ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿ ಎರಡು ವಾರಗಳ ಬಳಿಕ ಈಗ ಮತ್ತೆ ರಾಜ್ಯದಲ್ಲಿ ಎರಡನೇ ಪಿಯುಸಿ ಪರೀಕ್ಷೆ ಶುರುವಾಗಿದೆ ನಾಳೆಯಿಂದ (ಸೋಮುವಾರ) ಪಿಯುಸಿ ಪರೀಕ್ಷೆ – 2 ಶುರುವಾಗುತ್ತಿದ್ದು ಶಿಕ್ಷಣ ಇಲಾಖೆ ಕಂಪ್ಲೀಟ್ ಸಿದ್ಧತೆ ಶುರು ಮಾಡಿಕೊಂಡಿದೆ.

ಬೆಂಗಳೂರು, (ಏಪ್ರಿಲ್ 28): ಪ್ರತಿ ವರ್ಷ ಸರ್ಕಾರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೆ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಫೇಲ್ ಆಗಿ ಕಲಿಕೆ ಮುಂದುವರೆಸುತ್ತಿರಲಿಲ್ಲ. ಹೀಗಾಗಿ ಉನ್ನತ್ತ ಶಿಕ್ಷಣ ಪಡೆಯುತ್ತಿರಲಿಲ್ಲ. ಇದರಿಂದ ಈ ವರ್ಷ ಪಿಯುಸಿ(karnataka Second puc 2nd exam )ವಿದ್ಯಾರ್ಥಿಗಳಿಗೆ ಒಂದಲ್ಲ ಎರಡು ಬಂಪರ್ ಆಫರ್ ನೀಡಿದ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ PUC ಫಲಿತಾಂಶ ಹೆಚ್ಚಿಸಲು ಮೂರು ಪರೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ ಕಳೆದ ತಿಂಗಳಷ್ಟೇ ಪಿಯುಸಿ ಪರೀಕ್ಷೆ ನಡೆಸಿದ್ದು ಫಲಿತಾಂಶ ಕೂಡ ಪ್ರಕಟಿಸಿದೆ. ಫಲಿತಾಂಶ ಪ್ರಕಟಿಸಿ ಎರಡು ವಾರದ ಬಳಿಕ ಈಗ ಪಿಯುಸಿ ಪರೀಕ್ಷೆ – 2 ನಡೆಸಲು ಮುಂದಾಗಿದೆ
29-04-29 ರಿಂದ 16-05-2024 ರವರೆಗೆ ಪಿಯುಸಿ ಪರೀಕ್ಷೆ -2 ನಡೆಯಲಿದ್ದು, ದಾಖಲೆಯ ಪ್ರಮಾಣದಲ್ಲಿ ಪಿಯು ವಿದ್ಯಾರ್ಥಿಗಳ ನೊಂದಣಿ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಪಾಸ್ ಆಗಿದ್ರೂ ಕೂಡಾ ಹಳೆಯ ಫಲಿತಾಂಶ ಚಾಲೆಂಜ್ ಮಾಡಲು 32 ಸಾವಿರ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.
ಸೋಮುವಾರದಿಂದ ಶುರುವಾಗುವ ದ್ವಿತೀಯ ಪಿಯುಸಿ -2 ಪರೀಕ್ಷೆಗೆ ರಾಜ್ಯದಲ್ಲಿ ಒಟ್ಟು149300 ವಿದ್ಯಾರ್ಥಿಗಳು ನೊಂದಣಿಮಾಡಿಕೊಂಡಿದ್ದಾರೆ.. ಇದರಲ್ಲಿ 32 ಸಾವಿರ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತೀರ್ಣವಾಗಿದ್ರೂ ಫಲಿತಾಂಶ ಹೆಚ್ಚಿಸಲು ಮರು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಇನ್ನು ಪ್ರತಿಯೊಂದು ವಿಷಯದ ಪರೀಕ್ಷೆಯು ಮಧ್ಯಾಹ್ನ 2-15 ರಿಂದ ಸಂಜೆ 04-30 ಗಂಟೆವರೆಗೆ ನಡೆಯಲಿದೆ.
ಒಟ್ಟಿನಲ್ಲಿ ಈಗಾಗಲೆ ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಾಂಕ ಕೂಡಾ ನಿಗಧಿಯಾಗಿದ್ದು ಹಾಲ್ ಟಿಕೆಟ್ ಕೂಡಾ ಡೌನ್ ಲೋಡ್ ಮಾಡಲು ಇಲಾಖೆ ಅವಕಾಶ ನೀಡಿದ್ದು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಎರಡನೇ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿಗಳು ಈ ಅವಕಾಶ ಸರಿಯಾದ ಸದುಪಯೋಗಪಡಿಸಿಕೊಳ್ಳಬೇಕಿದೆ.
ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
- 29-04-2024- ಕನ್ನಡ, ಅರೇಬಿಕ್
- 30-04-2024-ಇತಿಹಾಸ / ಭೌತಶಾಸ್ತ್ರ
- 02-05-2024-ಇಂಗ್ಲಿಷ್
- 03-05-2024-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
- 04-05-2024-ಭೂಗೋಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲಗಣಿತ
- 09-05-2024-ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ
- 11-05-2024-ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
- 13-05-2024-ಅರ್ಥಶಾಸ್ತ್ರ
- 14-05-2024-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
- 15-05-2024-ಹಿಂದಿ
- 16-05-2024-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೆಬಿಕ್, ಫ್ರೆಂಚ್
- 16-05-2024-ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಬ್ಯೂಟಿ ಅಂಡ್ವೆಲ್‌ನೆಸ್ , ಆಟೋಮೊಬೈಲ್, ರೀಟೈಲ್
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1