Fuel Credit Card: ಏನಿದು ಇಂಧನ ಕ್ರೆಡಿಟ್ ಕಾರ್ಡ್, ಇದನ್ನು ಬಳಸುವುದು ಹೇಗೆ?

Fuel Credit Card: ಗ್ರಾಹಕರಿಗೆ ರಿವಾರ್ಡ್ಸ್, ಸೇವಿಂಗ್ಸ್ ನೀಡುವ ಹಲವಾರು ರೀತಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ ಇಂಧನ ಕ್ರೆಡಿಟ್ ಕಾರ್ಡ್ ಕೂಡ ಒಂದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಇಂಡಿಯನ್ ಆಯಿಲ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರರಾಗಿರುವ ಬ್ಯಾಂಕುಗಳಿಂದ ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಬಹುದು. ಇದನ್ನು ಹೇಗೆ ಪಡೆಯುವುದು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ…

  • ಗ್ರಾಹಕರಿಗೆ ರಿವಾರ್ಡ್ಸ್, ಸೇವಿಂಗ್ಸ್ ನೀಡುವ ಹಲವಾರು ರೀತಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ (Credit Cards) ಇಂಧನ ಕ್ರೆಡಿಟ್ ಕಾರ್ಡ್ ಕೂಡ ಒಂದು.
  • ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಇಂಡಿಯನ್ ಆಯಿಲ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರರಾಗಿರುವ ಬ್ಯಾಂಕುಗಳಿಂದ ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಬಹುದು.

Fuel Credit Card: ವೈಯಕ್ತಿಕ ವಾಹನಗಳನ್ನು ಬಳಸುವವರಿಗೆ ಪ್ರತಿ ನಿತ್ಯ ಓಡಾಡಲು ಇಂಧನದ ಅವಶ್ಯಕತೆ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರದಿಂದಾಗಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂಧನ ಬೆಲೆಗಳು ಕೂಡ ಗಗಣಕ್ಕೆರಿರುವುದರಿಂದ ತಿಂಗಳ ಕೊನೆಯಲ್ಲಿ ಬಜೆಟ್ (Budget) ಸಮಸ್ಯೆಯಿಂದ ಪೆಟ್ರೋಲ್ ತುಂಬುವುದು ಕೂಡ ಕ್ಲಿಷ್ಟಕರ ಪರಿಸ್ಥಿತಿ ಎಂದರೂ ತಪ್ಪಾಗಲಾರದು. ಆದರೆ, ನಿಮ್ಮ ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಇಂಧನ ಕ್ರೆಡಿಟ್ ಕಾರ್ಡ್‌ಗಳು ಪ್ರಯೋಜನಕಾರಿ ಆಗಿವೆ. 

ವಾಸ್ತವವಾಗಿ, ಇಂಧನ ಕ್ರೆಡಿಟ್ ಕಾರ್ಡ್‌ಗಳು (Fuel Credit Cards) ಡಿಸ್ಕೌಂಟ್‌ಗಳು, ಅತ್ಯಾಕರ್ಷಕ ರಿವಾರ್ಡ್ ಗಳು, ಮತ್ತು ಇಂಧನ ಸರ್ಚಾರ್ಜ್ ಮನ್ನಾಗಳಂತಹ ಹಲವು ಆಯ್ಕೆಗಳನ್ನು ಒಳಗೊಂಡಿವೆ. ಹಾಗಾಗಿಯೇ, ಇಂಧನ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು ಖಂಡಿತವಾಗಿಯೂ ಇಂಧನ ವೆಚ್ಚವನ್ನು ಕಡಿಮೆ ಮಾಡಬಹುದು. 

ಏನಿದು ಇಂಧನ ಕ್ರೆಡಿಟ್ ಕಾರ್ಡ್? 
ಗ್ರಾಹಕರಿಗೆ ರಿವಾರ್ಡ್ಸ್, ಸೇವಿಂಗ್ಸ್ ನೀಡುವ ಹಲವಾರು ರೀತಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ (Credit Cards) ಇಂಧನ ಕ್ರೆಡಿಟ್ ಕಾರ್ಡ್ ಕೂಡ ಒಂದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಇಂಡಿಯನ್ ಆಯಿಲ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರರಾಗಿರುವ ಬ್ಯಾಂಕುಗಳಿಂದ ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಬಹುದು.

ಇಂಧನ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ
ಮೊದಲೇ ತಿಳಿಸಿದಂತೆ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಬ್ಯಾಂಕ್‌ಗಳಿಂದ ಇಂಧನ ಕ್ರೆಡಿಡ್ ಕಾರ್ಡ್ ಅನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಅಥವಾ ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮಿಚ್ಚೆಯ ಕಾರ್ಡ್ ಆರಿಸಬೇಕು. 

ಅರ್ಹತಾ ಮಾನದಂಡ: 
ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ವಿಭಿನ್ನ ಸಾಲದಾತರು ವಿಭಿನ್ನ ಅರ್ಹತಾ ಮಾನದಂಡಗಳನ್ನು ಹೊಂದಿದ್ದಾರೆ. ಬ್ಯಾಂಕ್ ಅನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ. 

ಇಂಧನ ಕ್ರೆಡಿಟ್ ಕಾರ್ಡ್ ಹೇಗೆ ಪ್ರಯೋಜನಕಾರಿ?
ಇಂಧನ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ ಇಂಧನವನ್ನು ಹಾಕಿಸುವಾಗ ಪಾವತಿಸಲು ಅನುಕೂಲವಾಗುವುದು ಮಾತ್ರವಲ್ಲದೆ, ಇಂಧನ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ಇಂಧನ ವೆಚ್ಚವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಕೆಲವು ಇಂಧನ ಕ್ರೆಡಿಟ್ ಕಾರ್ಡ್‌ಗಳು ಪ್ರತಿ ಬಾರಿ ಇಂಧನವನ್ನು ಖರೀದಿಸಿದಾಗ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡಿದರೆ, ಇನ್ನೂ ಕೆಲವು ಕ್ರೆಡಿಟ್ ಕಾರ್ಡ್‌ಗಳಲ್ಲಿ ಪ್ರಯಾಣ ಬಹುಮಾನಗಳು, ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುತ್ತವೆ. 

ಈ ಕಾರ್ಡ್‌ಗಳು ಹೆಚ್ಚುವರಿ ಶುಲ್ಕ ಮನ್ನಾದಂತಹ ಕೊಡುಗೆಗಲನು ನೀಡುತ್ತವೆ. ಇದರೊಂದಿಗೆ ಪ್ರತಿಯೊಂದು ಇಂಧನ ಪಾವತಿಗಳಲ್ಲಿ ನೀವು 1% ರಿಂದ 2.5% ವರೆಗೆ ಉಳಿಸಬಹುದು. 

Source : https://zeenews.india.com/kannada/business/what-is-fuel-credit-card-know-its-benefits-206030

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *