ಬೆಂಗಳೂರು: ನಮ್ಮ ಮೆಟ್ರೋ (Namma Metro) ತನ್ನ ಪ್ರಯಾಣಿಕರಿಗೆ ಟಿಕೆಟ್ ಖರೀದಿಗೆ ಮತ್ತೊಂದು ಹೊಸ ವಿಧಾನವನ್ನು ಪರಿಚಯಿಸಿದೆ. ಸುಲಭವಾಗಿ ಕ್ಯೂಆರ್ ಟಿಕೆಟ್ (QR Ticket) ಮೆಷಿನ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ. ಸದ್ಯ 2 ಮೆಟ್ರೋ ನಿಲ್ದಾಣಗಳಲ್ಲಿ ಇದನ್ನ ಪರಿಚಯಿಸಲಾಗಿದೆ.
![](https://samagrasuddi.co.in/wp-content/uploads/2024/04/image-270.png)
ಮುಂದೆ ಇನ್ನಷ್ಟು ಮೆಟ್ರೋ ನಿಲ್ದಾಣಗಳಿಗೆ ವಿಸ್ತರಣೆ ಆಗಲಿದೆ. ನೇರಳೆ ಮಾರ್ಗದ ಎಂ. ಜಿ.ರಸ್ತೆ, ಕಬ್ಬನ್ ಪಾರ್ಕ್ ಮೆಟ್ರೋ (Namma Metro) ನಿಲ್ದಾಣದ ಕಾನ್ ಹಂತದಲ್ಲಿ ಒಟ್ಟಾರೆ 14 ಟಿಕೆಟ್ ಯಂತ್ರ ಇಡಲಾಗಿದೆ ಎಂದು ‘ಕನ್ನಡಪ್ರಭ’ ವರದಿ ಮಾಡಿದೆ.
ಈ ಕ್ಯೂಆರ್ ಕೋಡ್ ಮೆಷಿನ್ ಮೂಲಕ ಪ್ರಯಾಣಿಕರು ತಮಗೆ ಬೇಕಾದ ನಿಲ್ದಾಣ ಆಯ್ಕೆ ಮಾಡಿಕೊಂಡು ಯಾವುದೇ ಪೇಮೆಂಟ್ ಆ್ಯಪ್ ಮೂಲಕ ದರ ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ. ಇಲ್ಲಿ ಕೆಲವೇ ಕ್ಷಣದಲ್ಲಿ ಟಿಕೆಟ್ ಪಡೆಯಬಹುದು. ಈಗಾಗಲೇ ವಾಟ್ಸಾಪ್‌ನಲ್ಲೂ ಟಿಕೆಟ್ ಪಡೆಯುವ ಅವಕಾಶ ನೀಡಲಾಗಿದೆ. ಅಲ್ಲಿ ಒಂದಿಷ್ಟು ನಿಬಂಧನೆಗಳಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವುದು ಇದೆ. ಆದರೆ, ಕ್ಯೂಆರ್ ಕೋಡ್ ಯಂತ್ರದ ಮೂಲಕ ಸುಲಭವಾಗಿ ಟಿಕೆಟ್ ಪಡೆಯಬಹುದಾಗಿದೆ.
ಶೇಕಡಾ 5 ರಿಯಾಯಿತಿ
ಇದಲ್ಲದೇ, ನೇರವಾಗಿ ನಗದು ಕೊಟ್ಟು ಟಿಕೆಟ್ ಪಡೆಯುವ ಮೂಲಕ ಹಾಗೂ ಮೆಟ್ರೋ ಕಾರ್ಡ್ ಬಳಸಿಯೂ ಪಯಣ ಬೆಳೆಸಬಹುದಾಗಿದೆ. ಆದರೆ, ಈ ಹೊಸ ವಿಧಾನ ಇನ್ನಷ್ಟು ಸುಧಾರಿತ ಕ್ರಮವಾಗಿದ್ದರಿಂದ ಜನರಿಗೆ ಭಾರೀ ಅನುಕೂಲ ಆಗಲಿದೆ. ಅಲ್ಲದೇ, ಕ್ಯೂಆರ್ ಟಿಕೆಟ್ ಪಡೆಯುವವರು ಶೇಕಡಾ 5 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಟಿಕೆಟ್ ಪಡೆಯುವುದು ಹೀಗೆ
ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಟಿಕೆಟ್ ಖರೀದಿ ಮಾಡಲು ಆಯ್ಕೆ ನೀಡಲಾಗಿದೆ. ನಿಲ್ದಾಣ ಅಥವಾ ನಿಲ್ದಾಣದ ಕೋಡನ್ನು ಕೇಳುತ್ತದೆ. ಆಯ್ಕೆ ಮಾಡಿದ ಬಳಿಕ ಪ್ರಯಾಣಿಕರ ಸಂಖ್ಯೆಯ ಆಯ್ಕೆ ತೋರಿ ಸುತ್ತದೆ. ಬಳಿಕ ಪಾವತಿಸಬೇಕಾದ ಮೊತ್ತ ಹಾಗೂ ಸ್ಕ್ಯಾನ್ ಮಾಡಬೇಕಾದ ಕ್ಯೂ ಆರ್ ಕೋಡ್ ಬಿತ್ತರವಾಗಲಿದೆ. ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಿದ ಬಳಿಕ ಕ್ಯೂ ಆರ್ ಪೇಪರ್ ಟಿಕೆಟ್ ಸಿಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1