ಬೆಂಕಿ ಮುಖವೆಲ್ಲಾ ಆವರಿಸಿಕೊಂಡಿದ್ದು, ಸದ್ಯ ಪಕ್ಕದಲ್ಲಿದ್ದವರು ಬೆಂಕಿನಿಂದ ಯುವಕನನ್ನು ರಕ್ಷಿಸಿದ್ದಾರೆ. ಯುವಕ ಹರ್ಷಲ್ನ ಬಾಯಿ ಮತ್ತು ಗಲ್ಲದ ಮೇಲೆ ಸುಟ್ಟ ಗಾಯಗಳಾಗಿದ್ದು, ತಕ್ಷಣ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ಉತ್ತರಪ್ರದೇಶ: ಮದುವೆ ದಿಬ್ಬಣದ ಮೆರವಣಿಗೆಯಲ್ಲಿ ಬೆಂಕಿ ಉಗುಳುತ್ತಾ ಸಾಹಸ ಪ್ರದರ್ಶಿಸಿದ ಯುವಕನ ಮುಖ ತುಂಬೆಲ್ಲಾ ಬೆಂಕಿ ಹೊತ್ತಿಕೊಂಡಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್ ಸಂಭವಿಸಿದೆ. ಬೆಂಕಿ ಉಗುಳುತ್ತಾ ಸಾಹಸ ಪ್ರದರ್ಶಿಸುವ ವೇಳೆ ಯುವಕನ ಮುಖ ತುಂಬೆಲ್ಲಾ ಬೆಂಕಿ ಹೊತ್ತಿಕೊಂಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವಕನ ಅಂಗೈ, ಬಾಯಿ ಮತ್ತು ಗಲ್ಲದ ಮೇಲೆ ಸುಟ್ಟಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿಜ್ನೋರ್‌ನ ಶಿಶ್‌ಗ್ರಾನ್‌ನ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ..
ಶಾಹಪುರ್‌ನ ಹರ್ಷಲ್ ಚೌಧರಿ ಎಂದು ಗುರುತಿಸಲಾದ ಯುವಕ ತನ್ನ ಬಾಯಿಗೆ ಪೆಟ್ರೋಲ್ ತುಂಬಿಸಿಕೊಂಡು, ಬೆಂಕಿ ಹಚ್ಚಿ ಸಾಹಸ ಪ್ರದರ್ಶನ ಮಾಡಿದ ಯುವಕ ಎಂದು ತಿಳಿದುಬಂದಿದೆ. ಬೆಂಕಿ ಮುಖವೆಲ್ಲಾ ಆವರಿಸಿಕೊಂಡಿದ್ದು, ಸದ್ಯ ಪಕ್ಕದಲ್ಲಿದ್ದವರು ಬೆಂಕಿನಿಂದ ಯುವಕನನ್ನು ರಕ್ಷಿಸಿದ್ದಾರೆ. ಯುವಕ ಹರ್ಷಲ್ನ ಬಾಯಿ ಮತ್ತು ಗಲ್ಲದ ಮೇಲೆ ಸುಟ್ಟ ಗಾಯಗಳಾಗಿದ್ದು, ತಕ್ಷಣ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
@SachinGuptaUP ಎಂಬ ಟ್ವಿಟರ್ ಖಾತೆಯಲ್ಲಿ ಇಂದು (ಏ.23) ರಂದು ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 3 ಗಂಟೆಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1