್ಲಿ RCB 263/5 vs PWI, 2023 ರಲ್ಲಿ LSG 256/5 vs PBKS, 2016 ರಲ್ಲಿ RCB 248/3 ವಿರುದ್ಧ GL, 2010 ರಲ್ಲಿ CSK 246/5 vs RR, 2018 ರಲ್ಲಿ KKR 245/6 ವಿರುದ್ಧ KXIP, 2008 ರಲ್ಲಿ CSK 240/5 ವಿರುದ್ಧ KXIP, 2023 ರಲ್ಲಿ CSK 235/4 ವಿರುದ್ಧ KKR.
ಈ ವೇಳೆ ಸನ್ರೈಸರ್ಸ್ ಹೈದರಾಬಾದ್ ಪರ ಮಾಯಾಂಕ್ ಅಗರ್ವಾಲ್ 11 ರನ್ ಸಿಡಿಸಿದರು. ಬಳಿಕ ಬಂದ ಬ್ಯಾಟರ್ ಗಳು ಮುಂಬೈ ತಂಡದ ಬೌಲರ್ ಗಳ ಬೆವರಿಳಿಸಿದರು. ಈ ವೇಳೆ ಟ್ರಾವಿಸ್ ಹೆಡ್ 24 ಎಸೆತದಲ್ಲಿ 3 ಸಿಕ್ಸ್ ಮತ್ತು 9 ಬೌಂಡರಿ ಮೂಲಕ 62 ರನ್ ಸಿಡಿಸಿ ಮಿಂಚಿದರು.
ಹೆಡ್ ವಿಕೆಟ್ ಬಳಿಕ ಅಭಿಷೇಕ್ ಶರ್ಮಾ 23 ಎಸೆತದಲ್ಲಿ 7 ಸಿಕ್ಸ್ ಮತ್ತು 3 ಫೋರ್ ಮೂಲಕ 63 ರನ್ ಸಿಡಿಸಿದರು. ಅಡೇನ್ ಮಾರ್ಕಮ್ 28 ಎಸೆತದಲ್ಲಿ 1 ಸಿಕ್ಸ್ ಮತ್ತು 2 ಫೋರ್ ಮೂಲಕ 42 ರನ್ ಮತ್ತು ಕೊನೆಯಲ್ಲಿ ಅಬ್ಬರಿಸಿದ ಹೆನ್ರಿಚ್ ಕ್ಲಾಸಿನ್ 34 ಎಸೆತದಲ್ಲಿ 4 ಬೌಂಡರಿ ಮತ್ತು 7 ಸಿಕ್ಸ್ ಸಹಿನ ಅಜೇಯ 80 ರನ್ ಗಳಿಸಿದರು.
ಸನ್ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1