Horoscope 20 April: ರಾಶಿ ಭವಿಷ್ಯ; ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾ ಫಲ್ಗುಣೀ, ಯೋಗ: ಧ್ರುವ, ಕರಣ: ಬಾವಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:24 ರಿಂದ 10:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 03:39 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:17 ರಿಂದ 07:51ರ ವರೆಗೆ.

ಮೇಷ ರಾಶಿ: ನಿಂದಿಸಿ ನಿಮ್ಮ ಶಕ್ತಿಯನ್ನು ಕಡಿಮೆ ಮಾಡಲು ಬಯಸಬಹುದು. ಹೊಂದಾಣಿಕೆಯಿಂದ‌ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಸಹೋದರರ ಜೊತೆ ಆರ್ಥಿಕ ಸ್ಥಿತಿಯನ್ನು ಹಂಚಿಕೊಳ್ಳಿ. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ನೀವು ಇಂದು ಮಕ್ಕಳಿಗಾಗಿ ಖರ್ಚು ಮಾಡುವುದು ಅಗತ್ಯವೂ ಅನಿವಾರ್ಯವೂ ಆದೀತು. ವಿರೋಧಿಗಳ ಮಧ್ಯದಲ್ಲಿ ನೀವು ಗೆಲ್ಲುವ ತವಕವು ಇರುವುದು. ಆದಾಯದ ಕಡೆಗೆ ವಿಶೇಷಗಮನವು ಇರಲಿದೆ. ನಿಮ್ಮಲ್ಲಿರುವ ಒಳ್ಳೆಯದನ್ನು ನಿಜವಾಗಿಯೂ ಪ್ರಶಂಸಿಸಲು ನಿಮ್ಮಿಬ್ಬರಿಗೂ ಸ್ವಲ್ಪ ಅಂತರದ ಅಗತ್ಯವಿದೆ. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಬೇಕಾಗುವುದು. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಇತರರ ಧಾರ್ಮಿಕ ನಂಬಿಕೆಯನ್ನು ನೀವು ಘಾಸಿಮಾಡುವಿರಿ.

ವೃಷಭ ರಾಶಿ: ವಾಸ್ತವದಲ್ಲಿ ಬದುಕುವುದು ಮುಖ್ಯ. ಯಾವುದಕ್ಕೂ ಇಂತಹ ಸನ್ನಿವೇಶ ಎದುರಾದಾಗ ಮೊದಲು ಯೋಚಿಸಿ. ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಕುತೂಹಲದ ನಿಮ್ಮ ಸ್ವಭಾವವು ಇಂದು ಜಗಜ್ಜಾಹಿರಾಗಲಿದೆ. ತಂದೆಯ ಬಗ್ಗೆ ಗೌರವವು ಬರುವುದು. ನಿಮ್ಮ ನಂಬಿಕೆ ಇಂದು ಫಲವನ್ನು ಕೊಡುತ್ತದೆ. ಅನಂತರ ಅದರಿಂದ ಹೊರಬರುವುದು ಅಸಾಧ್ಯ. ಖರ್ಚಿನಿಂದಾಗಿ ಬೇಸರವು ಅಧಿಕವಾಗಬಹುದು. ನೀವು ನೋಡುವ ದೃಷ್ಟಿಯಿಂದ ಎಲ್ಲವೂ ಹಾಗೆ ಕಾಣಿಸುವುದು. ಮನಸ್ಸಿನ ಬಾರವು ನಿಮ್ಮ ಕೆಲಸವನ್ನು ಸ್ಥಗಿತ ಮಾಡೀತು. ಸಿಟ್ಟಿನಿಂದ ಎಲ್ಲವೂ ಬದಲಾದೀತು. ವಾಸ್ತವವನ್ನು ಅರಿಯುವ ಸ್ಥಿತಿಯನ್ನು ಕಳೆದುಕೊಳ್ಳುವಿರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು.

ಮಿಥುನ ರಾಶಿ: ವಿದ್ಯಾರ್ಥಿಗಳು ಹೊಸ ಕಲಿಕೆಗೆ ತೆರೆದುಕೊಳ್ಳುವ ಮೊದಲು ಸಾಧಕ ಬಾಧಕಗಳ ಬಗ್ಗೆ ಗಮನವಿರಲಿ. ಬಲ್ಲವರಾದ ತಾವು ಸದಾ ಪ್ರಯತ್ನಶೀಲರು. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ‌. ಇದರ ಜೊತೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ಇಂದು ನಿಮಗೆ ಹಿರಿಯರ ಉಪದೇಶವು ಅಧಿಕವಾಗಿ ಇರುವುದು. ವಿವಾದವಾಗುವ ವಿಚಾರದಲ್ಲಿ ನೀವು ದೂರವಿರುವಿರಿ. ಉದ್ಯೋಗಾವಕಾಶಗಳನ್ನು ಬಿಡುವಿರಿ. ಇನ್ನೊಬ್ಬರ ಬಗ್ಗೆ ನಿಮಗೆ ಅನುಕಂಪ ಹೆಚ್ಚಾದೀತು. ನಿಮ್ಮ ಏಕಾಗ್ರತೆಗೆ ಭಂಗಬರಬಹುದು. ಜನರ ಜೊತೆ ಮಾತನಾಡುವಾಗ ನಿಮ್ಮ ಮಾತುಗಳು ಸ್ಪಷ್ಟವಾಗಿ ಇರಲಿ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.

ಕರ್ಕ ರಾಶಿ: ಇಂದು ನೀವು ಆತುರದಲ್ಲಿ ಇರುವಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳನ್ನು ಯಾರಾದರೂ ಆಡುವುದಹ ಕೇಳಿಬರಬಹುದು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಸಮಯ ಸುಮ್ಮನೇ ವ್ಯರ್ಥವಾಗುತ್ತಿದೆ. ನಿಮ್ಮ ಕುಟುಂಬದ ಆಲೋಚನೆಯು ಅಧಿಕವಾಗಿ ಇರುವುದು. ಪ್ರಯತ್ನಿಸಿದ ಕಾರ್ಯಗಳಿಗೆ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಮಹಿಳೆಯರ ಸಂಘವು ಹೆಚ್ಚಾಗಬಹುದು. ವಿನಾಕಾರಣ ಮಿತ್ರರನ್ನು ದೂರ ಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ. ವಕೀಲ ವೃತ್ತಿಯವರಿಗೆ ಸ್ವಲ್ಪ ಸಮಾಧಾನ ಇರುವುದು.

ಸಿಂಹ ರಾಶಿ: ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ‌ ನಿಮಗೆ ನಿಯಂತ್ರಣ ಸಾಲದಾಗುವುದು. ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹುಂಬುತನ ಬೇಡ. ಅಮೂಲ್ಯವಾದುದನ್ನು ಕಳೆದುಕೊಳ್ಳಬೇಕಾಗಬಹುದು. ಪ್ರವಾಹದ ದಿಕ್ಕಿನಲ್ಲೇ ಹೋದರೆ ದಡಸೇರಲು ಏನಾದರೂ ಆಧಾರ ಸಿಕ್ಕೀತು. ಸಿಕ್ಕುವ ಅಲ್ಪವೂ ನಷ್ಟವಾದೀತು. ಜೀವನದ ತೊಂದರೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ನಿಮ್ಮವರು ನಿಮ್ಮಿಂದ ಏನನ್ನಾದರೂ ಬಯಸುವರು. ಪ್ರಭಾವಿ ವ್ಯಕ್ತಿಗಳು ಬಂಧುಗಳಾಗಿದ್ದು ಅವರಿಂದ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಸ್ಥಿರಾಸ್ತಿ ಮಾರಾಟದ ಬಗ್ಗೆ ಪೂರ್ಣವಾಗಿ ನಿಮಗೆ ಬೆಂಬಲ ಸಿಗದೇ ಹೋಗಬಹುದು. ಭೂಮಿಯ ವ್ಯವಹಾರದಲ್ಲಿ ಚುರುಕುತನ ಇರುವುದು. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ.

ಕನ್ಯಾ ರಾಶಿ: ನಿಮ್ಮ ಜೊತೆಗಿನ‌ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಅದನ್ನು ಅಷ್ಟಕ್ಕೇ ನಿಲ್ಲಿಸುವ ಜಾಣ್ಮೆ ನಿಮ್ಮದು. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡಿಸುವಂತೆ ಪ್ರೇರಿಸಿತ್ತು. ಆ ಹಣವನ್ನು ಅನಾರೋಗ್ಯದಿಂದ ಗುಣವಾಗಲು ಬಳಸಬಹುದಾಗಿದೆ. ಯೋಜನಾ ಬದ್ಧಕಾರ್ಯಗಳನ್ನು ಮಾಡಿ. ಪ್ರಯೋಜನವು ಸರಿಯಾದ ಕಾಲಕ್ಕೆ ಸಿಗುತ್ತದೆ. ತೀರ್ಥಯಾತ್ರೆಗೆ ಹೋಗಲು ತಯಾರಾಗಿರಿ. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು. ನಿಮಗೆ ದ್ವಂದ್ವಗಳು ಒಂದು ಸರಿಯಾದ ನಿರ್ಧಾರಕ್ಕೆ ಬರಲು ಅನುಕೂಲ ಮಾಡಿಕೊಡುವುದಿಲ್ಲ. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಮಾರ್ಗವನ್ನು ಹುಡುಕುವಿರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು. ಅಪಹಾಸ್ಯಕ್ಕೆ ಸಿಲುಕುವಿರಿ.

ತುಲಾ ರಾಶಿ: ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ಉಭಯಸಂಕಟದಲ್ಲಿ ನೋಯಬೇಕಾಗಬಹುದು. ವೈವಾಹಿಕ ಜೀವನವು ಉಸಿರುಗಟ್ಟಿಸಿದಂತೆನಿಸಬಹುದು. ಹಳೆಯ ಘಟನೆಯನ್ನು ನೆನೆದು ಕೊರಗಬೇಡಿ. ಹರುಷಕ್ಕೆ ಹತ್ತರು ದಾರಿಗಳಿವೆ. ನಿಮ್ಮ ಇಂದಿನ ಉದ್ಯಮಕ್ಕೆ ಕೆಲವು ಅನಗತ್ಯ ಸಲಹೆಗಳು ಬರಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡುವ ಸನ್ನಿವೇಶವು ಬರಬಹುದು. ವಾಹನ ಚಾಲನೆಯಲ್ಲಿ ಎಚ್ಚರ ತಪ್ಪಬಹುದು. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು. ಇದು ನಿಮಗೆ ಸಾಧನೆಗೆ ಪ್ರೇರಣೆಯೂ ಆಗಬಹುದು. ಅನಗತ್ಯ ವಿಚಾರಗಳನ್ನು ನಿಮ್ಮಿಂದ ದೂರವಿರಿಸಿ.

ವೃಶ್ಚಿಕ ರಾಶಿ: ಭವಿಷ್ಯದ ಬಗ್ಗೆ, ಮಕ್ಕಳ ಬಗ್ಗೆ ಯೋಚನೆ ಅಧಿಕವಿರುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಸಂಬಂಧಿಕರ ಹಾಗೂ ಸ್ನೇಹಿತರಿಂದ ಕೂಡಿಕೊಂಡು ಮನಬಿಚ್ಚಿ ಹರಟೆ ಹೊಡೆದು ಹೋಗುತ್ತೀರಿ. ಯಂತ್ರೋಪಕರಣಗಳ ಬಳಕೆ ಅಧಿಕವಾಗಲಿದೆ. ಇಂದು ನೀವು ಖರೀದಿಸುವ ವಸ್ತುವಿಗೆ ಹೆಚ್ಚು ಹಣವನ್ನು ಕೊಟ್ಟು ಸಂಪತ್ತನ್ನು ಹಾಳುಮಾಡಿಕೊಳ್ಳುವಿರಿ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸ್ವೀಕರಿಸಿ. ಹಿನ್ನಡೆಯಾದ ಕಾರ್ಯಕ್ಕೆ ಬೇಸರ ಬೇಡ. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಮೂರ್ಖರಂತೆ ವರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಎಷ್ಟೇ ಸೌಕರ್ಯವಿದ್ದರೂ ಇನ್ನಷ್ಟು ಬೇಕೆನಿಸಬಹುದು. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು.

ಧನು ರಾಶಿ; ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಹೇಳಿಕೊಳ್ಳುವಿರಿ. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಸ್ನೇಹಿತನಿಗೆ ಧನಸಹಾಯ ಅಥವಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವಿರಿ. ಬೆಳಗಿನಿಂದ ಸಂಜೆಯ ತನಕ ಉಲ್ಲಾಸ, ಉತ್ಸಾಹ, ಲವಲವಿಕೆ ನಿಮ್ಮದೇ ಆಗಿರುತ್ತದೆ. ನಿಮ್ಮ ಇಂದಿನ ಪ್ರಯತ್ನವು ನೂರಕ್ಕೆ ನೂರರಷ್ಟು ಇದ್ದರೂ ಫಲವು ಪೂರ್ಣವಾಗಿ ಸಿಗದಿರುವುದು ನಿಮಗೆ ಚಿಂತೆಯಾಗಬಹುದು. ವ್ಯವಹಾರದಲ್ಲಿ ನಿಮಗೆ ವಿಶ್ವಾಸವು ಸಾಲದು. ಯಾರ ಬಳಿಯೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ನಿಮ್ಮ ಎಲ್ಲ ಶ್ರಮದಾಯಕ ಯೋಜನೆ ಮತ್ತು ಸಂಘಟನೆಯು ಅಂತಿಮವಾಗಿ ಫಲವನ್ನು ನೀಡಲಿದೆ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಿಮ್ಮ ಬಹಳ ದಿನದ ಕೂಡಿಟ್ಟ ಹಣವು ಕ್ಷಣಾರ್ಧದಲ್ಲಿ ಖಾಲಿಯಾಗಲಿದ್ದು ನಿಮಗೆ ಬೇಸರ ತರಿಸೀತು.

ಮಕರ ರಾಶಿ: ಇಂದು ಕುಟುಂಬದ ಜೊತೆ ದಿನದ ಹೆಚ್ಚು ಕಾಲವನ್ನು ಕಳೆಯಲು ಪ್ರಯತ್ನಿಸಿ. ರೂಪ ಹಾಗೂ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ಪರಿಸ್ಥಿತಿಗಳು ಹೇಗೂ ಬರಲಿ, ಮನಸ್ಸು ಮತ್ತು ಬುದ್ಧಿ ದೃಢವಾಗಿರಲಿ. ಸಭೆ, ಸಮಾರಂಭಗಳಿಗೆ ಭೇಟಿ ನೀಡಿ, ಮನಸ್ಸನ್ನು ನೆಮ್ಮದಿಯಾಗಿ ಇರುವುದು. ಹಿಂದೆ ಕೂಡಿಟ್ಟ ಹಣವು ಕೈ ಸೇರುವ ಸುದಿನ. ಇಂದು ನೀವಾಡುವ ಮಾತಿನಿಂದ ಕಲಹವಾಗಬಹುದು. ಅನರ್ಥಕ್ಕೆ ಅವಕಾಶ ಮಾಡಿಕೊಡದೇ ಸರಿಯಾಗಿರಿ. ಅಧಿಕ ಹಣವನ್ನು ನೀವು ಕೊಡಬೇಕಾಗಬಹುದು. ಕಾರ್ಯವಿಧಾನದ ಬದಲಾವಣೆಯಿಂದ ನಿಮಗೆ ಸಂತೋಷವಾಗಲಿದೆ. ಆಲಸ್ಯದ ಮನೋಭಾವವನ್ನು ನೀವು ಬಿಡಬೇಕಾದೀತು. ಉದ್ವೋಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳುವಿರಿ. ಗೃಹನಿರ್ಮಾಣವು ನಿಮಗೆ ಅನಿವಾರ್ಯವಾದೀತು.

ಕುಂಭ ರಾಶಿ: ಯಾರಿಗಾದರೂ ಸಾಲ ನೀಡುವಾಗ ಪೂರ್ವಾಪರ ಆಲೋಚನೆ ಇರಲಿ. ಸಾಲವು ಮರಳಿ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ಕಾರ್ಯದ ಒತ್ತಡದಿಂದ ಕಛೇರಿಯಲ್ಲಿ ಹೆಚ್ಚು ಕಾಲ ಇರಬೇಕಾಗುಬುದು. ಇದೇ ಕಾರಣಕ್ಕೆ ಮನೆಯಲ್ಲಿ ಉದ್ವಿಗ್ನತೆಯೂ ಇರುವುದು. ನಿಮ್ಮ ಆರ್ಥಿಕ ಬಿಕ್ಕಟ್ಟು ಸ್ನೇಹಿತರ ಸಹಕಾರದಿಂದ ಸರಿಯಾಗುವುದು. ನಿಮ್ಮ ನಂಬಿಕೆಗೆ ದ್ರೋಹವುಂಟಾದೀತು. ನೀವು ತೆಗೆದುಕೊಳ್ಳುವ ನಿರ್ಧಾರವು ತಪ್ಪಾದೀತು ಎಂಬ ಆತಂಕವು ಇರಲಿದೆ. ರೋಗಬಾಧೆಯಿಂದ ನೀವು ಖಿನ್ನರಾಗುವಿರಿ. ಯಾವ ವಿಚಾರಕ್ಕೂ ಗೊಂದಲವಾಗುವಂತೆ ಇರುವುದು ಬೇಡ. ಇನ್ನೊಬ್ಬರ ನಿರ್ಧಾರಗಳನ್ನು ನಿಯಂತ್ರಿಸುವ ಮೂಲಕ ನೀವು ಎಂದಿಗೂ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುವುದಿಲ್ಲ. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು.

ಮೀನ ರಾಶಿ: ಇಂದು ಮನಸ್ಸು ತಾಳ್ಮೆಯನ್ನು ಬಿಡದಿರಲಿ. ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ಉಪಕಾರಕ್ಕೆ ಸತ್ಫಲವನ್ನು ಪಡಯಬಹುದಾಗಿದೆ. ನಿಮ್ಮ ಒಡನಾಟ ದುಃಖದಲ್ಲಿರುವವರಿಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ವ್ಯಕ್ತಿತ್ವವು ಇತರರಿಗೆ ಇಷ್ಟವಾಗುವುದು. ಇಂದು ನಿಮ್ಮ ವ್ಯಾಪಾರದಲ್ಲಿ ಧನ ಲಾಭವು ಆಗಲಿದ್ದು ಅದು ನಿಮ್ಮ ಮೇಲೆ‌ ಸತ್ಪರಿಣಾಮವನ್ನು ಬೀರಬಹುದು. ಅನಗತ್ಯ ವಿಚಾರಗಳ ಬಗ್ಗೆ ಆಲೋಚನೆ, ಆಸಕ್ತಿಯು ಹೆಚ್ಚಾಗುವುದು. ದಾಂಪತ್ಯದಲ್ಲಿ ಪ್ರೀತಿಯು ಹೆಚ್ಚಾಗಬಹುದು. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು.

Source : https://tv9kannada.com/horoscope/daily-horoscop-aries-to-pisces-april-20th-spiritual-in-kannada-ggs-818775.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *