IPL 2024: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಭದ್ರತೆ ಒದಗಿಸುವ ಬಗ್ಗೆ ತೊಂದರೆಯಿರುವುದರಿಂದ ಪಂದ್ಯವನ್ನು ಶಿಫ್ಟ್ ಮಾಡುವ ಚಾನ್ಸ್ ಇದೆ. ರಾಮ ನವಮಿ ಹಬ್ಬದ ಪ್ರಯುಕ್ತ ಕೋಲ್ಕತ್ತಾದ ಕೆಲ ಪ್ರದೇಶಗಳು ಸೂಕ್ಷ್ಮವಾಗಿರುತ್ತವೆ.

ಇಂಡಿಯನ್ ಪ್ರೀಮಿಯರ್ ಲೀಗ್ 2024 ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ಈ ಬದಲಾವಣೆಯಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಒಂದು ತವರಿನ ಪಂದ್ಯ ಮಿಸ್ ಆಗಲಿದೆ. ಏಪ್ರಿಲ್ 17 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತವರು ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಬೇಕಿತ್ತು. ಆದರೆ ಇದೀಗ ಈ ಪಂದ್ಯ ಬದಲಾವಣೆ ಆಗಲಿದೆ.
ಅಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಭದ್ರತೆ ಒದಗಿಸುವ ಬಗ್ಗೆ ತೊಂದರೆಯಿರುವುದರಿಂದ ಪಂದ್ಯವನ್ನು ಶಿಫ್ಟ್ ಮಾಡುವ ಚಾನ್ಸ್ ಇದೆ. ರಾಮ ನವಮಿ ಹಬ್ಬದ ಪ್ರಯುಕ್ತ ಕೋಲ್ಕತ್ತಾದ ಕೆಲ ಪ್ರದೇಶಗಳು ಸೂಕ್ಷ್ಮವಾಗಿರುತ್ತವೆ. ಇದರಿಂದಾಗಿ ಅಂದು ಪಂದ್ಯಕ್ಕೆ ಸರಿಯಾದ ಭದ್ರತೆ ನೀಡಲು ಸಾಧ್ಯವಾಗದ ಕಾರಣ ಕೆಕೆಆರ್ ಮತ್ತು ರಾಹಸ್ಥಾನ್ ಪಂದ್ಯದ ವೇಳಾಪಟ್ಟಿ ಬದಲಾಗಲಿದೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏಪ್ರಿಲ್ 16 ಮತ್ತು ಏಪ್ರಿಲ್ 17ರ ಪಂದ್ಯಗಳನ್ನು ಬದಲಾಯಿಸಲು ಪರಿಗಣಿಸುತ್ತಿದೆ. ಏಪ್ರಿಲ್ 16 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಪಂದ್ಯವಿತ್ತು. ಈ ದಿನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಪಂದ್ಯದ ಜೊತೆ ಈ ಪಂದ್ಯ ಕೂಡ ಈಗ ಬದಲಾಗುವ ಸಾಧ್ಯತೆ ಇದೆ.
ಅಹಮದಾಬಾದ್ನಲ್ಲಿ ಏಪ್ರಿಲ್ 16ರಂದು ಗುಜರಾತ್ ಪಂದ್ಯದ ಬದಲು ಕೋಲ್ಕತ್ತಾ ಪಂದ್ಯವನ್ನು ಆಡುವ ಸಾಧ್ಯತೆಯಿದೆ. ನಾಲ್ಕು ತಂಡಗಳ ಆಟಗಳ ನಡುವೆ ಸಾಕಷ್ಟು ಅಂತರವಿದ್ದು, ವೇಳಾಪಟ್ಟಿಯನ್ನು ಸ್ವಲ್ಪ ಬದಲಾಯಿಸಬಹುದು ಎಂದು ವರದಿಯಾಗಿದೆ. ಭಾಗವಹಿಸುವ ನಾಲ್ಕು ತಂಡಗಳು ಮತ್ತು ಪ್ರಸಾರಕರಿಗೆ ಸಂಭವನೀಯ ವಿನಿಮಯದ ಬಗ್ಗೆ ತಿಳಿಸಲಾಗಿದೆ, ಇದು ಕೋಲ್ಕತ್ತಾದ ಭದ್ರತಾ ಪರಿಸ್ಥಿತಿ ಮೇಲೆ ನಿಂತಿದೆ.
ಕ್ರಿಕೆಟ್ ನೆಕ್ಸ್ಟ್ಗೆ ನೀಡಿದ ಸಂದರ್ಶನದಲ್ಲಿ ಹೆಸರಿಸದ ಅಧಿಕಾರಿಯೊಬ್ಬರು, “ಹೌದು, ಏಪ್ರಿಲ್ 16 ರಂದು ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಏಪ್ರಿಲ್ 17ರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದೊಂದಿಗೆ ಬದಲಾಯಿಸಬಹುದು. ಈ ತಂಡದ ಪಂದ್ಯಗಳ ನಡುವೆ ಸಾಕಷ್ಟು ಅಂತರವಿರುವುದರಿಂದ ಮತ್ತು ಎರಡು ಸ್ಥಳಗಳಲ್ಲಿ ಅಗತ್ಯ ಬದಲಾವಣೆ, ವ್ಯವಸ್ಥೆಗಳನ್ನು ಮಾಡಲು ಸಾಕಷ್ಟು ಸಮಯ ಇರುವುದರಿಂದ ಇದು ದೊಡ್ಡ ಸವಾಲಾಗಿ ಕಾಣುತ್ತಿಲ್ಲ ಎಂದಿದ್ದಾರೆ.
ರಾಮ ನವಮಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ದುರ್ಗಾ ಪೂಜೆ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದಲ್ಲಿ ದೊಡ್ಡಮಟ್ಟದಲ್ಲಿ ಆಚರಿಸುವ ಒಂದು ಹಬ್ಬವಾಗಿದೆ. ಇದೇ ಕಾರಣದಿಂದಾಗಿ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆಯನ್ನು ಈ ಕಾರ್ಯಕ್ರಮಕ್ಕೆ ನೀಡಲಾಗುತ್ತದೆ. ಇದರಿಂದಾಗಿ ಐಪಿಎಲ್ ಭದ್ರತೆಗೆ ತೊಡಕಾಗುವ ಕಾರಣದಿಂದಾಗಿ ಈ ಬದಲಾವಣೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ಸಿC), ಜೋಸ್ ಬಟ್ಲರ್, ಶಿಮ್ರೋನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನೊವನ್ ಫೆರೇರಾ, ಕುನಾಲ್ ರಾಥೋಡ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಆಡಂ ಜಂಪಾ , ಅವೇಶ್ ಖಾನ್, ರೋವ್ಮನ್ ಪೊವೆಲ್, ಶುಭಂ ದುಬೆ, ಅಬಿದ್ ಮುಷ್ತಾಕ್, ನಾಂದ್ರೆ ಬರ್ಗರ್. ಗಾಯಗೊಂಡ: ಪ್ರಸಿದ್ಧ್ ಕೃಷ್ಣ.
ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (C), ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಫಿಲ್ ಸಾಲ್ಟ್, ಸುನಿಲ್ ನರೈನ್, ಸುಯಾಶ್ ಶರ್ಮಾ, ಅನುಕೂಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕೆಎಸ್ ಸಕರಿಯಾ, ಮಿಚೆಲ್ ಸ್ಟಾರ್ಕ್, ಆಂಗ್ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ಶೆರ್ಫಾನೆ ರುದರ್ಫೋರ್ಡ್, ಮನೀಶ್ ಪಾಂಡೆ, ಮುಜೀಬ್ ಉರ್ ರೆಹಮಾನ್, ದುಷ್ಮಂತ ಚಮೀರಾ, ಸಾಕಿಬ್ ಹುಸೇನ್. ಗಾಯಗೊಂಡ ಆಟಗಾರರು: ಜೇಸನ್ ರಾಯ್, ಗಸ್ ಅಟ್ಕಿನ್ಸನ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1