IND vs SL, 1st ODI, LIVE Streaming: ಗುವಾಹಟಿಯಲ್ಲಿ ಮೊದಲ ಏಕದಿನ ಪಂದ್ಯ; ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ಆರಂಭ?

india vs sri lanka 1st odi live streaming when and where to watch ind vs sl 10 january odi match in kannada

ಭಾರತ ಮತ್ತು ಶ್ರೀಲಂಕಾ (India Vs Sri Lanka) ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದ್ದು, ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಉಭಯ ದೇಶಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಹಲವು ಹಿರಿಯ ತಲೆಗಳು ಈ ಸರಣಿಯಿಂದ ಟೀಂ ಇಂಡಿಯಾಕ್ಕೆ (Team India) ಕಂಬ್ಯಾಕ್ ಮಾಡುತ್ತಿವೆ. ಅಲ್ಲದೆ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಈ ಸರಣಿಯಿಂದ ಏಕದಿನ ತಂಡಕ್ಕೆ ವಾಪಸ್ಸಾಗುತ್ತಿದ್ದಾರೆ. ಮೊದಲ ಏಕದಿನ ಪಂದ್ಯ ಗುವಾಹಟಿಯಲ್ಲಿ (Guwahati) ನಡೆಯಲಿದ್ದು, ಇದಕ್ಕಾಗಿ ಎರಡೂ ತಂಡಗಳು ಸಜ್ಜಾಗುತ್ತಿವೆ. ವಿಶ್ವಕಪ್‌ಗೆ ಸಿದ್ಧತೆಯ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಸರಣಿಯ ಬಹಳ ಮುಖ್ಯವಾಗಿದೆ.

ಟಿ20 ಸರಣಿಯಲ್ಲಿ ತಂಡದ ನಾಯಕತ್ವವಹಿಸಿದ್ದ ಹಾರ್ದಿಕ್ ಪಾಂಡ್ಯ ಬದಲಿಗೆ, ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲ್ಲಿದ್ದಾರೆ. ಹೊಸ ವರ್ಷದಲ್ಲಿ ನಾಯಕ ರೋಹಿತ್ ಶರ್ಮಾಗೆ ಇದು ಮೊದಲ ಸರಣಿ ಆಗಿದೆ. ಈ ಸರಣಿಗೆ ಪಾಂಡ್ಯ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದರೆ, ರೋಹಿತ್ ಶರ್ಮಾ ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಏಕದಿನ ಸರಣಿಯಿಂದ ತಂಡಕ್ಕೆ ಮರಳುತ್ತಿದ್ದಾರೆ. 2023ರಲ್ಲಿ ಇಬ್ಬರೂ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.

IND vs SL: 3 ವರ್ಷಗಳಲ್ಲಿ ಎರಡನೇ ಸಲ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಟೀಂ ಇಂಡಿಯಾದ ತ್ರಿಮೂರ್ತಿಗಳು..!

ಭಾರತ-ಶ್ರೀಲಂಕಾ ಇಬ್ಬರಿಗೂ ಗೆಲುವು ಬೇಕು

ಮತ್ತೊಂದೆಡೆ, ಶ್ರೀಲಂಕಾ ಬಗ್ಗೆ ಮಾತನಾಡುವುದಾದರೆ, ಲಂಕಾ ತಂಡದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಟಿ20 ಸರಣಿಯಂತೆ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ದಸುನ್ ಶನಕ ಮುನ್ನಡೆಸಲಿದ್ದಾರೆ. ಟಿ20 ಸರಣಿಯ ಸೋಲಿನ ನಂತರ ಶ್ರೀಲಂಕಾ ಏಕದಿನ ಸರಣಿಯನ್ನು ಗೆಲ್ಲಲು ಬಯಸಿದೆ. ಆದರೆ ರೋಹಿತ್ ನಾಯಕತ್ವದ ಏಕದಿನ ತಂಡವನ್ನು ಮಣಿಸುವುದು ಅವರಿಗೆ ಸುಲಭದ ದಾರಿಯಾಗಿಲ್ಲ.

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಯಾವಾಗ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಜನವರಿ 10 ರಂದು (ಮಂಗಳವಾರ) ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಯಾವಾಗ ಆರಂಭವಾಗುತ್ತದೆ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದ್ದು, ಪಂದ್ಯದ ಟಾಸ್ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ  ವಿವಿಧ ಭಾಷೆಗಳ ಚಾನಲ್‌ಗಳಲ್ಲಿ ವೀಕ್ಷಿಸಬಹುದು.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು  ಎಲ್ಲಿ ವೀಕ್ಷಿಸಬಹುದು?

ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/india-vs-sri-lanka-1st-odi-live-streaming-when-and-where-to-watch-ind-vs-sl-10-january-odi-match-in-kannada-psr-au14-497918.html

Leave a Reply

Your email address will not be published. Required fields are marked *