IPL 2024, MI vs LSG: ಲಕ್ನೋ ಸೂಪರ್ ಜೈಂಟ್ಸ್ ತಂಡವು 19.2 ಓವರ್ಗೆ 6 ವಿಕೆಟ್ ನಷ್ಟಕ್ಕೆ 145 ರನ್ ಗಹಳಿಸುವ ಮೂಲಕ 4 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಸೋಲಿನಿಂದ ಮುಂಬೈ ಪ್ಲೇಆಫ್ ಹಾದಿ ಬಹುತೇಕ ಮುಚ್ಚಿದಂತಾಗಿದೆ ಎನ್ನಬಹುದು.
ಐಪಿಎಲ್ 2024ರ 48ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG vs MI) ನಡುವೆ ನಡೆಯಿತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಎದುರು ಮುಂಬೈ ಬ್ಯಾಟಿಂಗ್ ವಿಫಲವಾಯಿತು. ಮೊದಲಿಗೆ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ (KL Rahul) ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 19.2 ಓವರ್ಗೆ 6 ವಿಕೆಟ್ ನಷ್ಟಕ್ಕೆ 145 ರನ್ ಗಹಳಿಸುವ ಮೂಲಕ 4 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಸೋಲಿನಿಂದ ಮುಂಬೈ ಪ್ಲೇಆಫ್ ಹಾದಿ ಬಹುತೇಕ ಮುಚ್ಚಿದಂತಾಗಿದೆ ಎನ್ನಬಹುದು.
ಗೆಲುವಿನ ಲಯಕ್ಕೆ ಮರಳಿದ ಲಕ್ನೋ:
ಇನ್ನು, ಚೆನ್ನೈ ವಿರುದ್ಧ ಸತತ 2 ಪಂದ್ಯ ಗೆದ್ದ ಲಕ್ನೋಗೆ ಒಂದು ಸೋಲಿನ ರುಚಿ ಕಂಡಿತ್ತು. ಆದರೆ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮತ್ತೆ ಗೆಲುವಿನ ರುಚಿ ಕಂಡಿದ್ದಾರೆ. ಮುಂಬೈ ನೀಡಿದ 145 ರನ್ ಟಾರ್ಗೆಟ್ ಬೆನ್ನಟ್ಟಿದ ಲಕ್ನೋಗೆ ಇಂಫ್ಯಾಕ್ಟ್ ಪ್ಲೇಯರ್ ಆಗಿ ಆರಂಭಿಕರಾಗಿ ಕಣಕ್ಕಿಳಿದ ಅರ್ಶಿನ್ ಕುಲ್ಕರ್ಣಿ ಶೂನ್ಯಕ್ಕೆ ಔಟ್ ಆದರೆ, ನಾಯಕ ಕೆಎಲ್ ರಾಹುಲ್ 22 ಎಸೆತದಲ್ಲಿ 28 ರನ್ ಗಳಿಸಿದರೆ ಮಾರ್ಕಸ್ ಸ್ಟೋನಿಸ್ 45 ಎಸೆತದಲ್ಲಿ 2 ಸಿಕ್ಸ್ ಮತ್ತು 7 ಫೋರ್ ಮೂಲಕ 62 ರನ್ ಸಿಡಿಸಿದರು. ದೀಪಕ್ ಹೂಡಾ 18 ರನ್, ಅರ್ನರ್ 5 ರನ್, ಆಯೂಶ್ ಬಡೋನಿ 6 ರನ್ ಸಿಡಿಸಿದರು.
ಬ್ಯಾಟಿಂಗ್ನಲ್ಲಿ ಮುಗ್ಗರಿಸಿದ ಮುಂಬೈ:
ಲಕ್ನೋದ ಎಕ್ನಾ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರೆ, ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡುವ ಸವಾಲನ್ನು ಎದುರಿಸಿತು. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕಳಪೆ ಆರಂಭವನ್ನು ಪಡೆಯಿತು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಕಡಿಮೆ ರನ್ ಸ್ಕೋರ್ಗೆ ಔಟ್ ಮಾಡುವಲ್ಲಿ ಲಕ್ನೋ ಬೌಲರ್‌ಗಳು ಯಶಸ್ವಿಯಾದರು. ಈ ಮೂಲಕ ಮುಂಬೈ ತಂಡವು ಪವರ್ ಪ್ಲೇ ಅವದಿಯಲ್ಲಿಯೇ ಪಟಪಟನೇ ವಿಕೆಟ್ ಕಳೆದುಕೊಂಡಿತು. ಈ ಒಂದು ಹಂತದಲ್ಲಿ ತಂಡವು ನೂರ್ ರನ್ ಗಡಿ ದಾಟುವುದೇ ಕಷ್ಟಕರವಾಗಿತ್ತು. ಆದರೂ ಅಂತಿಮವಾಗಿ ಒಂದು ಸಾಧಾರಣ ಮೊತ್ತದ ಟಾರ್ಗೆಟ್ ಸೆಟ್ ಮಾಡುವಲ್ಲಿ ತಂಡ ಯಶಸ್ವಿಯಾಯಿತು. ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 32 ರನ್, ನೇಹಾಲಾ ವಾದ್ರಾ 46 ರನ್, ಟಿಮ್ ಡೇವಿಡ್ 35 ರನ್ ಗಳಿಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳು ಉತ್ತಮ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅದರಲ್ಲಿಯೂ ಇಂದು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಪಡೆದ ರೋಹಿತ್ ಶರ್ಮಾ 4 ರನ್, ಸೂರ್ಯಕುಮಾರ್ ಯಾದವ್ 10 ರನ್, ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟ್ ಆಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಉಳಿಂದತೆ ತಿಲಕ್ ವರ್ಮಾ 7 ರನ್, ಮೊಹಮ್ಮದ್ ನಬಿ 1 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಮಿಂಚಿದ ಲಕ್ನೋ ಬಾಯ್ಸ್:
ಲಕ್ನೋ ಬೌಲರ್‌ಗಳಲ್ಲಿ ಮೋಹಿಮ್ ಖಾನ್ 2 ವಿಕೆಟ್ ಪಡೆದರೆ, ಸ್ಟೋನಿಸ್ 1 ವಿಕೆಟ್, ನವೀನ್ ಉಲ್ ಹಕ್ 1 ವಿಕೆಟ್, ಮಯಾಂಕ್ ಅಗರ್ವಾಲ್ 1 ವಿಕೆಟ್ ಮತ್ತು ರವಿ ಬಿಷ್ಣೋಯ್ 1 ವಿಕೆಟ್ ಪಡೆದರು. ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಲಖನೌ ಗೆಲುವಿಗೆ 145 ರನ್ ಗಳ ಸವಾಲನ್ನು ನೀಡಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1