Horoscope 29 March: ದಿನಭವಿಷ್ಯ; ಇಂದು ನಿಮ್ಮ ಪ್ರೀತಿಪಾತ್ರರಿಂದಲೇ ಕಿರಿಕಿರಿಯಾಗಬಹುದು

ಮೇಷ ರಾಶಿ : ಇಂದು ನಿಮಗೆ ಯಾರ ಜೊತೆಯೂ ಸ್ಪರ್ಧಿಸಲು ಆಸಕ್ತಿ ಇರದು. ನೀವು ಹಣವನ್ನು ಕೂಡಿಡುವ ಕಡೆ ಮನಸ್ಸು ಮಾಡಿದರೆ, ಖರ್ಚಿನ ಕಡೆ ಅದು ಹೋಗುವುದು. ಇಂದು ನಿಮ್ಮ ಬಹುಕಾಲದಿಂದ ಬಾಕಿ ಉಳಿದಿದ್ದ ವಿವಾದ ಬಗೆಹರಿಯಲಿದೆ. ನಿಮ್ಮ ಹರ್ಷಚಿತ್ತದ ವ್ಯಕ್ತಿತ್ವದಿಂದಾಗಿ ಇತರ ಜನರು ನಿಮ್ಮೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ನಿಮ್ಮ ಮನೆಗೆ ಇಂದು ಅತಿಥಿಗಳ ಅನಿರೀಕ್ಷಿತ ಆಗಮನವಾಗಬಹುದು. ವ್ಯಾಪಾರಸ್ಥರು ಯಾವುದಾರೂ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಹುದು. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಗಿದಹೋದ ವಿಚಾರವನ್ನು ಸಂಗಾತಿಯ ಜೊತೆ ಚರ್ವಿತಚರ್ವಣ ಮಾಡುವಿರಿ. ನಿಮಗೆ ಆಗದವರನ್ನು ಎಂದಿಗೂ ಮಾತನಾಡಿಸಲಾರಿರಿ. ಹಗುರವಾದಷ್ಟು ತೂಕ ಹೆಚ್ಚಾಗುವುದು.

ವೃಷಭ ರಾಶಿ : ಇಂದು ನಿಮ್ಮ ಪ್ರೀತಿಪಾತ್ರರಿಂದಲೇ ಕಿರಿಕಿರಿಯಾಗಬಹುದು. ನಿಮ್ಮ ದಿನಚರಿಯಲ್ಲಿ ವ್ಯತ್ಯಾಸ ಆದ ಕಾರಣ ಎಲ್ಲವೂ ವ್ಯತ್ಯಾಸವಾಗಬಹುದು. ನೀವು ಮಿತವಾಗಿ, ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಖರ್ಚು ಮಾಡಬೇಕು. ನೀವು ಕುಟುಂಬ ಸದಸ್ಯರಿಂದ ಒತ್ತಡವನ್ನು ಎದುರಿಸಬಹುದು. ಹಣದ ಬಗ್ಗೆ ವಾದಗಳು ಇರಬಹುದು. ಬೇಡವೆಂಬ ವಿಷಯಕ್ಕೆ ಮನಸ್ಸು ಮತ್ತೆ ಮತ್ತೆ ಹೋಗುವುದು. ಅನೇಕ ವಿಚಾರಗಳ ಬಗ್ಗೆ ಒಟ್ಟಿಗೇ ಚಿಂತಿಸುವುದು ಕಷ್ಟವಾದೀತು. ಬಂಧುಗಳ ಆಗಮನದಿಂದ ಹೆಚ್ಚು ಸಂತೋಷವು ಇರುವುದು. ಉತ್ತಮ ವಿದ್ಯೆಯ ಕಾರಣ ಉತ್ತಮ ಆದಾಯದ ಕೆಲಸವೂ ಸಿಗಲಿದೆ. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು. ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕಾಗುವುದು.

ಮಿಥುನ ರಾಶಿ : ಇಂದು ನಿಮಗೆ ಕಾರ್ಯದ ಸ್ಥಳದಲ್ಲಿ ಸಂತೋಷವಿರುವುದು. ಉದ್ಯಮದ ಕ್ಷೇತ್ರಕ್ಕೆ ಅನುಭವಿಗಳನ್ನು ಸೇರಿಸಿಕೊಂಡು ಮುಂದುವರಿಯುವಿರಿ. ನೀವು ಇಂದಿನ ವ್ಯಾಪಾರದಲ್ಲಿ ಲಾಭವನ್ನೂ ಪಡೆಯುತ್ತೀರಿ. ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಗೌರವ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ಪ್ರಯೋಜನಗಳಿವೆ. ಮಹಿಳೆಯರು ಸ್ವಂತ ಉದ್ಯಮವನ್ನು ಆರಂಭಿಸುವ ನಿರ್ಧಾರಕ್ಕೆ ಬರಬಹುದು. ನಿಮ್ಮ ಬೆಳವಣಿಗೆಯು ನಿಮಗೆ ಸಮಾಧಾನ ತರದೇ ಇದ್ದೀತು. ವ್ಯಾಪಾರದಲ್ಲಿ ಇಂದಿನ ನಿಮ್ಮ ಬೆಳವಣಿಗೆಯು ನಿಮಗೆ ಅಚ್ಚರಿಯನ್ನು ತರಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ. ಮಕ್ಕಳ ವರ್ತನೆಗಳು ನಿಮಗೆ ಹಿಡಿಸದೇ ಇರಬಹುದು.

ಕಟಕ ರಾಶಿ : ನಿಮಗೆ ಮನೋ ನಿಯಂತ್ರಣದ ಬಗ್ಗೆ ಪಾಠವನ್ನು ಪಡೆಯಬೇಕಾಗುವುದು. ಇದು ನಿಮ್ಮ ಇಂದಿನ ಅನೇಕ ಕಾರ್ಯಗಳಿಗೆ ಉಪಯುಕ್ತವಾಗುವುದು. ಪರೋಪಕಾರದ ಬಗ್ಗೆ ಆಸಕ್ತಿಯು ಮೂಡಬಹುದು. ಅದೃಷ್ಟದಿಂದಲೂ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಜಾಗರೂಕರಾಗಿರಿ. ನಿಮ್ಮ ಆಹಾರದ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ವ್ಯಾಯಾಮವನ್ನು ಮಾಡಿ. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ನಿಮ್ಮನ್ನು ನಂಬಿದವರಿಗೆ ನೀವು ಮೋಸ ಮಾಡುವುದು ಬೇಡ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಗಬಹುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಮನೆಯಿಂದ ದೂರ ಇರಬೇಕಾದೀತು. ಸಜ್ಜನರ ಸಹವಾಸವನ್ನು ಹೆಚ್ಚು ಇಷ್ಟಪಡುವಿರಿ.

ಸಿಂಹ ರಾಶಿ : ಎಲ್ಲ ವಿಚಾರಕ್ಕೂ ತುರ್ತು ಉತ್ತರ ಬೇಡ. ಸ್ವಲ್ಪ ಯೋಜಲಚನೆಗೆ ಅವಕಾಶವಿರಲಿ. ನಿಮ್ಮ ಮುಂಗೋಪದಿಂದ ನಿಮ್ಮ ಬಳಿ ಮಾತನಾಡಲು ಭಯಪಡಬಹುದು. ಸಣ್ಣಪುಟ್ಟ ವಿಚಾರಕ್ಕೆ ಉದ್ವೇಗಕ್ಕೊಳಗಾಗುವಿರಿ. ಹಣದ ಅಪವ್ಯಯದಿಂದ ದಿನದ ಅಂತ್ಯದಲ್ಲಿ ಮಾನಸಿಕವಾಗಿ ಕುಗ್ಗುವಿರಿ. ವ್ಯಾಪಾರ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಫಲಪ್ರದವಾಗುವುದಿಲ್ಲ. ನೀವು ಗೌರವವನ್ನು ಪಡೆಯುತ್ತೀರಿ. ನೀವು ತಾಳ್ಮೆಯಿಂದ ಮಾಡುವ ಯಾವುದೇ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಕಛೇರಿಯಲ್ಲಿ ಕಾರ್ಯಗಳು ಒತ್ತಡದಿಂದ ಇದ್ದು ಕೆಲವು ತಪ್ಪು ಆಗಬಹುದು. ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನಸಂಚಾರದಿಂದ ಆಯಾಸವಾಗುವುದು.

ಕನ್ಯಾ ರಾಶಿ : ಯಾರದೋ ಕಾರಣದಿಂದ ಹೊಸ ಉದ್ಯೋಗವನ್ನು ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಹೊಸ ಹೆಜ್ಜೆ ಇಡುವಾಗ ಹೆಚ್ಚು ಆಲೋಚಿಸಿ. ಸಮಯ ವ್ಯರ್ಥ ಮಾಡಕೊಂಡು ಅನಂತರ ಪಶ್ಚಾತಾಪಪಡಬೇಕಾದೀತು. ಇಂದು ನೀವು ಸ್ವಂತ ಕೆಲಸಕ್ಕಾಗಿ ಸಾಕಷ್ಟು ಓಡಾಟ ಹಾಗೂ ಖರ್ಚನ್ನು ಮಾಡಬೇಕಾದೀತು. ನೀವು ಗುರುವಿನ ಬಗ್ಗೆ ಸಂಪೂರ್ಣ ಭಕ್ತಿ ಮತ್ತು ನಿಷ್ಠೆಯನ್ನು ಇಟ್ಟುಕೊಳ್ಳುವಿರಿ. ಇಂದು, ನೀವು ಹೊಸ ಕೆಲಸದಲ್ಲಿ ಹೂಡಿಕೆ ಮಾಡಬೇಕಾದರೆ, ನೀವು ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಬೇಡದ ಮಾತುಗಳನ್ನು ನೀವು ಎಲ್ಲರೆದುರು ಪ್ರಸ್ತಾಪಿಸುವಿರಿ.

ತುಲಾ ರಾಶಿ : ಹಲವು ಕಾರ್ಯಗಳಿಂದ ಈ ದಿನ ಬಹಳ ಒತ್ತಡವಿರುವುದು.‌ ವ್ಯವಹಾರ ಮತ್ತು ಕುಟುಂಬವನ್ನು ನೀವು ಸರಿದೂಗಿಸುಕೊಂಡು ಹೋಗುವುದು ಮುಖ್ಯವಾಗುವುದು. ಸ್ವಲ್ಪ ಸಮಯ ಏಕಾಂತದಲ್ಲಿದ್ದು ಮನಸ್ಸನ್ನು ಏಕಾಗ್ರಗೊಳಿಸುವಿರಿ. ನಿಮ್ಮ ಎಲ್ಲ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕಷ್ಟಕರವಾದ ಕಾರ್ಯಗಳೂ ಭಾರವಾಗದೇ ಇರಬಹುದು. ಪ್ರತಿಯೊಂದು ವಿಷಯದಲ್ಲೂ ನಿಮ್ಮ ಪೋಷಕರಿಂದ ನೀವು ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಕೆಲವು ಅನಗತ್ಯ ಖರ್ಚುಗಳನ್ನು ಸಹ ಅನುಭವಿಸಬಹುದು. ಅನಗತ್ಯ ಖರ್ಚು ಮಾಡುವ ಸಾಧ್ಯತೆಯೂ ಇದೆ. ಆಪ್ತರು ನಿಮಗೆ ಆತಿಥ್ಯವನ್ನು ಕೊಡಿಸುವರು. ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವುದು. ಪರೀಕ್ಷೆಯ ಫಲಿತಾಂಶವು ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಅಸಂಬದ್ಧ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳಿ. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ.

ವೃಶ್ಚಿಕ ರಾಶಿ : ನಿಮಗೆ ಯಾರದೋ ಮೂಲಕ ಅನಿರೀಕ್ಷಿತವಾಗಿ ಹಣ ಕೈ ಸೇರುವುದು. ನಿಮ್ಮ ಬಹುದಿನದ ಸಮಸ್ಯೆಯು ಬಗೆಹರಿಯಲಿದೆ. ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಉತ್ತಮ‌ ವಿಚಾರಗಳ ಕಡೆ ಗಮನವಿರಲಿ. ಪೋಷಕರ ಬೆಂಬಲ ಮತ್ತು ಆಶೀರ್ವಾದದಿಂದ ಸಮಾಧಾನವಿರುತ್ತದೆ. ನಿಮ್ಮ ಬಂಧುಗಳ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬಹುದು. ಮಧುರವಾದ ಮಾತುಗಳಿಂದ ತುಂಡಾಗುವ ಸಂಬಂಧವನ್ನು ಸರಿ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಗಟ್ಟಿಯಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು.

ಧನು ರಾಶಿ : ಇಂದಿನ ಲಾಭದಿಂದ ಹೆಚ್ಚಿನ ಹೂಡಿಕೆ ಮಾಡಲು ಆಸಕ್ತಿ ಇರುತ್ತದೆ. ಸ್ವಂತ ನಿರ್ಧಾರದ ಬಗ್ಗೆ ದೃಢವಾದ ಗಮನವಿರಲಿ. ನಿಮ್ಮ ಬಳಿ ಸ್ನೇಹಿತರು ಸಾಲಕ್ಕೆ ಬೇಡಿಕೆ ಇಡುವರು. ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾದೀತು. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮಕ್ಕಳ ವೃತ್ತಿಜೀವನದಲ್ಲಿ ನೀವು ಸಾಕಷ್ಟು ತೃಪ್ತರಾಗುವಿರಿ. ಇಂದು, ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ನೀವು ನಿಮ್ಮ ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ, ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಬಾಂಧವರ ಜೊತೆ ಸ್ನೇಹದಿಂದ ಇರುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ.

ಮಕರ ರಾಶಿ : ಮನೆಯಲ್ಲಿ ಇಂದು ಧಾರ್ಮಿಕ ಚುಟುವಟಿಕೆಯಲ್ಲಿ ಭಾಗಿಯಾಗಿ ಖುಷಿಪಡುವಿರಿ. ಸ್ನೇಹಿತರ ಜೊತೆ ವೃತ್ತಿಗೆ ಸಂಬಂಧಿಸಿದ ವಿಚಾರವನ್ನು ಮಾಡುತ್ತ ಸಮಯ ಕಳೆಯುತ್ತೀರಿ. ಸಮಯದ ಅಪವ್ಯಯದ ಕುರಿತು ಎಚ್ಚರವಿರಲಿ. ವಿದ್ಯಾರ್ಥಿಗಳು ಓದಿನೆಡೆ ಇನ್ನಷ್ಟು ಹೆಚ್ಚು ಗಮನ ಹರಿಸಬೇಕು. ಇಂದು ಅನಗತ್ಯ ಖರ್ಚುಗಳನ್ನು ತಪ್ಪಿಸಿದರೆ ಉತ್ತಮ. ಕೂಲಂಕುಷವಾಗಿ ಯೋಚಿಸಿದ ಅನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಉಂಟಾಗುವುದು. ಕೆಲವು ಅನಿರೀಕ್ಷಿತ ಲಾಭಗಳಿಂದಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ. ಆರ್ಥಿಕತೆಯನ್ನು ಸರಿದೂಗಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳಿ.

ಕುಂಭ ರಾಶಿ : ನಿಮ್ಮ ಮನಸ್ಸಿನ ಶಾಂತಿಗೆ ಆಧ್ಯಾತ್ಮವನ್ನು ಇಷ್ಟಪಡುವಿರಿ. ಸ್ವಯಾರ್ಜಿತ ಭೂಮಿಯನ್ನು ಮಾರಾಟ ಮಾಡಿ ಸಫಲರಾಗುವಿರಿ. ಹೂಡಿಕೆಯಲ್ಲಿ ನಿರೀಕ್ಷೆಗಿಂತಲು ಹೆಚ್ಚು ಲಾಭವಿರುವುದು. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಕಸಿವಿಸಿ. ಇಂದು ಹೆಚ್ಚಿನ ಕೆಲಸದ ನಿಮಿತ್ತ, ನೀವು ಹೆಚ್ಚು ತಿರುಗಾಟ ಮಾಡಬೇಕಾದೀತು. ಜಾಗರೂಕರಾಗಿರಿ, ಕಾಲಿಗೆ ಗಾಯವಾಗುವ ಸಂಭವವಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ನಿಮಗೇ ಪ್ರಯೋಜನವನ್ನು ನೀಡುತ್ತದೆ. ಇಂದು ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ. ಪ್ರವಾಸ ವಿಚಾರದಲ್ಲಿ ಬಹಳ ಗೊಂದಲವಿರುವುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು. ಶತ್ರುಗಳ ಚಿಂತೆಯಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮಷ್ಟಕ್ಕೆ ನೀವಿರಲು ಸಾಧ್ಯವಾಗದು.

ಮೀನ ರಾಶಿ : ನಿಮ್ಮಿಂದಾಗಿ ಸ್ನೇಹಿತರ ವ್ಯಾಪಾರದಲ್ಲಿ ಲಾಭವಿರುವುದು. ಬಿಡುವಿಲ್ಲದ ಕೆಲಸದ ನಡುವೆಯು ನಿಮ್ಮವರಿಗೆ ಸಮಯ ಹೊಂದಿಸಿಕೊಳ್ಳುವಿರಿ. ಇಂದು ಸಿಗುವ ಹಣದಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಂಗಾತಿಯ ಜೊತೆ ಮುನಿಸಿರುವುದು. ನಿಮ್ಮ ಕೌಶಲ್ಯದ ಕೆಲಸವನ್ನು ಗುರುತಿಸುವರು. ಇಂದು ನೀವು ಹಣದ ವಿಷಯಗಳಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನೀವು ಹಳೆಯ ಸ್ನೇಹಿತರಿಂದ ಬೆಂಬಲವನ್ನು ಪಡೆಯುವಿರಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಗೌರವವನ್ನೂ ಪಡೆಯುತ್ತೀರಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು. ಉತ್ತಮ ಕೆಲಸದ ಅನ್ವೇಷಣೆಯನ್ನು ಮಾಡುವಿರಿ.

Source : https://tv9kannada.com/horoscope/nitya-bhavishya-29th-march-aries-to-pisces-daily-horoscope-in-kannada-krn-807808.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *