ಬೇಸಿಗೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ತುಂಬಾ ಹೀಟ್ ಆಗ್ತಿದ್ಯಾ? ಈ ಟಿಪ್ಸ್ ಅನುಸರಿಸಿ

  • ಕೆಲವೊಮ್ಮೆ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಫೋನ್ ಅನ್ನು ಬಿಸಿಲಿಗೆ ಅದರಲ್ಲೂ ಸೂರ್ಯನ ನೇರ ಕಿರಣಗಳಿಗೆ ಒಡ್ಡಿಕೊಳ್ಳುತ್ತೇವೆ.
  • ಆದರೆ, ಇದು ಫೋನ್ ಅತಿಯಾಗಿ ಬಿಸಿಯಾಗಲು ಕಾರಣವಾಬಹುದು.
  • ಇದನ್ನು ತಪ್ಪಿಸಲು ಫೋನ್ ಅನ್ನು ಯಾವಾಗಲು ನೆರಳಿನ ಜಾಗದಲ್ಲಿ ಇರಿಸಿ.

Smartphone Safety Tips: ಬೇಸಿಗೆ ಕಾಲದಲ್ಲಿ ಸ್ಮಾರ್ಟ್‌ಫೋನ್ (ಆಂಡ್ರಾಯ್ಡ್ ಅಥವಾ ಐಫೋನ್ ಆಗಿರಬಹುದು)  ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುತ್ತದೆ. ಇದು ಫೋನ್ ಬ್ಯಾಟರಿ ಹಾನಿಗೊಳಿಸುವುದು, ಅದರ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುವುದರ ಜೊತೆಗೆ ಕೆಲವೊಮ್ಮೆ ಫೋನ್ ಸ್ಫೋಟದ (Phone Blast) ಅಪಾಯವನ್ನು ಕೂಡ ಹೆಚ್ಚಿಸಬಹುದು. ಇದನ್ನು ತಪ್ಪಿಸಲು ಕೆಲವು ಟಿಪ್ಸ್ ಅನುಸರಿಸುವುದು ಮುಖ್ಯವಾಗಿದೆ. 

ಬೇಸಿಗೆ ಕಾಲದಲ್ಲಿ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುವುದನ್ನು ತಪ್ಪಿಸಲು ಈ ಟಿಪ್ಸ್ ಅನುಸರಿಸಿ: 
ಸ್ಮಾರ್ಟ್‌ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಡಿ: 

ನಾವು ಧರಿಸುವ ಉಡುಪಿನ ಪಾಕೆಟ್/ಜೇಬು ಫೋನಿಗೆ ಕಿರಿದಾದ ಕೋಣೆಯಂತೆ ಆಗಲಿದೆ. ಒಂದೆಡೆ ದೇಹದ ಉಷ್ಣತೆ, ಮತ್ತೊಂದೆಡೆ ಸೂರ್ಯನ ಶಾಖ ಹಾಗೂ ಸರಿಯಾಗಿ ಗಾಳಿಯಾಡದಿರುವುದು ಫೋನ್ ಅತಿಯಾಗಿ ಹೀಟ್ (Phone Overheatin)  ಆಗಲು ಕಾರಣವಾಗಿರಬಹುದು. ಇದು ಕೆಲವೊಮ್ಮೆ ಫೋನ್ ಬ್ಲಾಸ್ಟ್ (Phone Blast) ಗೂ ಕೂಡ ಕಾರಣವಾಗಬಹುದು. ಹಾಗಾಗಿ, ಫೋನ್ ಅನ್ನು ಜೇಬಿನಲ್ಲಿ ಇಡುವ ಅಭ್ಯಾಸವನ್ನು ತಪ್ಪಿಸಿ. 

ಫೋನ್‌ಗೆ ವಿಶ್ರಾಂತಿ ನೀಡಿ: 
ಪ್ರಸ್ತುತ, ಫೋನ್ ತುಂಬಾ ಅಗತ್ಯ ಸಾಧನವೇ ಆಗಿದ್ದರೂ ಕೂಡ ಅದಕ್ಕೂ ವಿಶ್ರಾಂತಿ ಆಗತ್ಯವಿದೆ. ನಿಮ್ಮ ಫೋನ್ ಬಿಸಿಯಾಗಿರುವ ಸಂದರ್ಭದಲ್ಲಿ ಅನಾವಶ್ಯಕವಾಗಿ ಅದರ ಬಳಕೆಯನ್ನು ತಪ್ಪಿಸಿ. ಅದರಲ್ಲೂ, ವಿಡಿಯೋ ವೀಕ್ಷಣೆ, ಗೇಮ್ (Game) ಆಡುವುದನ್ನು ತಪ್ಪಿಸಿ ಅದಕ್ಕೆ ವಿಶ್ರಾಂತಿ ನೀಡಿ. 

ಸೂರ್ಯನ ನೇರ ಕಿರಣಗಳು ಫೋನ್ ಮೇಲೆ ಬೀಳದಂತೆ ರಕ್ಷಿಸಿ: 
ಕೆಲವೊಮ್ಮೆ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಫೋನ್ ಅನ್ನು ಬಿಸಿಲಿಗೆ ಅದರಲ್ಲೂ ಸೂರ್ಯನ ನೇರ ಕಿರಣಗಳಿಗೆ ಒಡ್ಡಿಕೊಳ್ಳುತ್ತೇವೆ.  ಆದರೆ, ಇದು ಫೋನ್ ಅತಿಯಾಗಿ ಬಿಸಿಯಾಗಲು ಕಾರಣವಾಬಹುದು. ಇದನ್ನು ತಪ್ಪಿಸಲು ಫೋನ್ ಅನ್ನು ಯಾವಾಗಲು ನೆರಳಿನ ಜಾಗದಲ್ಲಿ ಇರಿಸಿ. 

ಏರ್‌ಪ್ಲೇನ್ ಮೋಡ್‌ ಆನ್ ಮಾಡಿ: 
ಆಟಗಳನ್ನು ಆಡುವುದು, ಫೋನ್ ಕರೆಗಳನ್ನು ಮಾಡುವುದು ಅಥವಾ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುವುದು ಇವೆಲ್ಲವೂ ಫೋನ್ ಬಿಸಿಯಾಗಲು ಕಾರಣವಾಗಿರಬಹುದು. ಇದನ್ನು ತಪ್ಪಿಸಲು ದಿನದಲ್ಲಿ ಕೆಳಹೊತ್ತು ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿ. 

ಕಾರಿನಲ್ಲಿ ಫೋನ್ ಇಡುವ ಮುನ್ನ ಎಚ್ಚರ: 
ಸಾಮಾನ್ಯವಾಗಿ ಕಾರಿನಲ್ಲಿ ಪ್ರಯಾಣಿಸುವಾಗ, ಕಾರ್ ಡ್ರೈವ್ ಮಾಡುವಾಗ ಮಾತ್ರವಲ್ಲ, ಕೆಲವೊಮ್ಮೆ ಕಾರಿನಲ್ಲಿಯೇ ಫೋನ್ ಬಿಟ್ಟು ಹೋಗುತ್ತೇವೆ. ಆದರೆ, ನಿಸ್ಸಂಶಯವಾಗಿ, ಇದು ನಿಮ್ಮ ಫೋನ್‌ಗೆ ಉತ್ತಮ ಸ್ಥಳವಲ್ಲ. ಒಂದೆಡೆ ಕಾರಿನ ಶಾಖ, ಇನ್ನೊಂದೆಡೆ ಸೂರ್ಯನ ಶಾಖದಲ್ಲಿ ಫೋನ್ ಇದ್ದಾಗ ಅದು ಓವರ್ ಹೀಟ್ ಆಗಿ ಸ್ಫೋಟಗೊಳ್ಳಬಹುದು. ಇದನ್ನು ತಪ್ಪಿಸಲು, ಯಾವುದೇ ಕಾರಣಕ್ಕೂ ನಿಮ್ಮ ಫೋನ್ ಅನ್ನು ಕಾರಿನಲ್ಲಿ ಇಡಬೇಡಿ. 

ಚಾರ್ಜ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: 
ಕೆಲವರು ಫೋನ್ ಚಾರ್ಜ್(Phone Charging) ಹಾಕಿ ಅದನ್ನು ದಿಂಬು, ಹೊದಿಕೆ ಅಥವಾ ಇನ್ನಾವುದಾದರೂ ವಸ್ತುಗಳನ್ನು  ಇಡುತ್ತಾರೆ. ಆದರೆ, ಇದು ಫೋನ್ ಚಾರ್ಜಿಂಗ್‌ನಿಂದ ಉಂಟಾಗುವ ಶಾಖವನ್ನು ಹೆಚ್ಚಿಸಬಹುದು. ಹಾಗಾಗಿ ಈ ಅಭ್ಯಾಸವನ್ನು ತಪ್ಪಿಸಿ, ಯಾವುದಾದರೂ ತಂಪಾದ, ಗಟ್ಟಿಯಾದ ಮೇಲ್ಮೈ ಮೇಲೆ ಫೋನ್ ಇಟ್ಟು ಚಾರ್ಜಿಂಗ್ ಹಾಕಿ. 

Source : https://zeenews.india.com/kannada/technology/does-your-smartphone-overheating-in-summer-here-are-tips-to-avoid-the-risk-204381

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *