ಇಂದು ಚುಟುಕು ಸಮರದಲ್ಲಿ ರಣಕಲಿಗಳು ಎದುರಾಗಿದ್ದಾರೆ. ಪಂಜಾಬ್ ತಂಡದ (Punjab) ಎದುರು ಹೈದ್ರಾಬಾದ್ (Hyderabad) ತಂಡ ಕಣಕ್ಕಿಳಿದಿದೆ. ಇಂದು ಚಂಡೀಗಢದ ಮುಲ್ಲನ್‌ಪುರದ ನೂತನ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) 23ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ (Pubjab Kings) ಮತ್ತು ಪ್ರವಾಸಿ ಸನ್‌ರೈಸರ್ಸ್ ಹೈದರಾಬಾದ್ (Sunrises Hyderbad) ತಂಡಗಳು ಸೆಣಸಾಡಿತ್ತು. ಎಸ್‌ಆರ್‌ಹೆಚ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಪಂಜಾಬ್ ಬೌಲರ್ಸ್ ಕಾಟ ಕೊಟ್ರು. ಆದ್ರೂ ಸನ್‌ರೈರ್ಸಸ್ ಬ್ಯಾಟ್ಸ್‌ಮನೆಗಳು 20 ಓವರ್‌ಗಳಲ್ಲಿ 182 ರನ್‌ಗಳಿಸಿತ್ತು. ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 180 ರನ್‌ಗಳಿಸಿ 3ರನ್‌ಗಳಿಂದ ಸೋತಿದೆ.

ಪಂಜಾಬ್ ತಂಡಕ್ಕೂ ಆರಂಭಿಕ ಆಘಾತ!
ಪ್ಯಾಟ್ ಕಮಿನ್ಸ್ ಎಸೆದ 2ನೇ ಓವರ್‌ನ 4ನೇ ಎಸೆತದಲ್ಲಿ ಜಾನಿ ಬೈರ್ಸ್ಟೋವ್ ಕ್ಲೀನ್ ಬೌಲ್ಡ್ ಆದರು. ಭುವನೇಶ್ವರ್ ಕುಮಾರ್ ಎಸೆದ 3ನೇ ಓವರ್‌ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಪ್ರಭ್ಸಿಮ್ರಾನ್ ಸಿಂಗ್ ಕೂಡ ಕ್ಯಾಚ್ ನೀಡಿ ಔಟಾದ್ರು.ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್‌ನ 4ನೇ ಎಸೆತದಲ್ಲಿ 14 ರನ್‌ಗಳಿಸಿದ್ದ ಶಿಖರ್ ಧವನ್ ಸ್ಟಂಪ್ ಔಟಾದ್ರು.
ನಟರಾಜನ್ ಎಸೆದ 10ನೇ ಓವರ್‌ನ ಮೊದಲ ಎಸೆತದಲ್ಲಿ ಸ್ಯಾಮ್ ಕರನ್(29 ರನ್) ಕೂಡ ಕ್ಯಾಚ್ ನೀಡಿ ಔಟಾದ್ರು. ಇನ್ನೂ ಕೊನೆ ಬಾರಿ ಪಂಜಾಬ್ ತಂಡವನ್ನು ಏಕಾಂಕಿಯಾಗಿ ಗೆಲ್ಲಿಸಿದ್ದ ಶಶಾಂಕ್ ಈ ಬಾರಿಯೂ ಅಬ್ಬರಿಸಿ ಬೊಬ್ಬರಿದ್ರು.
ಸನ್‌ರೈರ್ಸಸ್‌ಗೆ ಆರಂಭಿಕ ಆಘಾತ!
ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ಸನ್‌ರೈರ್ಸಸ್ ಬ್ಯಾಟರ್ಸ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಈ ಸಮಯದಲ್ಲಿ ತಂಡಕ್ಕೆ ಆಸರೆಯಾಗಿದ್ದು ನಿತೀಶ್ ರೆಡ್ಡಿ. ಭರ್ಜರಿ ಅರ್ಧಶತಕ ಕೂಡ ಬಾರಿಸಿದ್ರು. ಮೊದಲಿಗೆ ವಿಕೆಟ್ ತೆಗೆದು ಮೈಲುಗೈ ಸಾಧಿಸಿದ್ದ ಪಂಜಾಬ್ ಬಳಿಕ ಹಿನ್ನಡೆ ಅನುಭವಿಸಿತು. 15 ಎಸೆತಗಳಲ್ಲಿ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಔಟಾದ್ರೆ, ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಾರ್ಕ್ರಾಮ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾದ್ರು.
ಸ್ಯಾಮ್ ಕರನ್ ಎಸೆದ 5ನೇ ಓವರ್‌ನ 6ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿ ಔಟಾದ್ರು. ಹರ್ಷಲ್ ಪಟೇಲ್ ಎಸೆದ 10ನೇ ಓವರ್‌ನ 4ನೇ ಎಸೆತದಲ್ಲಿ ರಾಹುಲ್ ತ್ರಿಪಾಠಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾದ್ರು. ಹರ್ಷಲ್ ಪಟೇಲ್ ಎಸೆದ 14ನೇ ಓವರ್‌ನ ಮೊದಲ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಔಟ್ ಆದ್ರು. ಅರ್ಷದೀಪ್ ಸಿಂಗ್ ಎಸೆದ 17ನೇ ಓವರ್‌ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಅಬ್ದುಲ್ ಸಮದ್ ಕ್ಯಾಚ್ ನೀಡಿದ್ರು. ನಿತೀಶ್ ರೆಡ್ಡಿ ಕೂಡ ಅದೇ ಓವರ್‌ನಲ್ಲಿ ಕ್ಯಾಚ್ ನೀಡಿ ಔಟಾದ್ರು.
ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಿತ್ತ ಅರ್ಷದೀಪ್!
ಒಂದು ಸಮಯದಲ್ಲಿ ಪಂಜಾಬ್‌ಗೆ ಪಂಚ್ ಕೊಡ್ತಿದ್ದ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಒಂದೇ ಓವರ್‌ನಲ್ಲಿ ಅರ್ಷದೀಪ್ ಔಟ್ ಮಾಡಿದ್ರು. ಸಮದ್ ಹಾಗೂ ನಿತೀಶ್ ರೆಡ್ಡಿ ವಿಕೆಟ್‌ಗಳನ್ನು ಪಡೆದುಕೊಂಡರು. ಒಂದು ವೇಗ ಪಡೆದುಕೊಂಡಿದ್ದ ಸನ್‌ರೈಸರ್ಸ್‌ಗೆ ಈ ಸಮಯದಲ್ಲಿ ಹಿನ್ನಡೆಯಾಯ್ತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1