Crime News: ಆಂಧ್ರದಲ್ಲಿ ವೈದ್ಯರ ಕುಟುಂಬದ ಐವರ ನಿಗೂಢ ಸಾವು

ಆಂಧ್ರಪ್ರದೇಶದ ವೈದ್ಯರೊಬ್ಬರು ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ವಿಜಯವಾಡದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಾವಿಗೆ ಆತ್ಮಹತ್ಯೆ ಕಾರಣವೋ ಅಥವಾ ಅವರನ್ನು ಯಾರಾದರೂ ಕೊಲೆ ಮಾಡಿದ್ದಾರೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ (Vijayawada) ದಾರುಣ ಘಟನೆಯೊಂದು ನಡೆದಿದೆ. ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಇದು ಅನುಮಾನ ಸೃಷ್ಟಿಸಿದೆ. ಈ ಅನುಮಾನಾಸ್ಪದ ಸಾವಿನ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ವೈದ್ಯರಾದ ಡಾ. ಶ್ರೀನಿವಾಸ್ ಶವವಾಗಿ ಪತ್ತೆಯಾಗಿದ್ದು (Dead body), ಮನೆಯಲ್ಲಿ ಅವರ ಪತ್ನಿ, ಮಕ್ಕಳು, ತಾಯಿಯ ಹೆಣವೂ ಪತ್ತೆಯಾಗಿದೆ.

ಡಾ. ಶ್ರೀನಿವಾಸ್ ಎಂಬ ವೈದ್ಯ ತನ್ನ ಮನೆಯ ಹೊರಗೆ, ಅಂಗಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯೊಳಗೆ ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯ ಶವಗಳು ರಕ್ತದ ಮಡುವಿನಲ್ಲಿ ಪತ್ತೆಯಾಗಿವೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಪ್ರಕಾರ, ಗುರುನಾನಕ್ ನಗರದಲ್ಲಿ ಈ ಘಟನೆ ನಡೆದಿದ್ದು, ಡಾ. ಶ್ರೀನಿವಾಸ್ ತಮ್ಮ ಮನೆಯ ಹೊರಗಿನ ಅಂಗಳದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಡಾ.ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಟುಂಬದ ಇತರ ನಾಲ್ವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಬೇರೆ ಏನಾದರೂ ವಿಷಯವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ ಹಾಗೂ ಸುಳಿವು ತಂಡ ಮನೆಯಿಂದ ಸಾಕ್ಷ್ಯ ಸಂಗ್ರಹಿಸಿದೆ.

ಪೊಲೀಸರು ರಕ್ತದಿಂದ ಕೂಡಿದ್ದ ಚೂರಿಯನ್ನು ವಶಪಡಿಸಿಕೊಂಡಿದ್ದಾರೆ. ಡಾ. ಶ್ರೀನಿವಾಸ್ ಅವರು ಬರೆದಿ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ನನ್ನ ಸಹೋದರನಿಗೆ ಕಾರಿನ ಕೀಗಳನ್ನು ನೀಡಿ” ಎಂದು ಬರೆಯಲಾಗಿದೆ. ಅವರ ಕಾರಿನಲ್ಲಿದ್ದ ಬ್ಯಾಗನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತರನ್ನು ಡಾ.ಡಿ.ಶ್ರೀನಿವಾಸ್ (40), ಅವರ ಪತ್ನಿ ಉಷಾರಾಣಿ (36), ಅವರ ಮಕ್ಕಳಾದ ಶೈಲಜಾ (9), ಶ್ರೀಹಾನ್ (5), ಮತ್ತು ಶ್ರೀನಿವಾಸ್ ಅವರ ತಾಯಿ ರಮಣಮ್ಮ (65) ಎಂದು ಗುರುತಿಸಲಾಗಿದೆ. ಸ್ಥಳೀಯರು ಮತ್ತು ಡಾ. ಶ್ರೀನಿವಾಸ್ ಅವರ ಸ್ನೇಹಿತರ ಪ್ರಕಾರ, ಅವರು ಆಸ್ಪತ್ರೆಯನ್ನು ಹೊಂದಿದ್ದು, ಬಹಳ ಸಾಲ ಮಾಡಿಕೊಂಡಿದ್ದರು. ಇದೇ ಕಾರಣದಿಂದ ಆಸ್ಪತ್ರೆಯನ್ನು ಟ್ರಸ್ಟ್‌ಗೆ ಬಾಡಿಗೆಗೆ ನೀಡಿದ್ದಾರೆ ಎಂಬ ವದಂತಿಯಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಪ್ರಕರಣ ದಾಖಲಾಗಬೇಕಿದೆ.

Source : https://tv9kannada.com/national/crime-news-in-kannada-andhra-pradesh-doctor-and-his-family-found-dead-in-home-sct-824173.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *