Ram Temple without Hanuman: ಹನುಮಂತನಿಲ್ಲದ ರಾಮ ದೇವಾಲಯ ಎಲ್ಲಿದೆ? ಏಕೆ ಗೊತ್ತಾ?

ಶ್ರೀ ರಾಮನು ಇಡೀ ಪ್ರಪಂಚದ ದಾರ್ಶನಿಕ. ಕುಟುಂಬ, ಆಡಳಿತ, ಜೀವನ ವಿಧಾನ ಮುಂತಾದ ಅನೇಕ ಗುಣಗಳಿಗೆ ಅವನು ಆದರ್ಶಪ್ರಾಯನಾಗಿದ್ದಾನೆ. ಇನ್ನು ಎಲ್ಲಾ ದೇವಸ್ಥಾನಗಳಲ್ಲಿಯೂ ಶ್ರೀ ರಾಮನ ಜೊತೆಗೆ ಹುನುಮಂತನು ಇರುತ್ತಾನೆ ಆದರೆ ಈ ಎರಡು ದೇವಾಲಯಗಳು ಮಾತ್ರ ಇದರಿಂದ ಭಿನ್ನವಾಗಿದೆ. ಒಂದು ತೆಲಂಗಾಣದ ಭದ್ರಾದ್ರಿ ಜಿಲ್ಲೆಯ ಭದ್ರಾಚಲಂ, ಮತ್ತೊಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಒಂಟಿಮಿಟ್ಟ. ಈ ಎರಡೂ ದೇವಾಲಯಗಳು ಪೌರಾಣಿಕ ಮಹತ್ವವನ್ನು ಹೊಂದಿವೆ. ಒಂದನ್ನು ರಾಮದಾಸು ತನಿಶಾ ಪ್ರಭುಗಳ ಆಳ್ವಿಕೆಯಲ್ಲಿ ನಿರ್ಮಿಸಿದರೆ, ಇನ್ನೊಂದನ್ನು ತ್ರೇತಾಯುಗದಲ್ಲಿ ಜಾಂಬವಂತನ ಕಾಲದಲ್ಲಿ ಪ್ರತಿಷ್ಠಾಪನೆಗೊಂಡಿದೆ ಎನ್ನಲಾಗುತ್ತದೆ. ಜೊತೆಗೆ ಒಂಟಿಮಿಟ್ಟ ದೇವಾಲಯವು ಅನೇಕ ವಿಶೇಷತೆಗಳನ್ನು ಹೊಂದಿದೆ. ಈ ರಾಮ ದೇವಾಲಯದಲ್ಲಿ, ನವಮಿ ದಿನದ ಬದಲು ಹುಣ್ಣಿಮೆಯ ದಿನದಂದು ಸೀತಾದೇವಿಯೊಂದಿಗೆ ಕೋದಂಡ ರಾಮ ಸ್ವಾಮಿಗೆ ಕಲ್ಯಾಣ ಮಹೋತ್ಸವ ನಡೆಸಲಾಗುತ್ತದೆ. ಪ್ರಸ್ತುತ, ಈ ದೇವಾಲಯವು ಟಿಟಿಡಿಯ ನಿಯಂತ್ರಣದಲ್ಲಿದೆ. ಪ್ರತಿ ವರ್ಷ, ಅವರು ವೈಖಾನಸ ಶಾಸ್ತ್ರದ ಪ್ರಕಾರ ಎಲ್ಲಾ ಕೈಂಕರ್ಯಗಳನ್ನು ಮಾಡುತ್ತಾರೆ.

ಹನುಮಂತನಿಲ್ಲದ ರಾಮ ಮಂದಿರ:

ಕಡಪ ಜಿಲ್ಲೆಯು ಒಂಟಿಮಿಟ್ಟದಲ್ಲಿರುವ ಕೋದಂಡರಾಮ ದೇವಾಲಯದಲ್ಲಿ ಹನುಮಂತ ಎಲ್ಲಿಯೂ ಕಾಣುವುದಿಲ್ಲ. ಇಲ್ಲಿ ಸೀತೆ, ರಾಮ ಮತ್ತು ಲಕ್ಷ್ಮಣರ ವಿಗ್ರಹಗಳನ್ನು ಒಂದೇ ಬಂಡೆಯಲ್ಲಿ ಕೆತ್ತಲಾಗಿದೆ. ಪುರಾಣದ ಪ್ರಕಾರ, ಮೃಕಂಡ ಮತ್ತು ಶೃಂಗಿ ಮಹರ್ಷಿಗಳು ಯುದ್ಧ ತರಬೇತಿಗಾಗಿ ರಾಮನನ್ನು ಪ್ರಾರ್ಥಿಸಿದಾಗ, ಭಗವಂತನು ಸೀತಾ ಮತ್ತು ಲಕ್ಷ್ಮಣರೊಂದಿಗೆ ಈ ಸ್ಥಳಕ್ಕೆ ಬಂದನು ಎಂಬ ನಂಬಿಕೆ ಇದೆ. ಬಳಿಕ ಇಲ್ಲಿ ವಿಗ್ರಹವನ್ನು ತ್ರೇತಾಯುಗದಲ್ಲಿ ಜಾಂಬವಂತನು ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ. ದಂತಕಥೆಯ ಪ್ರಕಾರ, ವನವಾಸದ ಸಮಯದಲ್ಲಿ ರಾಮನಿಗೆ ಹನುಮಂತನ ಪರಿಚಯವಿಲ್ಲದ ಕಾರಣ ಇಲ್ಲಿ ಆಂಜನೇಯನ ಉಲ್ಲೇಖವಿಲ್ಲ ಎನ್ನಲಾಗುತ್ತದೆ. ಭಗವಾನ್ ರಾಮ ಮತ್ತು ಹನುಮಂತನ ನಡುವಿನ ಸ್ನೇಹವನ್ನು ಕಿಷ್ಕಿಂದಾಕಾಂಡದಲ್ಲಿ ಹೇಳಲಾಗಿದೆ. ಅಂತೆಯೇ, ರಾಮ, ಸೀತಾ ದೇವಿ ಮತ್ತು ಲಕ್ಷ್ಮಣರು ಈ ಸ್ಥಳದಲ್ಲಿ ವಿಶ್ರಾಂತಿ ಪಡೆದರು ಎಂದು ಸ್ಥಳ ಪುರಾಣ ಹೇಳುತ್ತದೆ.

ಒಂಟಿಮಿಟ್ಟಾ ಏಕಶಿಲಾ ನಗರ:

ದಂತಕಥೆಯ ಪ್ರಕಾರ, ಒಂಟುಡು, ಮಿಟ್ಟಾಡು ಎಂಬ ಇಬ್ಬರು ಕಳ್ಳರು ಗ್ರಾಮದಲ್ಲಿ ಕಳ್ಳತನ ಮಾಡಿ ಈ ಬೆಟ್ಟದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾಗ ಭಗವಾನ್ ರಾಮನು ಕನಸಿನಲ್ಲಿ ಕಾಣಿಸಿಕೊಂಡನು. ಬಳಿಕ ಇವರಿಬ್ಬರು ದೇವಸ್ಥಾನವನ್ನು ಮತ್ತೆ ಪುನಃ ನಿರ್ಮಾಣ ಮಾಡಿದ ಕಾರಣ ಇಲ್ಲಿಗೆ ಒಂಟಿಮಿಟ್ಟ ಎಂಬ ಹೆಸರು ಬಂದಿದೆ. ಇಲ್ಲಿ ಸೀತಾ, ರಾಮ ಮತ್ತು ಲಕ್ಷ್ಮಣರ ವಿಗ್ರಹಗಳನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವುದರಿಂದ ಈ ಪ್ರದೇಶವನ್ನು ಏಕಶಿಲಾ ನಗರ ಎಂದೂ ಕರೆಯಲಾಗುತ್ತದೆ.

Source : https://tv9kannada.com/spiritual/ram-navami-2024-ever-seen-a-ram-temple-without-hanuman-spiritual-news-pgt-817532.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *