Cricket: IPL 2024, CSK vs SRH: ಐಪಿಎಲ್ 2024 ರ ಎರಡನೇ ಪಂದ್ಯ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ಚೆನ್ನೈ ತಂಡ 3 ವಿಕೆಟ್‌ಗೆ 212 ರನ್ ಗಳಿಸಿತು. ಇದರಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ಹೆಚ್ಚಿನ ಕೊಡುಗೆ ನೀಡಿದರು.
ಐಪಿಎಲ್ 2024ರಲ್ಲಿ ಭಾನುವಾರ ಎರಡು ಪಂದ್ಯಗಳು ನಡೆದಿದ್ದು, ಎರಡರಲ್ಲೂ ಸ್ಫೋಟಕ ಬ್ಯಾಟಿಂಗ್ ಕಂಡುಬಂದಿದೆ. ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (CSK vs SRH) ನಡುವಿನ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದರು. ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬಳಿಕ ಗಾಯಕ್ವಾಡ್ ಅವರ ಭರ್ಜರಿ ಬ್ಯಾಟಿಂಗ್ ಮೂಲಕ ಚೆನ್ನೈ ತಂಡವು ನಿಗದಿತ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸುವ ಮೂಲಕ ಹೈದರಾಬಾದ್ಗೆ ಬೃಹತ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡವು 18.5 ಓವ ರ್ಗೆ 134 ರನ್ ಗಳಿಗೆ ಆಲೌಟ್ ಆಗುವ ಮೂಲಕ 78 ರನ್ ಗಳಿಂದ ಸೋಲನ್ನಪ್ಪಿದೆ.
ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಹೈದರಾಬಾದ್:
ಇನ್ನು, ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಒಬ್ಬರ ಹಿಂದೆ ಒಬ್ಬರಂತೆ ಪೆವೆಲಿಯನ್ ಪೆರೇಡ್ ನಡೆಸಿದರು. ಹೈದರಾಬಾದ್ ಪರ ಟ್ರಾವಿಸ್ ಹೆಡ್ 13 ರನ್, ಅಭಿಷೇಕ್ ಶರ್ಮಾ 15 ರನ್, ಅನ್ಮೋಲ್ಪ್ರೀತ್ ಸಿಂಗ್ ಶೂನ್ಯ, ಅಡೇನ್ ಮಾರ್ಕ್ರಮ್ 32 ರನ್, ನಿತೀಶ್ ಕುಮಾರ್ ರೆಡ್ಡಿ 15 ರನ್, ಹೆನ್ರಿಚ್ ಕ್ಲಾಸಿನ್ 20 ರನ್, ಅಬ್ದುಲ್ ಸಮದ್ 19 ರನ್ ಮತ್ತು ಪ್ಯಾಟ್ ಕಮಿನ್ಸ್ 5ರ ರನ್ ಸಿಡಿಸಿದರು. ಆದರೆ ಕಳೆದರೆಡು ಪಂದ್ಯದಿಂದ ಈ ವರ್ಷದ ಆರಂಭಿಕ ಹೈದರಾಬಾದ್ ತಂಡದ ಬ್ಯಾಟಿಂಗ್ ಕಂಡುಬರುತ್ತಿಲ್ಲ.
ಮತ್ತೆ ಅಬ್ಬರಿಸಿದ ಗಾಯಕ್ವಾಡ್:
ಐಪಿಎಲ್ 2024 ರ ಎರಡನೇ ಪಂದ್ಯ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ಚೆನ್ನೈ ತಂಡ 3 ವಿಕೆಟ್‌ಗೆ 212 ರನ್ ಗಳಿಸಿತು. ಇದರಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ಹೆಚ್ಚಿನ ಕೊಡುಗೆ ನೀಡಿದರು. ರಿತುರಾಜ್ 54 ಎಸೆತಗಳಲ್ಲಿ 98 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 10 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಸಿಎಸ್ ಕೆ ನಾಯಕ ರುತುರಾಜ್ ಗಾಯಕ್ವಾಡ್ 17 ಓವರ್ ಗಳಲ್ಲಿ 47 ಎಸೆತಗಳಲ್ಲಿ 90 ರನ್ ಗಳಿಸಿದ್ದರು. ಆ ವೇಳೆ ಶತಕ ಬಾರಿಸುತ್ತಾರೆ ಎಂದುಕೊಂಡಿದ್ದರು. ಆದರೆ 18ನೇ ಓವರ್ ನಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತು 19ನೇ ಓವರ್ ನಲ್ಲಿ ಜಯದೇವ್ ಉನದ್ಕತ್ ರಿತುರಾಜ್ ಗೆ ವೇಗವಾಗಿ ರನ್ ಗಳಿಸಲು ಅವಕಾಶ ನೀಡಲಿಲ್ಲ.
ಇದರ ಒತ್ತಡವು ರಿತುರಾಜ್ ಅವರ ಬ್ಯಾಟಿಂಗ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಅವರು 20ನೇ ಓವರ್‌ನಲ್ಲಿ ಲಾಂಗ್ ಆನ್‌ನಲ್ಲಿ ಸುಲಭ ಕ್ಯಾಚ್ ನೀಡಿ ವಿಕೆಟ್ ಒಪಙ್ಪಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕ ರುತುರಾಜ್ ಗಾಯಕ್ವಾಡ್ ಹೊರತಾಗಿ ಡೆರಿಲ್ ಮಿಚೆಲ್ ಮತ್ತು ಶಿವಂ ದುಬೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ನ್ಯೂಜಿಲೆಂಡ್ ಪರ ಡೆರಿಲ್ ಮಿಚೆಲ್ 32 ಎಸೆತಗಳಲ್ಲಿ 52 ರನ್ ಗಳಿಸಿದರು. ಶಿವಂ ದುಬೆ 20 ಎಸೆತಗಳಲ್ಲಿ 39 ರನ್ ಮತ್ತು ಎಂಎಸ್ ಧೋನಿ 2 ಎಸೆತಗಳಲ್ಲಿ 5 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ರುತುರಾಜ್:
ಇನ್ನು, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ರುತುರಾಜ್ ಗಾಯಕ್ವಾಡ ಇದೀಗ ವಿರಾಟ್‌ಗೆ ಸವಾಲು ಹಾಕಿದ್ದಾರೆ. ಹೌದು, ಈ ಇನ್ನಿಂಗ್ಸ್ ನಂತರ ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. 9 ಪಂದ್ಯಗಳಲ್ಲಿ 447 ರನ್ ಗಳಿಸಿದ್ದಾರೆ. 10 ಪಂದ್ಯಗಳಲ್ಲಿ 500 ರನ್ ಗಳಿಸಿರುವ ವಿರಾಟ್ ಕೊಹ್ಲಿ ಹೆಸರಿನಲ್ಲಿ ಆರೆಂಜ್ ಕ್ಯಾಪ್ ಇದೆ. ಸಾಯಿ ಸುದರ್ಶನ್ (418) ಹೆಚ್ಚು ರನ್ ಗಳಿಸಿದ ಈ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಬಳಿಕ ರುತುರಾಜ್ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1