IPL 2024, CSK vs MI: ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗೆ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ 20 ರನ್ ಗಳಿಂದ ಸೋಲನ್ನಪ್ಪಿತು.

ಐಪಿಎಲ್ ಇತಿಹಾಸದಲ್ಲಿ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs MI) ತಂಡಗಳು ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಸೆಣಸಾಡಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗೆ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ 20 ರನ್ ಗಳಿಂದ ಸೋಲನ್ನಪ್ಪಿತು.
ರೋಹಿತ್ ಏಕಾಂಗಿ ಹೋರಾಟ:
ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭದಿಂದಲೂ ರೋಹಿತ್ ಶರ್ಮಾ ಬೆನ್ನೆಲುಭಾಗಿ ನಿಂತರು. ಆದರೆ ರೋಹಿತ್ ಜೊತೆ ಯಾರೋಬ್ಬರೂ ಉತ್ತಮ ಸಾಥ್ ನೀಡಲಿಲ್ಲ. ಇಶಾನ್ ಕಿಶನ್ 15 ಎಸೆತದಲ್ಲಿ 23 ರನ್, ಸೂರ್ಯಕುಮಾರ್ ಯಾದವ್ ಶೂನ್ಯ, ತಿಲಕ್ ವರ್ಮಾ 20 ಎಸೆತದಲ್ಲಿ 5 ಬೌಂಡರಿ ಸಹಿತ 31 ರನ್, ನಾಯಕ ಹಾರ್ದಿಕ್ ಪಾಂಡ್ಯ 2 ರಮ್, ಟೀಮ್ ಡೇವಿಡ್ 5 ಎಸೆತದಲ್ಲಿ 13 ರನ್, ಶೇಫರ್ಡ್ 1 ರನ್ ಗಳಿಸಿದರು. ಆದರೆ ಮುಂಬೈ ಪರ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರೂ ಸಹ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ರೋಹಿತ್ 63 ಎಸೆತದಲ್ಲಿ 11 ಫೋರ್ ಮತ್ತು 5 ಸಿಕ್ಸ್ ಮೂಲಕ 105 ರನ್ ಗಳಿಸಿ ಅಜೇಯರಾಗಿ ಉಳಿದರು.
ಮುಂಬೈನಲ್ಲಿ ಚೆನ್ನೈ ಬಾಯ್ಸ್ ಅಬ್ಬರ:
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಸಿಎಸ್‌ಕೆ ಇನಿಂಗ್ಸ್ ಅನ್ನು ಉತ್ತಮವಾಗಿ ಆರಂಭಿಸಲಿಲ್ಲ. 8 ರನ್‌ಗಳಿಗೆ ಮೊದಲ ವಿಕೆಟ್ ಪತನವಾಯಿತು. ಅಜಿಂಕ್ಯ ರಹಾನೆ ಆರಂಭಿಕರಾಗಿ 5 ರನ್ ಗಳಿಸಿ ಔಟಾದರು. ಆ ಬಳಿಕ ನಾಯಕ ರಿತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ತಂಡದ ಇನಿಂಗ್ಸ್ ಮುನ್ನಡೆಸಿದರು. ಕೂಲ್ ಆಗಿ ಬ್ಯಾಟಿಂಗ್ ಮಾಡಿ ಅರ್ಧಶತಕದ ಜೊತೆಯಾಟವಾಡಿದರು. 60 ರನ್‌ಗಳಿಗೆ ಸಿಎಸ್‌ಕೆ ಎರಡನೇ ವಿಕೆಟ್ ಪತನವಾಯಿತು. ರಚಿನ್ ರವೀಂದ್ರ 21 ರನ್ ಗಳಿಸಿ ಔಟಾದರು. ನಂತರ ಬಂದ ಶಿವಂ ದುಬೆ ಆರಂಭದಿಂದಲೇ ಮರ್ಕ್ಯುರಿಯಲ್ ಬ್ಯಾಟಿಂಗ್ ಆರಂಭಿಸಿದರು. ರಿತುರಾಜ್ ಗಾಯಕ್ವಾಡ್ ಉತ್ತಮ ಸಾಥ್ ನೀಡಿದರು. ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಪೂರೈಸಿದರು. ರಿತುರಾಜ್-ದುಬೆ ಬಿರುಗಾಳಿಯ ವೇಗದಲ್ಲಿ 90 ರನ್‌ಗಳ ಜೊತೆಯಾಟ ನಡೆಸಿದರು. 150 ರನ್ ಗಳಿಗೆ ಸಿಎಸ್ ಕೆ ಮೂರನೇ ವಿಕೆಟ್ ಪತನವಾಯಿತು. ರಿತುರಾಜ್ ಗಾಯಕ್ವಾಡ್ 40 ಎಸೆತಗಳಲ್ಲಿ 69 ರನ್ ಗಳಿಸಿ ಔಟಾದರು.
ಆಗ ಡ್ಯಾರಿಲ್ ಮಿಚೆಲ್ ಕ್ರೀಸ್‌ಗೆ ಬಂದರು. ಆದರೆ ಜಸ್ಪ್ರೀತ್ ಬುಮ್ರಾ ಸ್ಲಾಗ್ ಓವರ್‌ನಲ್ಲಿ ಎರಡು ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗದ ಕಾರಣ, ಸಿಎಸ್‌ಕೆ ರನ್ ರೇಟ್ ಸ್ವಲ್ಪ ಕಡಿಮೆಯಾಯಿತು. ಆದರೆ ಕೊನೆಯ ಓವರ್‌ನಲ್ಲಿ ಡ್ಯಾರಿಲ್ ಮಿಚೆಲ್ 17 ರನ್ ಗಳಿಸಿ ಔಟಾದ ನಂತರ ಎಂಎಸ್ ಧೋನಿ ಮೈದಾನಕ್ಕೆ ಬಂದರು. ಇನ್ನು 4 ಎಸೆತಗಳು ಬಾಕಿ ಇರುವಾಗ ಧೋನಿ ಸತತ 3 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ 2 ರನ್‌ಗಳು ಬಂದವು. ಧೋನಿ 4 ಎಸೆತಗಳಲ್ಲಿ 20 ರನ್ ಗಳಿಸಿದರು.
ಅತ್ತ ಅಜೇಯರಾಗಿ ಉಳಿದ ಶಿವಂ ದುಬೆ 66 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಸಿಎಸ್‌ಕೆ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 206 ರನ್ ಗಳಿಸಿತು.ಧೋನಿ ಕೇವಲ 4 ಎಸೆತಗಳಲ್ಲಿ 20 ರನ್ ಗಳಿಸಿದರು. ಸ್ಟ್ರೈಕ್ ರೇಟ್ 500 ಇತ್ತು. ಧೋನಿ ಬ್ಯಾಟಿಂಗ್ ಅಬ್ಬರದ ವಿಡಿಯೋ ನೆಟ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದೆ. ಇಂಥದ್ದೊಂದು ಝಲಕ್ ನೋಡಿ ಎಂಎಸ್ ಧೋನಿ ಇಡೀ ವಾಂಖೆಡೆ ಸ್ಟೇಡಿಯಂಗೆ ಬಂದಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಮಾಹಿ 2011ರ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1