IPL 2024, PBKS VS GT: ಪಂಜಾಬ್​ ವಿರುದ್ಧ ಗೆದ್ದ ಗುಜರಾತ್​, ಸ್ಯಾಮ್​ ಪಡೆಗೆ ಸತತ 4ನೇ ಸೋಲು.

IPL 2024, PBKS VS GT: ಗುಜರಾತ್​ ಟೈಟನ್ಸ್ ತಂಡವು 19.1 ಓವರ್​ಗೆ 7 ವಿಕೆಟ್ ನಷ್ಟಕ್ಕೆ 146 ರನ್​ ಗಳಿಸುವ ಮೂಲಕ ಅಂತಿಮವಾಗಿ 3 ವಿಕೆಟ್​​ಗಳ ಗೆಲುವು ದಾಖಲಿಸಿತು.  ಈ ಮೂಲಕ ಪಂಜಾಬ್​ ತಂಡವು ಸತತ 4ನೇ ಸೋಲನ್ನು ಅನುಭವಿಸಿತು.

ಐಪಿಎಲ್ 2024ರ 37ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ (PBKS vs GT) ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪಂಜಾಬ್ ತಂಡವನ್ನು ಆಲೌಟ್ ಮಾಡುವ ಮೂಲಕ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿತು. ಹೀಗಾಗಿ ಗುಜರಾತ್ ಗೆಲುವಿಗೆ 143 ರನ್ ಗಳ ಸವಾಲು ನೀಡಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್​ ಕಿಂಗ್ಸ್​ ನಾಯಕ ಮೊದಲು ಬ್ಯಾಟಿಂಗ್​ ಮಾಡಿತು. ಆದರೆ ಪಂಜಾಬ್​ ಪರ ಯಾರೋಬ್ಬರೂ ಉತ್ತಮವಾಗಿ ಆಡದ ಕಾಋನ ಸಂಪೂರ್ಣ ತಂಡ 20 ಓವರ್​ಗೆ 142 ರನ್​ ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್​ ಟೈಟನ್ಸ್ ತಂಡವು 19.1 ಓವರ್​ಗೆ 7 ವಿಕೆಟ್ ನಷ್ಟಕ್ಕೆ 146 ರನ್​ ಗಳಿಸುವ ಮೂಲಕ ಅಂತಿಮವಾಗಿ 3 ವಿಕೆಟ್​​ಗಳ ಗೆಲುವು ದಾಖಲಿಸಿತು.  ಈ ಮೂಲಕ ಪಂಜಾಬ್​ ತಂಡವು ಸತತ 4ನೇ ಸೋಲನ್ನು ಅನುಭವಿಸಿತು.

ಕಷ್ಟಪಟ್ಟು ಗೆಲುವಿನ ದಡ ಸೇರಿದ ಗುಜರಾತ್​:

ಇನ್ನು, 143 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್‌ಗೆ ಆರಂಭಿಕ ಜೋಡಿ ವೃದ್ಧಿಮಾನ್ ಸಹಾ ಮತ್ತು ಶುಭ್‌ಮನ್ ಗಿಲ್ ಅರ್ಧಶತಕದ ಜೊತೆಯಾಟವಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 66 ರನ್‌ಗಳ ಜೊತೆಯಾಟ ನೀಡಿದರು. ಸಹಾ 13 ರನ್ ಗಳಿಸಿ ಔಟಾದರೆ ನಾಯಕ ಗಿಲ್ 29 ಎಸೆತಗಳಲ್ಲಿ 35 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇತ್ತ 31 ರನ್ ಗಳಿಸಿ ಸಾಯಿ ಸುದರ್ಶನ್ ಅವರನ್ನು ಸ್ಯಾಮ್ ಕರ್ರಾನ್ ಕ್ಲೀನ್ ಬೌಲ್ಡ್ ಮಾಡಿದರು. 13 ರನ್‌ಗಳಿಸಿದ್ದ ಅಜ್ಮತುಲ್ಲಾ ಉಮರ್ಜಾಯ್ ಅವರನ್ನು ಹರ್ಷಲ್ ಪಟೇಲ್ ಪೆವಿಲಿಯನ್‌ಗೆ ಕಳುಹಿಸಿದರು. ಒಟ್ಟಾರೆಯಾಗಿ 143 ರನ್​ ಗಳ ಸುಲಭ ಗುರಿಯನ್ನು ಗುಜರಾತ್​ ತಂಡ ಕಷ್ಟಪಟ್ಟು ತಲುಪಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ 8ನೇ ಸ್ಥಾನದಿಂದ 6ನೇ ಸ್ಥಾನಕ್ಕೇರಿದೆ. ರಾಹುಲ್ ತೆವಾಟಿಯಾ ಈ ಪಂದ್ಯದಲ್ಲಿ ಒನ್ ಮ್ಯಾನ್ ಆರ್ಮಿಯಂತೆ ಗಟ್ಟಿಯಾಗಿ ನಿಂತು ಆಡಿದರು. ಅವರು ಏಕಾಂಗಿಯಾಗಿ ಪಂದ್ಯದ ಗತಿಯನ್ನು ತಿರುಗಿಸಿದರು. ತೆವಾಟಿಯಾ 18 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು.

ಇತ್ತ, ಈ ಋತುವಿನಲ್ಲಿ ಪವರ್‌ಪ್ಲೇಯಲ್ಲಿ ಅತ್ಯಂತ ಕಳಪೆ ಆಟವಾಡುತ್ತಿದ್ದ ಪಂಜಾಬ್ ಕಿಂಗ್ಸ್ ನಿಧಾನವಾಗಿ ಆರಂಭಗೊಂಡು 5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು. ಇದಾದ ನಂತರ ಸಾಯಿ ಕಿಶೋರ್, ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರು ಪಂಜಾಬ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಮುಕ್ತವಾಗಿ ಆಡಲು ಅವಕಾಶ ನೀಡಲಿಲ್ಲ. ಸಾಯಿ ಕಿಶೋರ್ 33 ರನ್‌ಗಳಿಗೆ 4 ವಿಕೆಟ್ ಪಡೆದರೆ, ರಶೀದ್ 15 ರನ್‌ಗಳಿಗೆ ಒಂದು ವಿಕೆಟ್ ಮತ್ತು ಅಹ್ಮದ್ 20 ರನ್‌ಗಳಿಗೆ ಎರಡು ವಿಕೆಟ್ ಪಡೆದರು.

ಬ್ಯಾಟಿಂಗ್​ ನಲ್ಲಿ ಎಡವಿದ ಪಂಜಾಬ್​:

ಭಾನುವಾರ ಚಂಡೀಗಢದ ಮಹಾರಾಜ ಯಧುವೀರ ಸಿಂಗ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರೆ, ಗುಜರಾತ್ ಮೊದಲು ಬೌಲಿಂಗ್ ಮಾಡುವ ಸವಾಲನ್ನು ಎದುರಿಸಿತು. ಪಂಜಾಬ್ ಕಿಂಗ್ಸ್ ಪರ ಪ್ರಭಾಸಿಮ್ರಾನ್ ಸಿಂಗ್ 35 ರನ್, ಸ್ಯಾಮ್ ಕರಣ್ 20 ರನ್, ಜಿತೇಶ್ ಶರ್ಮಾ 13 ರನ್, ಹರ್ ಪ್ರೀತ್ ಸಿಂಗ್ 14 ರನ್, ಹರ್ ಪ್ರೀತ್ ಬ್ರಾರ್ 29 ರನ್ ಗಳಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಎರಡಂಕಿ ಗಳಿಸಲು ಸಾಧ್ಯವಾಗಲಿಲ್ಲ. ಉಳಿದಂತೆ ರಿಲ್ಲೆ ರುಸ್ಸೋ 9 ರನ್, ಲಿಯಂ ಲೀವಿಂಗ್​ಸ್ಟನ್​ 6 ರನ್, ಶಶಾಂಕ್​ ಸಿಂಗ್​ 8 ರನ್, ಅಶುತೋಷ್​ ಶರ್ಮಾ 3 ರನ್, ಹರ್ಷಲ್​ ಪಟೇಲ್​ 0 ರನ್ ಮತ್ತು ಕಗಿಸೋ ರಬಾಡಾ 1 ರನ್​ ಗಳಿಸಿದರು.

ಗುಜರಾತ್ ಟೈಟಾನ್ಸ್ ಬೌಲರ್ ಗಳು ಪಂಜಾಬ್ ಕಿಂಗ್ಸ್ ಬೆವರಿಳಿಸಿದರು. ಗುಜರಾತ್ ಪರ ಸಾಯಿ ಕಿಶೋರ್ 4 ವಿಕೆಟ್, ಮೋಹಿತ್ ಶರ್ಮಾ 2 ವಿಕೆಟ್, ನೂರ್ ಅಹ್ಮದ್ 2 ವಿಕೆಟ್ ಪಡೆದು ಮಿಂಚಿದರೆ ರಶೀದ್ ಖಾನ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಗುಜರಾತ್ ಟೈಟಾನ್ಸ್ ಗೆಲುವಿಗೆ 143 ರನ್ ಗಳ ಸವಾಲಿತ್ತು.

Source: https://kannada.news18.com/news/sports/ipl-2024-pbks-vs-gt-match-gujarat-titans-won-by-3-wickets-skb-1664553.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *